

ಚಿತ್ರದುರ್ಗ: ಮದುವೆಯಾಗದೇ ಒಂಟಿ ಜೀವನ ಸಾಗಿಸಿ, ಸಾವಿಗೀಡಾದ ವ್ಯಕ್ತಿಯ ಮನೆಯಲ್ಲಿ ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿದೆ.
ಈ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ನಡೆದಿದೆ. ವಾರದ ಹಿಂದಷ್ಟೇ ಗಂಗಾಧರ ಶಾಸ್ತ್ರಿ(70) ಮೃತಪಟ್ಟಿದ್ದರು. ಒಂಟಿಯಾಗಿ ಬದುಕು ಸವೆಸಿದ್ದ ಶಾಸ್ತ್ರಿ, ಶಾಸ್ತ್ರ ಹೇಳುವುದು ಹಾಗೂ ಶುಭ ಕಾರ್ಯದ ಪೂಜೆ ಮಾಡಿಸುತ್ತಾ ಜೀವನ ಸಾಗಿಸುತ್ತಿದ್ದರು. ಇದೀಗ ಅವರ ಮನೆಯಲ್ಲಿ ವಿವಿಧೆಡೆ ಇರಿಸಿದ್ದ 30 ಲಕ್ಷಕ್ಕೂ ಅಧಿಕ ಹಣ ಸಿಕ್ಕಿದೆ.
ಶಾಸ್ತ್ರಿ ಅವರ ಹೆಸರಿನಲ್ಲಿ 16 ಎಕರೆ ಜಮೀನಿದೆ. ಅದರಲ್ಲಿ 4 ಎಕರೆ ತೆಂಗಿನ ತೋಟ ಮತ್ತು ಗದ್ದೆಯನ್ನು ಹೊಂದಿದ್ದರು. ಭಕ್ತರಿಂದ ಬಂದ ಕಾಣಿಕೆ ಹಣವೇ 46 ಸಾವಿರ ರೂಪಾಯಿಗೂ ಹೆಚ್ಚಿದೆ. ಕೃಷಿ ಮತ್ತಿತರೆ ಆದಾಯದಿಂದ ಬಂದ 30 ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ.
2 ದಿನದ ಹಿಂದೆ ಭಕ್ತರು ಶಾಸ್ತ್ರಿ ಅವರ ಮನೆಯನ್ನು ಪರಿಶೀಲನೆ ಮಾಡಿದಾಗ ಹಣ ಪತ್ತೆಯಾಗಿದೆ. ಜುಲೈ 7ಕ್ಕೆ ಭಕ್ತರ ಸಭೆ ಕರೆದು ಸಮಿತಿ ರಚನೆಗೆ ಸ್ಥಳೀಯರು ನಿರ್ಧಾರ ಮಾಡಿದ್ದಾರೆ. ಜಮೀನಿನಲ್ಲಿ ಗಂಗಾಧರ ಶಾಸ್ತ್ರಿ ಗದ್ದುಗೆ ನಿರ್ಮಿಸಲು ಸ್ಥಳೀಯರು ನಿರ್ಧರಿಸಿದ್ದಾರೆ. (ದಿಗ್ವಿಜಯ ನ್ಯೂಸ್)\