More

    ಕೆಎಎಸ್ ಅಧಿಕಾರಿ ಚೇಂಬರ್‌ನ ವಾಷ್ ರೂಮ್​ನಲ್ಲಿ ದಂಪತಿಯ ಶವ ಪತ್ತೆ; ಭೀಕರವಾಗಿ ಕೊಲೆ ಮಾಡಿದ ಹಂತಕರು…

    ಬೆಂಗಳೂರು: ಪೀಣ್ಯ ಕರಿಬೊಮ್ಮನಹಳ್ಳಿಯಲ್ಲಿರುವ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯಲ್ಲಿ ದಂಪತಿಗಳಿಬ್ಬರ ಶವವು ಕೊಲೆಯಾದ ರೀತಿಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ಕರಿಬೊಮ್ಮನಹಳ್ಳಿ ನಿವಾಸಿ ಹನುಮಂತರಾಯ (41) ಹೊನ್ನಮ್ಮ (34) ದಂಪತಿ ಮೃತರಾದವರು.

    ಹನುಮಂತರಾಯ ಕೆಲ ವರ್ಷಗಳಿಂದ ಪೀಣ್ಯ ಸಮೀಪದ ಕರಿಬೊಮ್ಮನಹಳ್ಳಿಯ ಬೃಂದಾವನ ನಗರದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಇವರ ಪತ್ನಿ ಹೊನ್ನಮ್ಮ ಇದೇ ಕಚೇರಿಯಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದರು. ತಾವು ಕೆಲಸ ಮಾಡುತ್ತಿದ್ದ ಕಚೇರಿ ಸಮೀಪದ ಶೆಡ್‌ನಲ್ಲಿ ಮಗನೊಂದಿಗೆ ವಾಸಿಸುತ್ತಿದ್ದರು. ಹೆಚ್ಚಾಗಿ ದಂಪತಿ ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿ ಮಲಗುತ್ತಿದ್ದರು. ಬೆಳಗ್ಗೆ ಶೆಡ್‌ಗೆ ಬರುತ್ತಿದ್ದರು. ಗುರುವಾರ ಮನೆಗೆ ಬಂದಿರಲಿಲ್ಲ. ಮಗ ಆಕಾಶ್ ಕಚೇರಿಗೆ ಬಂದು ನೋಡಿದಾಗ ಬೀಗ ಹಾಕಿರುವುದು ಕಂಡು ಬಂದಿತ್ತು. ಅನುಮಾನಗೊಂಡು ಪಾಲಕರು ನಾಪತ್ತೆಯಾಗಿರುವ ಬಗ್ಗೆ ಪೀಣ್ಯ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದ.

    ಇದನ್ನೂ ಓದಿ: ಭಾರತಕ್ಕೆ ಕರೊನಾ ಮೂರನೇ ಅಲೆ ಪ್ರವೇಶ ಯಾವತ್ತು ಗೊತ್ತಾ?; ಇಲ್ಲಿದೆ ನೋಡಿ ಮಾಹಿತಿ…

    ಪೀಣ್ಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬಾಗಿಲು ಮುರಿದು ಒಳಪ್ರವೇಶಿದಾಗ ಹನುಂತರಾಯ ದಂಪತಿ ಶವ ಕೆಎಎಸ್ ಅಧಿಕಾರಿ ಚೇಂಬರ್‌ನ ವಾಷ್ ರೂಂನಲ್ಲಿ ಭೀಕರವಾಗಿ ಹತ್ಯೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

    ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯಲ್ಲಿ ಮೃತ ದಂಪತಿ ಸೆಕ್ಯುರಿಟಿ ಗಾರ್ಡ್ ಹಾಗೂ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಇಬ್ಬರನ್ನು ಕಚೇರಿಯ ಹಾಲ್​ನಲ್ಲಿ ಕೊಲೆಗೈದು, ಕೆಎಎಸ್ ಅಧಿಕಾರಿ ಚೇಂಬರ್‌ನ ವಾಷ್ ರೂಮ್​ನಲ್ಲಿ ಮೃತದೇಹ ಎಸೆಯಲಾಗಿದೆ. ಮೃತರ ತಲೆಗೆ ಬಲವಾದ ಗಾಯಗಳಿದ್ದು, ಸದ್ಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ತಿಳಿಸಿದ್ದಾರೆ.

    ಅಮ್ಮ ಬದುಕಬೇಕಿದ್ರೆ ವೆಂಟಿಲೇಟರ್ ಅಗತ್ಯ, ದಯವಿಟ್ಟು ಕೊಡಿಸಿ: ಸಚಿವರಿಗೆ ಕೈಮುಗಿದು ಬೇಡಿಕೊಂಡ ಯುವಕ

    ಮದುವೆ ಆಗು ಎಂದು ಒತ್ತಾಯಿಸಿದ ಇಬ್ಬರಿಗೂ ಒಲ್ಲೆ ಎಂದಳು; ಎರಡು ಗುಂಡೇಟಿಗೆ ಹೆಣವಾಗಿ ಉರುಳಿದಳು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts