More

    ಭಾರತಕ್ಕೆ ಕರೊನಾ ಮೂರನೇ ಅಲೆ ಪ್ರವೇಶ ಯಾವತ್ತು ಗೊತ್ತಾ?; ಇಲ್ಲಿದೆ ನೋಡಿ ಮಾಹಿತಿ…

    ನವದೆಹಲಿ: ಭಾರತದಲ್ಲಿ ಸದ್ಯ ಕರೊನಾ ಎರಡನೇ ಅಲೆಯ ಹೊಡೆತವನ್ನೇ ತಡೆದುಕೊಳ್ಳಲು ಆಗುತ್ತಿಲ್ಲ. ಅದು ಈಗಾಗಲೇ ಸಾಕಷ್ಟು ಸಾವು-ನೋವು, ನಷ್ಟವನ್ನು ಉಂಟುಮಾಡಿದೆ. ಹೀಗಿರುವಾಗ ಮೂರನೇ ಅಲೆ ಬರಲಿರುವ ಬಗ್ಗೆ ಪರಿಣತರು ಈ ಹಿಂದೆಯೇ ಸುಳಿವು ನೀಡಿದ್ದಾರೆ. ಆ ಮೂರನೇ ಅಲೆ ಭಾರತಕ್ಕೆ ಯಾವಾಗ ಪ್ರವೇಶ ಮಾಡಲಿದೆ ಎಂಬ ಬಗ್ಗೆಯೂ ಈಗ ಮಾಹಿತಿ ಹೊರಬಿದ್ದಿದೆ.

    ರಾಜ್ಯದಲ್ಲಿರುವ ನ್ಯಾಷನಲ್​ ಕೋವಿಡ್ ಟಾಸ್ಕ್​ಫೋರ್ಸ್​ನ ಸದಸ್ಯ ಹಾಗೂ ಸಲಹೆಗಾರ, ಇಂಡಿಯನ್ ಇನ್​ಸ್ಟಿಟ್ಯೂಟ್​ ಆಫ್​ ಪಬ್ಲಿಕ್ ಹೆಲ್ತ್​ನ ಪ್ರಾಧ್ಯಾಪಕ ಡಾ. ಗಿರಿಧರ್ ಬಾಬು ಅವರು ಕರೊನಾ ಮೂರನೇ ಅಲೆಯ ಪ್ರವೇಶದ ಅವಧಿ ಕುರಿತು ಮಾಹಿತಿ ನೀಡಿದ್ದಾರೆ. ಮಾತ್ರವಲ್ಲ, ಅದರಿಂದ ಹೆಚ್ಚಿನ ತೊಂದರೆ ಆಗದಂತೆ ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆಯೂ ತಿಳಿಸಿದ್ದಾರೆ.

    ಇದನ್ನೂ ಓದಿ: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ‌ ಮತ್ತೊಂದು ಎಡವಟ್ಟು; ನಾಪತ್ತೆಯಾಗಿದ್ದ ಸೋಂಕಿತನ ಮೃತದೇಹ ಆಸ್ಪತ್ರೆ ಶವಾಗಾರದಲ್ಲೇ ಪತ್ತೆ!

    ಬಹುಶಃ ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ಆರಂಭದಲ್ಲಿ ಕರೊನಾ ಮೂರನೇ ಅಲೆಯು ಭಾರತವನ್ನು ಪ್ರವೇಶ ಮಾಡಲಿದೆ ಎಂಬುದನ್ನು ಅವರು ತಿಳಿಸಿದ್ದಾರೆ. ಮೂರನೇ ಅಲೆ ಯುವಪೀಳಿಗೆಯನ್ನೇ ಹೆಚ್ಚು ಬಾಧಿಸಲಿದೆ ಎಂಬ ಮುನ್ನೆಚ್ಚರಿಕೆಯನ್ನೂ ನೀಡಿರುವ ಅವರು, ಸೋಂಕಿಗೆ ಒಳಗಾಗುವ ಸಾಧ್ಯತೆ ಅಧಿಕವಾಗಿ ಇರುವವರು ಅಷ್ಟರೊಳಗೆ ಲಸಿಕೆಯನ್ನು ಪಡೆದುಕೊಂಡಲ್ಲಿ ಸಂಭಾವ್ಯ ಸಂಕಷ್ಟವನ್ನು ಆದಷ್ಟೂ ಮಟ್ಟಿಗೆ ತಡೆಯಬಹುದು ಎಂಬ ಸಲಹೆಯನ್ನೂ ನೀಡಿದ್ದಾರೆ. (ಏಜೆನ್ಸೀಸ್​)

    ಕಡಿಮೆ ಬಡ್ಡಿ ಹೆಸರಲ್ಲಿ 7 ಕೋಟಿ ರೂ. ಗುಳುಂ: ಈ ‘ಗೋಲ್ಡ್‌ ಮ್ಯಾನ್‌’ಗಿದ್ದಾರೆ ಸಿಕ್ಕಾಪಟ್ಟೆ ಫಾಲೋವರ್ಸ್‌!

    ಡಿಸೆಂಬರ್‌ವರೆಗೂ ಇರುತ್ತೆ ಈ ಕರೊನಾ ಕಾಟ: ಎಚ್ಚರಿಕೆ ನೀಡಿದ ಡಾ. ಮಂಜುನಾಥ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts