More

    ಸೋಂಕಿತ ತಾಯಿಯ ಶವಸಂಸ್ಕಾರಕ್ಕೆ ಮುಂದಾದ ಮಗನಿಗೆ ಗ್ರಾಮಸ್ಥರಿಂದ ವಿರೋಧ; ಕಾರಣವೇನು, ಆಮೇಲೇನಾಯಿತು?

    ಆನೇಕಲ್: ಕರೊನಾ ಸೋಂಕಿಗೆ ಒಳಗಾಗಿ ಮೃತಪಟ್ಟ ತಾಯಿಯ ಶವವನ್ನು ಸಂಸ್ಕಾರ ಮಾಡಲು ಮುಂದಾದ ಮಗನಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದು, ಪೊಲೀಸರು ಕೂಡ ಮಧ್ಯಪ್ರವೇಶ ಮಾಡಿ ಮನವೊಲಿಕೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು.

    ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಸಮೀಪದ ಬೇಗಿಹಳ್ಳಿಯಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿನ ನಿವಾಸಿ ಸೀತಾರಾಮ್​ ಅವರ ತಾಯಿ ರತ್ನಮ್ಮ ಕೋವಿಡ್-19 ಸೋಂಕಿಗೆ ಒಳಗಾಗಿ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಅವರ ಶವಸಂಸ್ಕಾರಕ್ಕೆ ಮುಂದಾದಾಗ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿದೆ.

    ಇದನ್ನೂ ಓದಿ: ಕೆಎಎಸ್ ಅಧಿಕಾರಿ ಚೇಂಬರ್‌ನ ವಾಷ್ ರೂಮ್​ನಲ್ಲಿ ದಂಪತಿಯ ಶವ ಪತ್ತೆ; ಭೀಕರವಾಗಿ ಕೊಲೆ ಮಾಡಿದ ಹಂತಕರು…

    ಸೀತಾರಾಮ್ ತಮ್ಮ ಕರೊನಾ ಸೋಂಕಿತ ತಾಯಿಯ ಶವಸಂಸ್ಕಾರವನ್ನು ಮನೆಯ ಪಕ್ಕದ ಜಮೀನಿನಲ್ಲೇ ಮಾಡಲು ಮುಂದಾಗಿದ್ದರಿಂದಾಗಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಇಂದು ಬೆಳಗ್ಗೆ ತಾಯಿ ಮೃತಪಟ್ಟಿದ್ದು, ಬಳಿಕ ಸೀತಾರಾಮ್ ಮನೆ ಸಮೀಪ ಕಟ್ಟಿಗೆ ಜೋಡಿಸಿ ಶವಸಂಸ್ಕಾರಕ್ಕೆ ಮುಂದಾಗಿದ್ದರು.

    ರತ್ನಮ್ಮ ಕರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದರಿಂದ ಅವರ ಶವಸಂಸ್ಕಾರವನ್ನು ಮನೆ ಬಳಿ ಮಾಡಬಾರದು ಎಂದು ಸ್ಥಳೀಯರು ತಗಾದೆ ತೆಗೆದಿದ್ದರಿಂದ, ಕೆಲಕಾಲ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವಿಚಾರ ಪೊಲೀಸ್​ ಠಾಣೆವರೆಗೂ ತಲುಪಿ ಪೊಲೀಸರು, ಸ್ಥಳಕ್ಕೆ ಆಗಮಿಸಿದರು. ನಂತರ ಅವರು ಸೀತಾರಾಮ್ ಮನವೊಲಿಸುವಲ್ಲಿ ಯಶಸ್ವಿಯಾದ್ದರಿಂದ ಸ್ಮಶಾನದಲ್ಲಿ ಶವಸಂಸ್ಕಾರ ನಡೆಯಿತು.

    ಇದನ್ನೂ ಓದಿ: ಮದುವೆ ಮಾಡಿಕೊಂಡಿದ್ದಕ್ಕೆ ವಧು-ವರರ ಮೇಲೆ ಬಿತ್ತು ಕೇಸ್; ಎರಡೂ ಕುಟುಂಬಗಳವರ ವಿರುದ್ಧ ಪ್ರಕರಣ ದಾಖಲು 

    ಆರೋಗ್ಯ ಸಚಿವರ ಕ್ಷೇತ್ರದಲ್ಲೇ ಆಕ್ಸಿಜನ್ ಸಿಲಿಂಡರ್ ಕಳ್ಳತನ; ಆಸ್ಪತ್ರೆ ಸಿಬ್ಬಂದಿಯ ಕೈವಾಡ ಶಂಕೆ!

    ಅಪ್ಪ ಸತ್ತ 4 ದಿನಕ್ಕೆ ಅಮ್ಮನೂ ಕೋವಿಡ್​ಗೆ ಬಲಿ! ಅಂತ್ಯಸಂಸ್ಕಾರಕ್ಕೆ ಹಣ ಇಲ್ಲದೆ ಪುಟ್ಟ ಮಗಳೇ ಗುಂಡಿ ಅಗೆದು ಕಾರ್ಯ ಮುಗಿಸಿದ್ಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts