

ಬೆಂಗಳೂರು: ದೇಶಾದ್ಯಂತ ಕರೊನಾ ಪರಿಸ್ಥಿತಿ ಕಗ್ಗಂಟಾಗಿಯೇ ಮುಂದುವರಿದಿದ್ದು, ಇವತ್ತೊಂದೇ ದಿನ ರಾಜ್ಯದಲ್ಲಿ 500ಕ್ಕೂ ಅಧಿಕ ಮಂದಿ ಕೋವಿಡ್-19 ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಈ ಮೂಲಕ ಕೋವಿಡ್ನಿಂದಾಗಿ ಇದುವರೆಗೆ ಮೃತಪಟ್ಟವರ ಸಂಖ್ಯೆ 20 ಸಾವಿರ ದಾಟಿದೆ.
ರಾಜ್ಯದಲ್ಲಿ ಕರೊನಾ ಕುರಿತ ಬುಧವಾರದ ಬುಲೆಟಿನ್ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಹೊಸದಾಗಿ 39,998 ಮಂದಿಯಲ್ಲಿ ಕೋವಿಡ್-19 ಪಾಸಿಟಿವ್ ಇರುವುದು ದೃಢಪಟ್ಟಿದ್ದು, ಸೋಂಕಿಗೆ ಒಳಗಾಗಿರುವವರ ಇದುವರೆಗಿನ ಸಂಖ್ಯೆ 20,53,191ಕ್ಕೆ ತಲುಪಿದೆ.
ಆದರೆ ಸದ್ಯ ರಾಜ್ಯದಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 5,92,182 ಮಾತ್ರ. ಇನ್ನು ಒಟ್ಟಾರೆ ಸೋಂಕಿತರ ಪೈಕಿ ಇದುವರೆಗೆ 14,40,621 ಮಂದಿ ಗುಣಮುಖರಾಗಿದ್ದು, ಕಳೆದ 24 ಗಂಟೆಗಳಲ್ಲೇ 34,752 ಜನರು ಸೋಂಕುಮುಕ್ತರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಆಗಿದ್ದಾರೆ. ಆದರೆ ಬುಧವಾರ ಒಂದೇ ದಿನ 517 ಮಂದಿ ಕರೊನಾಗೆ ಬಲಿಯಾಗಿದ್ದು, ಇದುವರೆಗೆ ಕರೊನಾ ಸೋಂಕಿನಿಂದಾಗಿ 20,368 ಮಂದಿ ಸಾವಿಗೀಡಾಗಿದ್ದಾರೆ.