More

    ಮತಯಂತ್ರಗಳ ಕೊಠಡಿಗಳಿಗೆ ಬಿಗಿ ಬಂದೋಬಸ್ತ್

    ಬಳ್ಳಾರಿ – ವಿಜಯನಗರ ಲೋಕಸಭಾ ಕ್ಷೇತ್ರದ ಚುನಾವಣೆ ಶಾಂತಿಯುತವಾಗಿ ಮುಗಿದಿದ್ದು, ಮೊಹರಾದ ಇವಿಎಂ, ವಿವಿ ಪ್ಯಾಟ್ ಹಾಗೂ ಸಂಬಂಧಿಸಿದ ಕಾಗದ ಪತ್ರಗಳನ್ನು ಇಲ್ಲಿ ನ ಆರ್‌ವೈಎಂಸಿ ಕಾಲೇಜಿನಲ್ಲಿ ಸಂಗ್ರಹಿಸಲಾಯಿತು.
    ಕಾಲೇಜು ಕಟ್ಟಡಕ್ಕೆ ಚುನಾವಣಾ ಸಾಮಾನ್ಯ ವೀಕ್ಷಕ, ಡಿಸಿ ಹಾಗೂ ಅಭ್ಯರ್ಥಿಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಬುಧವಾರ ಸ್ಟ್ರಾಂಗ್ ರೂ.(ಭದ್ರತಾ ಕೊಠಡಿ)ಗಳಿಗೆ ಮೊಹರು ಹಾಕಿ, ಸಂಪೂರ್ಣವಾಗಿ ಮುಚ್ಚಲಾಯಿತು.
    ಡಿಸಿ ಪ್ರಶಾಂತ ಕುಮಾರ ಮಿಶ್ರಾ ಮಾತನಾಡಿ, ಮತಯಂತ್ರಗಳನ್ನು ಇರಿಸಲು ಕಾಲೇಜು ಕಟ್ಟಡದಲ್ಲಿ ವಿಶೇಷ ವ್ಯವಸ್ಥೆ ಮಾಡಿ ನೆಲಮಹಡಿ, ಮೊದಲನೆ ಮಹಡಿ ಹಾಗೂ ಮೂರನೆ ಮಹಡಿಗಳಲ್ಲಿ ಸ್ಟ್ರಾಂಗ್ ರೂಂ ಗಳನ್ನು ನಿರ್ಮಿಸಿ, ಒಪ್ಪವಾಗಿ ಜೋಡಿಸಿಡಲಾಗಿದೆ. ಸ್ಟ್ರಾಂಗ್ ರೂಂ. ಗಳನ್ನು ಚುನಾವಣೆಯ ಸಾಮಾನ್ಯ ವೀಕ್ಷಕ ಚಂದ್ರಶೇಖರ ಸಖಮುರಿ ಅಲ್ಲದೆ ಅಭ್ಯರ್ಥಿಗಳು ಹಾಗೂ ಅವರ ಅಧಿಕೃತ ಪ್ರತಿನಿಧಿಗಳ ಸಮ್ಮುಖದಲ್ಲಿ ಯೇ ಸ್ಟ್ರಾಂಗ್ ರೂಂ ಗಳನ್ನು ಸೀಲಿಂಗ್ ಮಾಡಲಾಗಿದೆ. ಕಟ್ಟಡದಲ್ಲಿ ಮತಯಂತ್ರಗಳನ್ನು ಇರಿಸಲು ಒಟ್ಟು 20 ಸ್ಟ್ರಾಂಗ್ ರೂಂ ಗಳು, ಪೋಸ್ಟಲ್ ಬ್ಯಾಲೆಟ್ಗಳನ್ನು ಇರಿಸಲು 02 ಸ್ಟ್ರಾಂಗ್ ರೂಂ ಗಳನ್ನು ಮಾಡಲಾಗಿದೆ. 08 ಮತ ಎಣಿಕಾ ಕೊಠಡಿಗಳನ್ನು ವ್ಯವಸ್ಥಿತವಾಗಿ ಸಿದ್ಧಪಡಿಸಲಾಗಿದೆ. ಪ್ರತಿ ಎಣಿಕಾ ಕೊಠಡಿಯಲ್ಲಿ 14 ಟೇಬಲ್ಗಳನ್ನು ಹಾಕಲಾಗುತ್ತಿದ್ದು, ಮತಗಟ್ಟೆಗಳ ಸಂಖ್ಯೆಗೆ ಅನುಗುಣವಾಗಿ ಮತ ಎಣಿಕೆ ಸುತ್ತುಗಳು ನಿರ್ಧಾರವಾಗಲಿವೆ ಎಂದರು.
    ಎಸ್ಪಿ ರಂಜಿತ ಕುಮಾರ ಬಂಡಾರು ಮಾತನಾಡಿ, ಸಿಆರ್‌ಪಿಎಫ್, ಕೆಎಸ್‌ಆರ್‌ಪಿ, ಸಿವಿಲ್ ಪೊಲೀಸ, ಡಿವೈಎಸ್ಪಿ , ಇನ್ಸ್‌ಪೆಕ್ಟರ್ ಹಂತಗಳ ಅಧಿಕಾರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಧಿಕಾರಿ, ಸಿಬ್ಬಂದಿಯು ದಿನದ 24 ಗಂಟೆ ಕಟ್ಟಡಕ್ಕೆ ಬಿಗಿ ಭದ್ರತೆ ನೀಡಲಿದ್ದು, ಶಿಫ್ಟ್ ಆಧಾರದಲ್ಲಿ ಅಧಿಕಾರಿ, ಸಿಬ್ಬಂದಿ ಭದ್ರತಾ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts