More

    ಸೋಂಕಿತ ಹಿಂದು ವೃದ್ಧೆಯ ಶವಸಂಸ್ಕಾರಕ್ಕೆ ಹಿಂಜರಿದ ಸಂಬಂಧಿಕರು; ಕೊನೆಗೆ ಮುಸ್ಲಿಂ ಯುವಕರಿಂದ ಅಂತಿಮಸಂಸ್ಕಾರ

    ಶಿವಮೊಗ್ಗ: ಕೋವಿಡ್-19​ ಸೋಂಕಿಗೆ ಒಳಗಾಗಿ ಮೃತಪಟ್ಟ ಹಿಂದು ವೃದ್ಧೆಯ ಶವಸಂಸ್ಕಾರ ಮಾಡಲು ಕುಟುಂಬ ಸದಸ್ಯರೇ ಹಿಂಜರಿದ ದಯನೀಯ ಪ್ರಸಂಗವೊಂದು ನಡೆದಿದೆ. ಬಳಿಕ ಮುಸ್ಲಿಂ ಯುವಕರ ತಂಡವೊಂದು ಅಂತಿಮ ಸಂಸ್ಕಾರ ನಡೆಸಿರುವುದು ಗಮನ ಸೆಳೆದಿದೆ.

    ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಚುಂಚಿನಕೊಪ್ಪ ಗ್ರಾಮದ ರುದ್ರಿಬಾಯಿ (57) ಮೃತಪಟ್ಟವರು. ಇವರು ಕೋವಿಡ್​-19 ಸೋಂಕಿಗೆ ಒಳಗಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಭಾನುವಾರ ಮೃತಪಟ್ಟಿದ್ದಾರೆ.

    ಆ ವೃದ್ಧೆಯ ಶವವನ್ನು ಸೋಮವಾರ ಆಂಬುಲೆನ್ಸ್‌ನಲ್ಲಿ ಚುಂಚಿನಕೊಪ್ಪಗೆ ತರಲಾಗಿದ್ದು, ಅವರ ಅಂತ್ಯಸಂಸ್ಕಾರ ಮಾಡಲು ಕುಟುಂಬದ ಸದಸ್ಯರೂ ಹಿಂದೆ ಸರಿದರು. ಆಗ ಸ್ಥಳೀಯರಾದ ಸಾಮಾಜಿಕ ಕಾರ್ಯಕರ್ತ ಮಹಮ್ಮದ್ ಇರ್ಫಾನ್ ಮತ್ತು ಅಸ್ಲಂ, ಇಮ್ರಾನ್, ನವೀದ್, ರಹಮತ್, ಮೌಲಾನಾ ಅಶ್ವಕ್, ಮೌಲಾನ ಇಬ್ರಾಹಿಂ ಅವರು ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದರು.

    ಇದನ್ನೂ ಓದಿ: ಹೊಸ ಪಾಕಿಸ್ತಾನದ ಭರವಸೆ ಕೊಟ್ಟ ಇಮ್ರಾನ್​ ಖಾನ್ ಅರೆಸ್ಟ್; ಜತೆಗೆ ಐವರು ಬೆಂಬಲಿಗರೂ ಒಳಗೆ!

    ಪಿಪಿಇ ಕಿಟ್ ಧರಿಸಿ ಚುಂಚನಕೊಪ್ಪಕ್ಕೆ ಆಗಮಿಸಿದ ಈ ಮುಸ್ಲಿಂ ಯುವಕರ ತಂಡ ರುದ್ರಿಬಾಯಿ ಅಂತ್ಯ ಸಂಸ್ಕಾರ ನೆರವೇರಿಸಿದೆ. ಈ ಯುವಕರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ‌ ಮೆಚ್ಚುಗೆ ವ್ಯಕ್ತವಾಗಿದೆ. ಈ ವೇಳೆ ಪ್ರತಿಕ್ರಿಯಿಸಿದ ಮಹಮ್ಮದ್ ಇರ್ಫಾನ್, ಕಾಯಿಲೆ ಯಾರಿಗೂ ಹೇಳಿ ಕೇಳಿ ಬರೋದಿಲ್ಲ. ಕರೊನಾ ಸೋಂಕು ಎಲ್ಲರನ್ನೂ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಕರೊನಾವನ್ನು ಧರ್ಮದೊಂದಿಗೆ ಥಳಕು ಹಾಕವುದು ಸರಿಯಲ್ಲ. ದಯವಿಟ್ಟು ಯಾರೂ ಇಂಥ ಸಂದರ್ಭದಲ್ಲಿ ಜಾತಿ-ಧರ್ಮದ ಲೇಪ ಮಾಡಬೇಡಿ ಎಂದು ಮನವಿ ಮಾಡಿದರು.

    ಇದನ್ನೂ ಓದಿ: ‘ತಂದೆ ಕಾಣೆಯಾಗಿದ್ದಾರೆ, ಹುಡುಕಿಕೊಡಿ ಪ್ಲೀಸ್​.. ಲಾಕ್​ಡೌನ್​ನಿಂದ ಹೊರಗೆ ಹೋಗಲಾಗುತ್ತಿಲ್ಲ, ಸಹಾಯ ಮಾಡಿ: ಪುತ್ರನ ವಿನಂತಿ 

    ಸೋಂಕಿತ ತಾಯಿ ತೀರಿಹೋದ ಮೂರೇ ದಿನಕ್ಕೆ ಅಣ್ಣ-ತಮ್ಮನೂ ಕರೊನಾಗೆ ಬಲಿ; ಅಮ್ಮಂದಿರ ದಿನವೇ ಇಬ್ಬರೂ ಏಕಕಾಲಕ್ಕೇ ನಿಧನ!

    ಮದುವೆ ಆಗು ಎಂದು ಒತ್ತಾಯಿಸಿದ ಇಬ್ಬರಿಗೂ ಒಲ್ಲೆ ಎಂದಳು; ಎರಡು ಗುಂಡೇಟಿಗೆ ಹೆಣವಾಗಿ ಉರುಳಿದಳು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts