ಮೊದಲ ಡೇಟಿಂಗ್​ನಲ್ಲಿ ದೈಹಿಕ ಸಂಪರ್ಕ ಬೆಳೆಸಿದ್ದೀರಾ? ತಮನ್ನಾಗಿಂತ ವಿಜಯ್​ ಕೊಟ್ಟ ಉತ್ತರ ವೈರಲ್!​

Thamanna Bhatiya
Published on

ಮುಂಬೈ: ಮಿಲ್ಕಿ ಬ್ಯೂಟಿ ತಮನ್ನಾ ಮತ್ತು ನಟ ವಿಜಯ್​ ವರ್ಮ ಡೇಟಿಂಗ್​ ಮಾಡುತ್ತಿರುವ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಈಗಾಗಲೇ ಇಬ್ಬರು ಸಾರ್ವಜನಿಕವಾಗಿಯೂ ಅದನ್ನು ಒಪ್ಪಿಕೊಂಡಿದ್ದಾರೆ. ನಿನ್ನೆಯಷ್ಟೇ ಇಬ್ಬರ ನಟನೆಯ ಲಸ್ಟ್​ ಸ್ಟೋರಿ-2 ವೆಬ್​ ಸರಣಿ ಬಿಡುಗಡೆಯಾಗಿದ್ದು, ಇದರ ಪ್ರಚಾರ ಕಾರ್ಯದಲ್ಲಿ ಬಿಜಿಯಾಗಿದ್ದಾರೆ. ಮಾಧ್ಯಮ ಸಂದರ್ಶನಗಳಲ್ಲಿ ವೆಬ್​ ಸರಣಿಯ ಬಗ್ಗೆ ಮಾತ್ರವಲ್ಲದೆ, ವೈಯಕ್ತಿಕ ಪ್ರಶ್ನೆಗಳು ಸಹ ವಿಜಯ್​ ಹಾಗೂ ತಮನ್ನಾಗೆ ಎದುರಾಗುತ್ತಿದ್ದು, ಹಿಂದಿನ ಡೇಟಿಂಗ್​ ಮತ್ತು ಇಬ್ಬರ ಸಂಬಂಧಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

ಮಾಧ್ಯಮ ಸಂದರ್ಶನವೊಂದರಲ್ಲಿ ಲಸ್ಟ್​ ಸ್ಟೋರಿ-2 ಸರಣಿಯ ನಿರ್ದೇಶಕ ಸುಜಯ್​ ಘೋಷ್​, ನಟಿ ತಮನ್ನಾ ಮತ್ತು ಅವರ ಬಾಯ್​ಫ್ರೆಂಡ್​ ವಿಜಯ್​ ವರ್ಮ ಭಾಗಿಯಾಗಿದ್ದರು. ಈ ವೇಳೆ ಮೂವರಿಗೂ ಅನೇಕ ಪ್ರಶ್ನೆಗಳನ್ನು ಕೇಳಲಾಯಿತು. ಆದರೆ, ಹೆಚ್ಚು ಗಮನ ಸೆಳೆದ ಪ್ರಶ್ನೆ ಯಾವುದೆಂದರೆ, ಮೊದಲ ಡೇಟಿಂಗ್​ನಲ್ಲಿ ಸೆಕ್ಸ್​ ಮಾಡಿದ್ದೀರಾ? ಎಂಬ ಪ್ರಶ್ನೆ.

ನನಗೆ ಸುಲಭವಾಗಿ ಸಿಗುವುದಿಲ್ಲ

ಈ ಪ್ರಶ್ನೆಗೆ ಉತ್ತರ ನೀಡಿದ ಸುಜಯ್​, ನಾನು ಅಂತಹ ಅದೃಷ್ಟವಂತನಲ್ಲ. ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದವನು ಮತ್ತು ನಾನು ಎಲ್ಲದಕ್ಕೂ ಹೋರಾಟ ಮಾಡಬೇಕಾಗುತ್ತದೆ. ಯಾವುದೂ ಕೂಡ ನನಗೆ ಸುಲಭವಾಗಿ ಸಿಗುವುದಿಲ್ಲ ಎನ್ನುವ ಮೂಲಕ ಹಾಸ್ಯ ಚಟಾಕಿ ಹಾರಿಸಿದರು.

ನಾನು ಹೊಂದಲೇ ಬೇಕು

ನಟಿ ತಮನ್ನಾ ಪ್ರತಿಕ್ರಿಯಿಸಿ, ನಾನು ಎಂದಿಗೂ ಮೊದಲ ಡೇಟಿಂಗ್​ನಲ್ಲಿ ಆ ಅನುಭವ ಹೊಂದಿಲ್ಲ ಎಂದರು. ಆದರೆ, ವಿಜಯ್​ ವರ್ಮ "ನಾನು ಹೊಂದಲೇ ಬೇಕು" ಎನ್ನುವ ಮೂಲಕ ತಮನ್ನಾ ಜತೆ ಲೈಂಗಿಕ ಸಂಪರ್ಕ ಬೆಳೆಸುವ ಇಂಗಿತವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಬೇಸರ ಎನಿಸುವ ಡೇಟಿಂಗ್ ಅನುಭವಿಸಿದ್ದೀರಾ ಎಂದೂ ಪ್ರಶ್ನಿಸಲಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ತಮನ್ನಾ ನಾನು​ ಮೊದಲ ಡೇಟ್​ನಲ್ಲಿ ಬೇಸರ ಅನುಭವ ಹೊಂದಿದ್ದೇನೆ ಎಂದರು. ನಾನೂ ಕೂಡ ಇದೇ ಅನುಭವ ಹೊಂದಿದ್ದೇನೆ. ಮೊದಲ ಡೇಟ್​ನಲ್ಲಿ ಯಾವುದೇ ರೊಮ್ಯಾನ್ಸ್​ ಇರಲಿಲ್ಲ ಎಂದು ವಿಜಯ್​ ಹೇಳಿದರು. ಹೀಗೆ ಸಾಕಷ್ಟು ಪ್ರಶ್ನೆಗಳಿಗೆ ನವಜೋಡಿ ಉತ್ತರಿಸಿದರು. ಆದರೆ, ಸೆಕ್ಸ್​ ಕುರಿತಾದ ಪ್ರಶ್ನೆಗಳಿಗೆ ಇಬ್ಬರು ನೀಡಿರುವ ಉತ್ತರ ಸಾಮಾಜಿ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ನಿನ್ನೆಯಷ್ಟೇ ಬಿಡುಗಡೆಯಾದ ಲಸ್ಟ್ ಸ್ಟೋರೀಸ್-2 ವೆಬ್​ ಸರಣಿಯೊಂದಿಗೆ ತಮನ್ನಾ ಮತ್ತು ವಿಜಯ್ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದಾರೆ. ನೆಟ್​ಫ್ಲಿಕ್ಸ್​ನಲ್ಲಿ ಈ ವೆಬ್​ ಸರಣಿ ಬಿಡುಗಡೆಯಾಗಿದೆ. ಸುಜಯ್​ ಘೋಷ್​, ನಿರ್ದೇಶನ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net