ಅಪ್ಪ-ಮಗ ಇಬ್ಬರೂ ಕರೊನಾಗೆ ಬಲಿ; ಸೋಂಕಿಗೆ ಒಳಗಾಗಿರುವ ಮತ್ತೊಬ್ಬ ಮಗನ ಪರಿಸ್ಥಿತಿ ಚಿಂತಾಜನಕ..

Corona-Death
ಸಾಂದರ್ಭಿಕ ಚಿತ್ರ
Published on

ಚಾಮರಾಜನಗರ: ಭಯಂಕರವಾಗಿ ಕಾಡುತ್ತಿರುವ ಕರೊನಾ ಎರಡನೇ ಅಲೆ ಹಲವು ಕುಟುಂಬಗಳಿಗೆ ದುರಂತವಾಗಿ ಸಂಭವಿಸಿದ್ದು, ಒಂದೇ ಮನೆಯಲ್ಲಿ ಹಲವರನ್ನ ಬಲಿ ತೆಗೆದುಕೊಳ್ಳುತ್ತಿರುವ ಪ್ರಕರಣಗಳು ಮೇಲಿಂದ ಮೇಲೆ ವರದಿ ಆಗುತ್ತಿವೆ.

ಧಾರಾವಾಡದಲ್ಲಿ ತಾಯಿ ತೀರಿಹೋದ ಮೂರೇ ದಿನಕ್ಕೆ ಅಣ್ಣ-ತಮ್ಮ ಇಬ್ಬರೂ ಅಮ್ಮಂದಿರ ದಿನವಾದ ಇಂದು ಏಕಕಾಲಕ್ಕೆ ನಿಧನರಾಗಿದ್ದಾರೆ. ಹೀಗೆ ಮೂರೇ ದಿನದಲ್ಲಿ ಒಂದೇ ಕುಟುಂಬದ ಮೂವರು ಕರೊನಾಗೆ ಬಲಿಯಾದ ಸುದ್ದಿಯ ಬೆನ್ನಿಗೇ ಮತ್ತೊಂದೆಡೆ ಅಪ್ಪ-ಮಗ ಇಬ್ಬರೂ ಕರೊನಾದಿಂದಾಗಿ ಮೃತಪಟ್ಟ ಪ್ರಕರಣ ವರದಿಯಾಗಿದೆ.

ಚಾಮರಾಜನಗರ ತಾಲೂಕಿನ ಅಮಚವಾಡಿಯಲ್ಲಿ ಈ ದುರಂತ ಸಂಭವಿಸಿದೆ. ಕರೊನಾ ಸೋಂಕಿಗೆ ಒಳಗಾಗಿದ್ದ ಮುದ್ದುಮಲ್ಲಪ್ಪ (65) ಅವರು ಹೋಂ ಐಸೋಲೇಷನ್​ನಲ್ಲಿದ್ದು ಔಷಧ-ಆರೈಕೆ ಪಡೆಯುತ್ತಿದ್ದರೂ ಇಂದು ಕೊನೆಯುಸಿರೆಳೆದಿದ್ದಾರೆ. ಇನ್ನೊಂದೆಡೆ ಅವರ ಸೋಂಕಿತರಾಗಿದ್ದ ಅವರ ಪುತ್ರ ಪ್ರಕಾಶ್ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ದುರದೃಷ್ಟಕರ ಸಂಗತಿ ಎಂದರೆ ಮುದ್ದುಮಲ್ಲಪ್ಪ ಅವರ ಇನ್ನೊಬ್ಬ ಪುತ್ರ ಕೂಡ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಯಲ್ಲಿರುವ ಅವರ ಸ್ಥಿತಿ ಚಿಂತಾಜನಕವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net