'ತಂದೆ ಕಾಣೆಯಾಗಿದ್ದಾರೆ, ಹುಡುಕಿಕೊಡಿ ಪ್ಲೀಸ್​.. ಲಾಕ್​ಡೌನ್​ನಿಂದ ಹೊರಗೆ ಹೋಗಲಾಗುತ್ತಿಲ್ಲ, ಸಹಾಯ ಮಾಡಿ: ಪುತ್ರನ ವಿನಂತಿ

Shekhar
Published on

ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಕರ್ಫ್ಯೂ ಸಂದರ್ಭದಲ್ಲಿ ಕಾಣೆಯಾಗಿರುವ ತನ್ನ ತಂದೆಯ ಬಗ್ಗೆ ಯುವಕನೊಬ್ಬ ಪರಿತಪಿಸುತ್ತಿದ್ದು, ಹುಡುಕಿಕೊಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾನೆ. ಈಗಾಗಲೇ ಇರುವ ಕರ್ಫ್ಯೂ, ಸೋಮವಾರದಿಂದ ಜಾರಿಯಾಗಲಿರುವ ಲಾಕ್​ಡೌನ್​ ಹಿನ್ನೆಲೆಯಲ್ಲಿ ಈಗಿನಿಂದಲೇ ಜಾರಿಯಾಗಿರುವ ಕಟ್ಟುನಿಟ್ಟಿನ ಕ್ರಮದಿಂದಾಗಿ ಹೊರಗೆ ಹೋಗಿ ಹುಡುಕಲು ಸಾಧ್ಯವಾಗುತ್ತಿಲ್ಲ ಎಂದು ಪುತ್ರನೊಬ್ಬ ಮನವಿ ಮಾಡಿಕೊಂಡಿದ್ದಾನೆ.

ಯುವಕನ ಮನವಿ ಹೀಗಿದೆ...

ಆತ್ಮೀಯ ಸ್ನೇಹಿತರೆ,
ನನ್ನ ತಂದೆಯವರಾದ 63 ವರ್ಷದ ಆರ್. ಶೇಖರ್ ಅವರು ಸುಮಾರು 20 ವರ್ಷಗಳಿಂದ ಬೆಂಗಳೂರಿನಲ್ಲಿ (ವಿಳಾಸ #795, ಮೊದಲ ಮಹಡಿ, 1ನೇ ಎ ಮುಖ್ಯರಸ್ತೆ, ವೈಯಾಲಿಕಾವಲ್) ಕುಟುಂಬ ಸಮೇತವಾಗಿ ವಾಸವಿದ್ದು, ಇವರಿಗೆ ಒಂದು ವರ್ಷದ ಮುಂಚೆ ಎರಡು ಬಾರಿ ಟ್ಯೂಮರ್ ಸರ್ಜರಿಯಾಗಿದ್ದು ಮಾನಸಿಕ ಸ್ಥಿಮಿತ ಕಳೆದುಕೊಂಡಿರುತ್ತಾರೆ. ಅಂದಿನಿಂದ ಮನೆಯಲ್ಲೇ ವೈದ್ಯರ ಸಲಹೆ ಸೂಚನೆಗಳಂತೆ ಮಗುವಿನ ರೀತಿ ಜೋಪಾನ ಮಾಡಿ ಅಗತ್ಯ ಎಚ್ಚರಿಕೆ ತೆಗೆದುಕೊಂಡು ಸರಿಯಾದ ಸಮಯಕ್ಕೆ ಮಾತ್ರೆಗಳನ್ನು ನೀಡಿ ಆರೈಕೆ ಮಾಡುತ್ತ ಬಂದಿದ್ದೇವೆ. ಒಂದು ವೇಳೆ ಸರಿಯಾದ ಸಮಯಕ್ಕೆ ಮಾತ್ರೆ ತೆಗೆದುಕೊಂಡಿಲ್ಲವೆಂದರೆ ಅದು ಅವರ ಜೀವಕ್ಕೆ ಅಪಾಯವಿದೆ. ದುರ್ದೈವ ಇದೆ ತಿಂಗಳ ಮೇ 7ರಂದು ಮನೆಯ ಮುಂದೆ ಬೆಳಗ್ಗೆ 8:30ರ ಸಮಯಕ್ಕೆ ಸ್ವಲ್ಪ ವಾಕಿಂಗ್​ಗೆಂದು ತೆರಳಿದವರು ಕಾಣೆಯಾಗಿದ್ದರೆ. ತಕ್ಷಣದಲ್ಲೇ ನಾನು ಸೇರಿ ನಮ್ಮ ಕುಟುಂಬದವರೆಲ್ಲ ಅವರ ಹುಡುಕುವಿಕೆಯಲ್ಲಿ ತೊಡಗಿದರೂ ಲಾಕ್​ಡೌನ್​ನ ಸಂಧಿಗ್ದ ಪರಿಸ್ಥಿತಿಯಲ್ಲಿ ನಮ್ಮಿಂದ ಅವರನ್ನು ಹುಡುಕಲು ಸಾಧ್ಯವಾಗಿಲ್ಲ. ಈ ವಿಚಾರವಾಗಿ ವೈಯಾಲಿಕಾವಲ್ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ದೂರು ಕೂಡ ದಾಖಲಾಗಿದ್ದು (ಎಫ್ಐಆರ್ ಸಂಖ್ಯೆ 0037/2021 ) ಹಾಗೂ ಸ್ಥಳೀಯ ಎಲ್ಲ ಆಸ್ಪತ್ರೆಗಳಿಗೂ ಮಾಹಿತಿ ನೀಡಲಾಗಿದೆ. ಇಲ್ಲಿಯವರೆಗೂ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ಯಾರಾದರೂ ಇವರನ್ನು ಎಲ್ಲಿಯಾದರೂ ನೋಡಿ ಗಮನಿಸಿ ಗುರುತಿಸಿದರೆ ದಯವಿಟ್ಟು ಈ ಕೆಳಗಿನ ಮೊಬೈಲ್​ಫೋನ್​ ನಂಬರಿಗೆ ಕರೆ ಮಾಡಿ ತಿಳಿಸಿ ಎಂದು ಬೇಡಿಕೊಳ್ಳುತ್ತೇನೆ.

ಇಂತಿ ಸುನಿಲ್ ಕುಮಾರ್
ಮೊಬೈಲ್​ಫೋನ್ ನಂ: 9538474546 ಮತ್ತು 8553770675

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net