

ಮಂಡ್ಯ: ನಾಗಮಂಗಲ ತಾಲೂಕಿನ ಎ.ನಾಗತಿಹಳ್ಳಿ ಬಳಿಯ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ಇನೋವಾ ಮತ್ತು ಶ್ವಿಫ್ಟ್ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 5ಕ್ಕೇರಿದೆ.
ಮೃತರನ್ನು ಹಾಸನ ಮೂಲದ ಜಯಂತಿ(60) ಮತ್ತು ಶ್ರೀನಿವಾಸಮೂರ್ತಿ(60), ಪ್ರಭಾಕರ್ (75), ಚೆನ್ನೈ ಮೂಲದ ಕಿಶೋರ್(25) ಎಂದು ಗುರುತಿಸಲಾಗಿದೆ. ಮತ್ತೊಬ್ಬ 40 ವರ್ಷದ ಪುರುಷನಾಗಿದ್ದು, ಗುರುತು ಪತ್ತೆಯಾಗಿಲ್ಲ. ಗೌತಮ್, ಕೆವೀನ್ ಮತ್ತು ಶಬ್ರೀಶ್ ಎಂಬ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಹಾಸನ ಕಡೆಯಿಂದ ಶಿಫ್ಟ್ ಕಾರು ಬರುತ್ತಿತ್ತು. ಬೆಂಗಳೂರು ಕಡೆಯಿಂದ ಇನೋವಾ ಕಾರು ಬರುತ್ತಿತ್ತು. ಎ.ನಾಗತಿಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿದ ಇನೋವಾ ಕಾರು ರಸ್ತೆಯ ಡಿವೈಡರ್ ದಾಟಿ ಶ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ. ಇನೋವಾ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.