More

    ಶವಗಳು ಹುಟ್ಟುಹಾಕಿದ ಚಿಂತೆ!?: ಕರೊನಾ ಸೋಂಕು ಹರಡುವಿಕೆ ಬಗ್ಗೆ ಕಾಡುತ್ತಿವೆ ಈ 2 ಪ್ರಮುಖ ಪ್ರಶ್ನೆಗಳು!

    ನವದೆಹಲಿ: ಮಿತಿಮೀರಿ ವ್ಯಾಪಿಸುತ್ತಿರುವ ಕೋವಿಡ್​-19 ಸೋಂಕಿನಿಂದಾಗಿ ಕರೊನಾ ಸೋಂಕಿತರ ಸಂಖ್ಯೆಯಷ್ಟೇ ಅಲ್ಲ, ಸೋಂಕಿನಿಂದಾಗಿ ಮೃತಪಡುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಪರಿಣಾಮವಾಗಿ ವೈದ್ಯಕೀಯ ವ್ಯವಸ್ಥೆ ಏರುಪೇರಾಗಿರುವುದಷ್ಟೇ ಅಲ್ಲ, ಶವಸಂಸ್ಕಾರವೂ ಸವಾಲಾಗಿ ಪರಿಣಮಿಸಿದೆ. ಕೆಲವೆಡೆ ಶವಗಳನ್ನು ನದಿಗೆ ಎಸೆಯುತ್ತಿದ್ದು, ನೂರಾರು ಸಂಖ್ಯೆಯಲ್ಲಿ ಮೃತದೇಹಗಳು ಪತ್ತೆಯಾಗಿವೆ. ಈ ವಿದ್ಯಮಾನವೇ ಇದೀಗ ದೊಡ್ಡ ಚಿಂತೆಯನ್ನು ಹುಟ್ಟುಹಾಕಿದೆ.

    ಉತ್ತರ ಪ್ರದೇಶ ಹಾಗೂ ಬಿಹಾರಗಳಲ್ಲಿ, ಗಂಗಾ ನದಿಯಲ್ಲಿ ಶವಗಳು ತೇಲಿ ಬರುತ್ತಿರುವುದು ಪತ್ತೆಯಾಗಿದ್ದು, ಸ್ಥಳೀಯ ವರದಿಗಳ ಪ್ರಕಾರ ಇದುವರೆಗೂ ನೂರಕ್ಕೂ ಅಧಿಕ ಮೃತದೇಹಗಳು ನದಿನೀರಿನಲ್ಲಿ ತೇಲಿಬಂದಿವೆ. ಇದೀಗ ಸ್ಥಳೀಯರಷ್ಟೇ ಅಲ್ಲದೆ, ದೇಶದ ಹಲವರಿಗೆ 2 ಪ್ರಮುಖ ಪ್ರಶ್ನೆಗಳನ್ನು ಹುಟ್ಟುಹಾಕುವ ಮೂಲಕ ಚಿಂತೆಗೀಡಾಗುವಂತೆಯೂ ಮಾಡಿದೆ.

    ಹೀಗೆ ತೇಲಿಬಂದಿರುವ ಕರೊನಾ ಸೋಂಕಿತ ಶವಗಳು, ಮೃತದೇಹಗಳಿಂದ ಕರೊನಾ ಹರಡುತ್ತದೆಯೇ ಹಾಗೂ ನೀರಿನಲ್ಲಿಯೂ ಕರೊನಾ ಹರಡುತ್ತದೆಯೇ ಎಂಬೆರಡು ಪ್ರಮುಖ ಪ್ರಶ್ನೆಗಳನ್ನು ಮೂಡಿಸಿವೆ. ಹಲವಾರು ಪರಿಣತರು ಶವದ ಮೂಲಕ ಕರೊನಾ ಸೋಂಕು ಹರಡುವ ಸಾಧ್ಯತೆ ಇಲ್ಲ ಎಂದಿದ್ದರೂ ಶವಗಳ ವಿಲೇವಾರಿಯಲ್ಲಿ ಈಗಲೂ ಎಚ್ಚರಿಕೆ ವಹಿಸಲಾಗುತ್ತಿದೆ. ಮತ್ತೊಂದೆಡೆ ಶವಗಳ ವಿಲೇ ಸಂದರ್ಭ ಸೋಂಕು ಹರಡುವ ಸಾಧ್ಯತೆ ಇದೆ, ಆ ಸಂದರ್ಭದಲ್ಲಿ ಜಾಗರೂಕರಾಗಿರಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಎಐಐಎಂಎಸ್​ ತಿಳಿಸಿವೆ. ಹೀಗಾಗಿ ಶವಗಳ ಮೂಲಕ ಸೋಂಕು ಹರಡುವ ಕುರಿತಂತೆ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ.

    ಇದನ್ನೂ ಓದಿ: ‘ತಂದೆ ಕಾಣೆಯಾಗಿದ್ದಾರೆ, ಹುಡುಕಿಕೊಡಿ ಪ್ಲೀಸ್​.. ಲಾಕ್​ಡೌನ್​ನಿಂದ ಹೊರಗೆ ಹೋಗಲಾಗುತ್ತಿಲ್ಲ, ಸಹಾಯ ಮಾಡಿ: ಪುತ್ರನ ವಿನಂತಿ

    ಇನ್ನು ಕೋವಿಡ್-19 ಉಂಟುಮಾಡುವ SARS-CoV-2 ಕೆಮ್ಮುವುದು, ಸೀನುವುದು, ಮಾತಾಡುವುದು ಹಾಗೂ ಉಸಿರಾಡುವಾಗ ಹಾರುವ ಶ್ವಾಸದ ದ್ರವಾಂಶದ ಮೂಲಕ ಹರಡುತ್ತವೆ ಎಂದು ಕೆಲವು ಪರಿಣತ ಏಜೆನ್ಸಿಗಳು ತಿಳಿಸಿವೆ. ಈ ಡ್ರಾಪ್​ಲೆಟ್​ಗಳು ಎರಡು ಮೀಟರ್ ದೂರದವರೆಗೂ ಗಾಳಿಯಲ್ಲಿ ಸಾಗಬಲ್ಲವು ಎನ್ನಲಾಗಿದೆ. ಅಂದರೆ ಇದರರ್ಥ ಕರೊನಾ ವೈರಸ್​ ದ್ರವಾಂಶದಲ್ಲಿ ಸುರಕ್ಷಿತವಾಗಿರುತ್ತದೆ ಎಂದಾಯಿತು. ಅದಾಗ್ಯೂ ಹರಿಯುವ ನೀರು ಅಥವಾ ಸ್ವಿಮ್ಮಿಂಗ್ ಪೂಲ್​ನ ನೀರಿನಲ್ಲಿ ಕರೊನಾ ವೈರಸ್ ಹರಡುತ್ತದೆ ಎಂಬುದಕ್ಕೆ ಇನ್ನೂ ಆಧಾರಗಳು ಸಿಕ್ಕಿಲ್ಲ. ಆದರೆ ನೀರಿನಲ್ಲಿ ಸೋಂಕಿತ ವ್ಯಕ್ತಿ ಜತೆ ತೀರಾ ನಿಕಟ ಸಂಪರ್ಕಕ್ಕೆ ಬಂದರೆ ಸೋಂಕು ತಗುಲುತ್ತದೆ. ಇನ್ನು ಕೆಲವು ಅಧ್ಯಯನಗಳ ಪ್ರಕಾರ SARS-CoV-2 ನದಿ ಹಾಗೂ ತ್ಯಾಜ್ಯನೀರಿನಲ್ಲಿ ಕಂಡುಬಂದಿರುವುದು ಇದೆಯಾದರೂ ಅವುಗಳ ಹರಡುವಿಕೆ ಸಾಮರ್ಥ್ಯ ಇನ್ನೂ ಸಾಬೀತಾಗಿಲ್ಲ. ಹೀಗಾಗಿ ನದಿ ನೀರಿನಲ್ಲಿ ತೇಲಿಬಂದಿರುವ ಶವಗಳು ಹುಟ್ಟುಹಾಕಿರುವ ಎರಡು ಪ್ರಶ್ನೆಗಳು ಸದ್ಯಕ್ಕೆ ಪ್ರಶ್ನೆಗಳಾಗಿಯೇ ಇರುವುದರಿಂದ ಚಿಂತಿಸುವಂತೆ ಮಾಡಿವೆ.

    ಸೋಂಕಿತ ಹಿಂದು ವೃದ್ಧೆಯ ಶವಸಂಸ್ಕಾರಕ್ಕೆ ಹಿಂಜರಿದ ಸಂಬಂಧಿಕರು; ಕೊನೆಗೆ ಮುಸ್ಲಿಂ ಯುವಕರಿಂದ ಅಂತಿಮಸಂಸ್ಕಾರ

    ಸೋಂಕಿತ ತಾಯಿ ತೀರಿಹೋದ ಮೂರೇ ದಿನಕ್ಕೆ ಅಣ್ಣ-ತಮ್ಮನೂ ಕರೊನಾಗೆ ಬಲಿ; ಅಮ್ಮಂದಿರ ದಿನವೇ ಇಬ್ಬರೂ ಏಕಕಾಲಕ್ಕೇ ನಿಧನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts