ಹೊಳೆ, ಕೆರೆಗೆ ಸಂಚಕಾರ ! ಲ್ಯಾಂಡ್ ಮಾಫಿಯಾ, ಕೃಷಿ ಭೂಮಿ ನಾಶ

lake

ವಿಜಯವಾಣಿ ಸುದ್ದಿಜಾಲ ಕೋಟ

ಕೋಟ ಗ್ರಾಪಂ ವ್ಯಾಪ್ತಿಯ ಗಿಳಿಯಾರು ಭಾಗದ ನೂರಾರು ಎಕರೆ ಕೃಷಿ ಭೂಮಿ ಖಾಸಗಿ ಲ್ಯಾಂಡ್ ಮಾಫಿಯಾಕ್ಕೆ ತುತ್ತಾಗಿದ್ದು, ಸ್ಥಳೀಯವಾಗಿ ಹರಿಯುವ ನೀರಿನ ಕಿರಿಹೊಳೆ ಹಾಗೂ ಕೆರೆಗಳಿಗೆ ಸಂಚಕಾರ ಬಂದೊದಗಿದೆ. ಅಲ್ಲದೆ ಸುತ್ತಮುತ್ತಲಿನ ನೂರಾರು ಎಕರೆ ಕೃಷಿ ಭೂಮಿಗೆ ಮಳೆಗಾಲದ ಹೆಚ್ಚುವರಿ ನೀರು ಹರಿಯಲು ಅವಕಾಶ ಇಲ್ಲದಂತಾಗಿದೆ.

ಕೆಲವರ್ಷಗಳ ಹಿಂದೆ ಇಲ್ಲಿನ ಕೆಲ ಭೂಭಾಗ ಖಾಸಗಿ ಬಿಲ್ಡರ್ಸ್ ಪಾಲಾಗಿದ್ದು, ಸ್ಥಳೀಯವಾಗಿ ಸ್ಮಾರ್ಟ್ ಸಿಟಿ ತಲೆ ಎತ್ತಿದೆ. ಇದಕ್ಕ್ಕೆ ಸಂಬಂಧಿಸಿ ಗ್ರಾಮಸ್ಥರು ಬ್ರಹ್ಮಾವರ ತಹಸೀಲ್ದಾರ್ ಹಾಗೂ ಸ್ಥಳೀಯಾಡಳಿತಕ್ಕೆ ದೂರು ದಾಖಲಿಸಿದೆ. ಈ ಬಗ್ಗೆ ಸ್ಥಳೀಯಾಡಳಿತ ಪ್ರತಿನಿಧಿಗಳು, ಕೋಟ ಗ್ರಾಮ ಲೆಕ್ಕಿಗರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಲ್ಲದೆ ಹೊಳೆ, ಕೆರೆ ಮುಚ್ಚುವ ಕಾರ್ಯಕ್ಕೆ ಕೈ ಹಾಕಿದರೆ ತಮ್ಮ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಿದೆ ಎಂದು ಎಚ್ಚರಿಸಿದೆ. ಅಲ್ಲದೆ ಭೇಟಿ ನೀಡಿ ಬಿಲ್ಡರ್ಸ್ ಹಾಗೂ ಭೂ ಮಾಫಿಯಾ ನಡೆಸುವವರಿಗೆ ಹೊಳೆ, ಕೆರೆ ಮುಚ್ಚಿರುವ ಭಾಗ ತೆರವುಗೊಳಿಸಲು ಸೂಚಿಸಿದೆ.
ಕೋಟ ಗ್ರಾಪಂ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಪಾಂಡು ಪೂಜಾರಿ, ವಾರ್ಡ್ ಸದಸ್ಯ ಅಜಿತ್ ದೇವಾಡಿಗ ಸ್ಥಳ ಭೇಟಿ ನೀಡಿದ್ದಾರೆ.

ಹೆಚ್ಚುವರಿ ನೀರು ಎಲ್ಲಿಗೆ?

ಗಿಳಿಯಾರು ಗ್ರಾಮದ ಮುನ್ನೂರು ಎಕರೆ ಭತ್ತದ ಕೃಷಿ ಭೂಮಿ ಮಳೆಗಾಲದ ಹೆಚ್ಚುವರಿ ನೀರು ಗದ್ದೆಯ ಮೂಲಕ ಹೊಳೆ ಸೇರಲ್ಪಡುತ್ತಿದ್ದು ಆದರೆ ಸ್ಮಾರ್ಟ್ ಸಿಟಿ, ಲ್ಯಾಂಡ್ ಮಾಫಿಯ ದಿಸೆಯಲ್ಲಿ ಬಾರಿ ಪ್ರಮಾಣದಲ್ಲಿ ಮಣ್ಣು ತುಂಬಿಸಿ ನೀರು ಸರಾಗವಾಗಿ ಹರಿಯಲು ಅವಕಾಶಗಳೇ ಇಲ್ಲದಂತೆ ಮಾಡಿದ್ದಾರೆ. ಈ ಬಗ್ಗೆ ಅಲ್ಲಿನ ಕೃಷಿಕರು ಆಕ್ರೋಶ ಹೊರಹಾಕಿದ್ದು ಶೀಘ್ರದಲ್ಲೇ ಪರಿಹಾರ ದೊರಕಿಸಬೇಕು ಇಲ್ಲವಾದ್ದಲ್ಲಿ ಹೋರಾಟಕ್ಕಿಳಿಯುವುದಾಗಿ ಕೃಷಿಕರು ಎಚ್ಚರಿಸಿದ್ದಾರೆ.

ಮರಗಳ ಮಾರಣಹೋಮ

ಕಿರಿ ಹೊಳೆಯ ದಡದಲ್ಲಿದ್ದ ಮರಗಳು ಲ್ಯಾಂಡ್ ಮಾಲೀಕರಿಂದ ನಾಶಗೊಂಡಿದೆ. ಈ ಬಗ್ಗೆ ಸ್ಥಳೀಯಾಡಳಿತ ಅರಣ್ಯ ಇಲಾಖೆಗೂ ಮಾಹಿತಿ ನೀಡಿವೆ. ಅರಣ್ಯ ಇಲಾಖೆ ಪರಿಶೀಲಿಸಿ ಕ್ರಮಕೈಗೊಳ್ಳವ ಭರವಸೆ ನೀಡಿದೆ.

ನೀರಿನ ಪ್ರಮಾಣ ಕಡಿಮೆ

ಈ ಕಿರಿಯ ಹೊಳೆಯಲ್ಲಿ ಬೇಸಿಗೆಯಲ್ಲಿ ಮೂಡುಗಿಳಿಯಾರು, ಗಿಳಿಯಾರು ಭಾಗಗಳಿಗೆ ವಾರಾಹಿ ನೀರು ಹರಿಯಲ್ಪಡುತ್ತಿದ್ದು, ಇದರಿಂದ ಆ ಭಾಗದಲ್ಲಿ ಕುಡಿಯುವ ನೀರಿನ ಬರ ನೀಗಿಸುತ್ತದೆ ಆದರೆ ಹೊಳೆ ಒತ್ತುವರಿಯಿಂದ ನೀರಿನ ಪ್ರಮಾಣ ಕಡಿಮೆಗೊಳ್ಳುವ ಆತಂಕ ಸ್ಥಳೀಯರಿಗೆ ಎದುರಾಗಿದೆ.

ಸ್ಥಳೀಯ ಕೆರೆ, ಹೊಳೆ ಒತ್ತುವರಿ ಸ್ಥಳೀಯಾಡಳಿತವಾಗಿ ನಾವು ಸಹಿಸಲ್ಲ. ಈ ಬಗ್ಗೆ ಕಂದಾಯ ಇಲಾಖೆ, ತಹಸೀಲ್ದಾರ್ ಗಮನಕ್ಕೆ ತರಲಾಗಿದೆ ಸ್ಥಳ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದೆ.
-ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಅಧ್ಯಕ್ಷರು ಕೋಟ ಗ್ರಾಪಂ

ಕೃಷಿ ಭೂಮಿಗೆ ಸಂಚಕಾರ, ಮಳೆಗಾಲದ ನೀರು ಹರಿಯಲು ವ್ಯವಸ್ಥೆಗಳಿಲ್ಲ, ಕಿರಿ ಹೊಳೆ, ಕೆರೆ ಮಣ್ಣು ಹಾಕಿ ಮುಚ್ಚಿದ್ದಾರೆ ಈ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
-ಅಜಿತ್ ದೇವಾಡಿಗ ವಾರ್ಡ್ ಸದಸ್ಯ ಕೋಟ ಗ್ರಾಪಂ

ಕೃಷಿ ಭೂಮಿ ಮಳೆಗಾಲದ ಹೆಚ್ಚುವರಿ ನೀರು ಹೋಗಲು ವ್ಯವಸ್ಥೆ ಮಾಡಿಲ್ಲ ಇದರಿಂದ ಕೃತಕ ನೆರೆ ಸೃಷ್ಠಿಯಾಗುವ ಭಯ, ಇದರಿಂದ ಕೃಷಿ ಮಾಡಲು ಸಾಧ್ಯವಿಲ್ಲ ಶೀಘ್ರದಲ್ಲೆ ಈ ಬಗ್ಗೆ ಪೂರಕ ವ್ಯವಸ್ಥೆ ಕಲ್ಪಿಸಬೇಕಿದೆ ಈ ಬಗ್ಗೆ ಈಗಾಲೇ ಕಂದಾಯ ಇಲಾಖೆಗೆ ದೂರು ನೀಡಲಾಗಿದೆ.
-ಶ್ರೀಧರ ದೇವಾಡಿಗ ಕೃಷಿಕರು ಹರ್ತಟ್ಟು ಗಿಳಿಯಾರು

ಗಿಳಿಯಾರು ಭಾಗದ ಹೊಳೆ, ಕೆರೆ ಒತ್ತುವರಿ ಹಾಗೂ ಕೃಷಿ ಭೂಮಿಯ ನೀರು ಹರಿಯಲ್ಪಡುವ ಅವ್ಯವಸ್ಥೆ ಕುರಿತು ಪರಿಶೀಲಿಸಿ, ಸಮಸ್ಯ ಕಂಡುಬಂದರೆ ಸಂಬಂಧಪಟ್ಟವರಿಗೆ ನೋಟಿಸ್ ಜಾರಿಗೊಳಿಸಲಾಗುವುದು.
-ಶ್ರೀಕಾಂತ್ ಎಸ್.ಹೆಗ್ಡೆ, ತಹಸೀಲ್ದಾರ್ ಬ್ರಹ್ಮಾವರ

Share This Article

ನರ ದೌರ್ಬಲ್ಯಕ್ಕೆ ನೆಲ್ಲಿಕಾಯಿಯೇ ರಾಮಬಾಣ! ಇದರ ಅನೇಕ ಪ್ರಯೋಜನಗಳ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರುತ್ತೆ | Gooseberry

Gooseberry : ಪ್ರಕೃತಿಯಲ್ಲಿ ಹಲವು ರೀತಿಯ ಔಷಧಿಗಳಿವೆ. ಅವು ನಮ್ಮ ಕಣ್ಣಿಗೆ ಗೋಚರಿಸುತ್ತಿದ್ದರೂ ಅವುಗಳಲ್ಲಿರುವ ವಿಶೇಷ…

ಕೊರಿಯನ್ನರು, ಚೀನಿಯರು, ಜಪಾನಿಯರು ರಾತ್ರಿ ಹೊತ್ತು ಸ್ನಾನ ಮಾಡೋದೇಕೆ?ಅಚ್ಚರಿಯ ಮಾಹಿತಿ ಇಲ್ಲಿದೆ..! Bathing

Bathing: ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು…

ಬೇಸಿಗೆಯಲ್ಲಿ ಮಾವಿನ ಹಣ್ಣು ತಿನ್ನಿ! ಅನಾರೋಗ್ಯ ದೂರ ಮಾಡಿ…Mango

ಬೆಂಗಳೂರು: ( Mango ) ಬೇಸಿಗೆಯಲ್ಲಿ  ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.…