More

    ಡಿಸೆಂಬರ್‌ವರೆಗೂ ಇರುತ್ತೆ ಈ ಕರೊನಾ ಕಾಟ: ಎಚ್ಚರಿಕೆ ನೀಡಿದ ಡಾ. ಮಂಜುನಾಥ್

    ಬೆಂಗಳೂರು: ಕೋವಿಡ್ 2ನೇ ಅಲೆ ಉಪಟಳ ಹಿನ್ನೆಲೆಯಲ್ಲಿ ಡಿಸೆಂಬರ್‌ವರೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಲು ಎಲ್ಲರೂ ಮುಂದಾಗಬೇಕು ಎಂದು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ‘ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರಿಗೆ ಇರಬೇಕಾದ ಮುನ್ನೆಚ್ಚರಿಕೆ’ ವಿಷಯವಾಗಿ ಏರ್ಪಡಿಸಿದ್ದ ವೆಬಿನಾರ್‌ನಲ್ಲಿ ಮಾತನಾಡಿ, ಜೂನ್‌ನಲ್ಲಿ 2ನೇ ಅಲೆ ತೀವ್ರತೆ ಕಡಿಮೆ ಆಗಬಹುದು ಎನ್ನುವ ಅಂದಾಜಿದೆ ಎಂದರು. ದೇಶದಲ್ಲಿ ನಿತ್ಯವೂ 4 ಲಕ್ಷ ಸೋಂಕು ಕಾಣಿಸಿಕೊಳ್ಳುತ್ತಿದ್ದು, ನಾವು ಬ್ರೆಜಿಲ್, ಅಮೆರಿಕಗಳನ್ನು ಹಿಂದಿಕ್ಕಿದ್ದೇವೆ. ರಾಜ್ಯದ ಸೋಂಕಿತರಲ್ಲಿ ಶೇ.70 ಮಂದಿ ಬೆಂಗಳೂರಿಗರೇ ಆಗಿದ್ದಾರೆ. ಪ್ರತಿ ಐವರಲ್ಲಿ ಒಬ್ಬರಿಗೆ ಸೋಂಕು ಇರುವುದು ಧೃಢವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.

    ವೈದ್ಯಕೀಯ ಕ್ಷೇತ್ರ, ಪತ್ರಿಕೋದ್ಯಮ ಸೇರಿ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ತಮ್ಮನ್ನು ತಾವೇ ಸ್ಪರ್ಧೆಗೆ ಒಡ್ಡಿಕೊಳ್ಳುವ ಅನಿವಾರ್ಯತೆ ಎದುರಿಸುತ್ತಿರುತ್ತಾರೆ. ಇಂತಹ ಸ್ಪರ್ಧಾತ್ಮಕ ಹಾಗೂ ಒತ್ತಡದ ಕೆಲಸಗಳು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡದಂತೆ ಮಾಡುವುದರಿಂದ ಅಪಾಯಕ್ಕೆ ದೂಡಿಕೊಳ್ಳುವ ಸಾಧ್ಯತೆ ಇರುತ್ತದೆ. ಬಹುತೇಕ ಯುವಕರೇ ಇಂತಹ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮಗಳು ಬಹಳ ಮುಖ್ಯ. ಈ ಬಗ್ಗೆ ಯಾರೂ ನಿರ್ಲಕ್ಷ್ಯ ಮಾಡಬಾರದು ಎಂದು ಸಲಹೆ ನೀಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂದ ಅಧ್ಯಕ್ಷ ಶಿವಾನಂದ ತಗಡೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಪತ್ರಕರ್ತರಾದ ಶೇಷಚಂದ್ರಿಕಾ, ಜಿ.ಎನ್. ಮೋಹನ್, ನಿರ್ಮಲಾ ಎಲಿಗಾರ್, ಶಾಂತಲಾ ಧರ್ಮರಾಜ್, ಆಯೇಷಾ ಖಾನಂ, ಕೆ.ವಿ. ಪರಮೇಶ್, ಲಕ್ಷ್ಮೀನಾರಾಯಣ ಮತ್ತಿತರರು ಸಂವಾದದಲ್ಲಿ ಭಾಗವಹಿಸಿದ್ದರು.

    ಪ್ರತಿಯೊಬ್ಬರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಇದು ರೋಗನಿರೋಧಕ ಶಕ್ತಿಯನ್ನು ವೃದ್ಧಿ ಮಾಡುತ್ತದೆ. ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಎದುರಾಗುವುದಿಲ್ಲ. ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಮಾಡಿಕೊಳ್ಳುವುದು ನಮ್ಮ ಬದುಕಿನ ಭಾಗವಾಗಬೇಕು.

    | ಡಾ.ಸಿ.ಎನ್.ಮಂಜುನಾಥ್  ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ

    ಆತ್ಮವಿಶ್ವಾಸವೂ ರೋಗಕ್ಕೆ ಮದ್ದು

    ಮಾಧ್ಯಮದವರು ಧಾವಂತದಲ್ಲಿ ಕೆಲಸ ಮಾಡುವುದನ್ನು ನಾನು ಗಮನಿಸಿದ್ದೇನೆ. ಈಗ ಕೋವಿಡ್ ಕಾರಣಕ್ಕೆ ಪರಿಸ್ಥಿತಿ ಸೂಕ್ಷ್ಮ ಮತ್ತು ಆತಂಕಕಾರಿಯಾಗಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಈ ಹೊತ್ತಿನಲ್ಲಿ ಜನರ ಆತ್ಮವಿಶ್ವಾಸ ಹೆಚ್ಚಿಸುವ ವರದಿಗಳು ಬೇಕು. ‘ಔಷಧದಿಂದಲೇ ಎಲ್ಲವೂ’ ಎನ್ನುವುದಕ್ಕಿಂತ ಆತ್ಮವಿಶ್ವಾಸ ಕೂಡ ರೋಗ ವಾಸಿಯಾಗುವುದಕ್ಕೆ ಪ್ರಮುಖ ಪಾತ್ರವಹಿಸುತ್ತದೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ಹೆಚ್ಚಿನ ಬೆಳಕು ಚೆಲ್ಲಲಿ ಎಂದು ಡಾ.ಸಿ.ಎನ್. ಮಂಜುನಾಥ್ ಹೇಳಿದರು.

    ಇವತ್ತೊಂದೇ ದಿನ 217 ಮಂದಿ ಕೋವಿಡ್‌ಗೆ ಬಲಿ, ಇಂದು 48 ಸಾವಿರ ಕರೊನಾ ಕೇಸ್‌; ನಿನ್ನೆಗಿಂತ 13 ಸಾವಿರ ಹೆಚ್ಚಳ!

    ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಕರೊನಾ ಆಘಾತ; ‘ನೆಮ್ಮದಿಯಾಗಿ ನಿದ್ರಿಸಿ’ ಎಂದವರು ಚಿರನಿದ್ರೆಗೆ…

    ಮಂತ್ರಾಲಯ ಸ್ವಾಮೀಜಿಯವರ ಆಪ್ತ ಕಾರ್ಯದರ್ಶಿ ಇನ್ನಿಲ್ಲ; ಎಸ್‌.ಎನ್. ಸುಯಮೀಂದ್ರಾಚಾರ್‌ ಕೋವಿಡ್‌ಗೆ ಬಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts