ವಿಶ್ವದ ಅತ್ಯಂತ ದುಬಾರಿ ಮನೆಯೊಂದನ್ನು ಖರೀದಿಸಿದ ಭಾರತೀಯ ಮೂಲದ ಕುಟುಂಬ; ಬೆಲೆ ಕೇಳಿದ್ರೆ ನೀವು ಬೆರಗಾಗೋದು ಗ್ಯಾರೆಂಟಿ!

Home
Published on

ಸ್ವಿಟ್ಜರ್ಲೆಂಡ್‌: ಭಾರತೀಯ ಮೂಲದ ಕುಟುಂಬವೊಂದು ಸ್ವಿಟ್ಜರ್ಲೆಂಡ್‌ನಲ್ಲಿ ವಿಶ್ವದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದನ್ನು ಖರೀದಿಸಿದೆ. ಐಷಾರಾಮಿ ಮನೆಯನ್ನು ಖರೀದಿಸಿರುವ ಸುದ್ದಿ ಬಹಿರಂಗವಾಗುತ್ತಿದ್ದಂತೆ, ಇದರ ಬೆಲೆ ಕೇಳಿ ಎಲ್ಲರೂ ಆಶ್ಚರ್ಯ ಪಟ್ಟಿದ್ದಾರೆ. ಸದ್ಯ ಮನೆಯ ಫೋಟೋ/ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಭಾರತೀಯ ಮೂಲದ ದಂಪತಿ ಪಂಕಜ್ ಓಸ್ವಾಲ್ ಮತ್ತು ರಾಧಿಕಾ ಓಸ್ವಾಲ್ ಸ್ವಿಟ್ಜರ್ಲೆಂಡ್‌ನ ಜಿಂಗಿನ್ಸ್ ಹಳ್ಳಿಯಲ್ಲಿ ವಿಶ್ವಂತ ಅತ್ಯಂತ ದುಬಾರಿ ಮನೆಯೊಂದನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿದ್ದಾರೆ. ದಂಪತಿಗೆ ವಸುಂಧರಾ ಓಸ್ವಾಲ್ ಮತ್ತು ರಿದಿ ಓಸ್ವಾಲ್ ಎಂಬ ಇಬ್ಬರು ಮಕ್ಕಳಿದ್ದಾರೆ. ಮಣಿಪುರದಲ್ಲಿ ವ್ಯಾಸಾಂಗ ಮಾಡಿದ್ದ ಪಂಕಜ್ ಬಳಿಕ ತಮ್ಮ ಕುಟುಂಬದೊಂದಿಗೆ 2013ರ ವರೆಗೆ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದರು. ಕಳೆದ 10 ವರ್ಷಗಳಿಂದ ಸ್ವಿಟ್ಜರ್ಲೆಂಡ್​ನಲ್ಲಿ ವಾಸವಾಗಿದ್ದು, ಇದೀಗ ಅಲ್ಲಿನ ಜಿಂಗಿನ್ಸ್ ಅತ್ಯಂತ ಸುಂದರವಾದ ಹಳ್ಳಿಯಲ್ಲಿ ಕೋಟ್ಯಂತರ ರೂಪಾಯಿ ಕೊಟ್ಟು ಮನೆಯೊಂದನ್ನು ಖರೀದಿಸಿದ್ದಾರೆ.

ಎಷ್ಟು ಗೊತ್ತಾ ಮನೆಯ ಬೆಲೆ?

ಜಿಂಗಿನ್ಸ್ ಹಳ್ಳಿಯಲ್ಲಿರುವ ಈ ಮನೆಯನ್ನು ವಿಶ್ವದ ಟಾಪ್-10 ದುಬಾರಿ ಮನೆಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ. 4.3 ಲಕ್ಷ ಚದರ ಅಡಿ ವಿಸ್ತೀರ್ಣದ ಈ ಮನೆಯನ್ನು ಬರೋಬ್ಬರಿ 1649 ಕೋಟಿ ರೂಪಾಯಿ ನೀಡಿ ಪಂಕಜ್ ಓಸ್ವಾಲ್ ದಂಪತಿ ಖರೀದಿ ಮಾಡಿದ್ದಾರೆ. ನಿವಾಸದ ಸುತ್ತಲೂ ಸ್ವಿಟ್ಜರ್ಲೆಂಡ್​ನ ಪ್ರಕೃತಿ ಸೌಂದರ್ಯ ಕಣ್ಣಿಗೆ ಕಟ್ಟುವಂತಿದ್ದು, ಹಿಮಾವೃತ ಬೆಟ್ಟವನ್ನು ಕುಳಿತಲ್ಲಿಂದಲೇ ಸವಿಯಬಹುದಾಗಿದೆ.

ಗ್ರೀಕ್ ಹಡಗು ನಿರ್ಮಾಣ ಮಾಡಿದ್ದ ಮ್ಯಾಗ್ನೇಟ್ ಅರಿಸ್ಟಾಟಲ್ ಒನಾಸಿಸ್ ಅವರ ಮಗಳು ಕ್ರಿಸ್ಟಿನಾ ಒನಾಸಿಸ್ ಈ ಹಿಂದೆ ಇದೇ ಮನೆಯನ್ನು ಖರೀದಿಸಿದ್ದರು. ಒಬೆರಾಯ್ ರಾಜ್​ವಿಲಾಸ್, ಲೀಲಾ ಪ್ಯಾಲೆಸ್ ಹೋಟೆಲ್​ಗಳನ್ನು ವಿನ್ಯಾಸಗೊಳಿಸಿದ ಖ್ಯಾತ ಇಂಟೀರಿಯರ್ ಡಿಸೈನರ್ ಜೆಫ್ರಿ ವಿಲ್ಕ್ಸ್ ಈ ಮನೆಯನ್ನು ಇದೀಗ ಮರುನವೀಕರಣ ಮಾಡಿದ್ದಾರೆ ಎಂದು ವರದಿಯಾಗಿದೆ.

ಯಾರು ಈ ಪಂಕಜ್ ಓಸ್ವಾಲ್?

ಭಾರತೀಯ ಮೂಲದ ಬಿಲಿಯನೇರ್ ‌ ಪಂಕಜ್ ಓಸ್ವಾಲ್ ಆಗೋ ಮಿಲ್ಫ್ ಮತ್ತು ಓಸ್ವಾಲ್ ಗ್ರೀನ್‌ಟೆಕ್‌ನ ಸಂಸ್ಥಾಪಕರಾಗಿದ್ದ ಕೈಗಾರಿಕೋದ್ಯಮಿ ಅಭಯ್ ಕುಮಾರ್ ಓಸ್ವಾಲ್ ಅವರ ಮಗ. ಸದ್ಯ ಪಂಕಜ್ ಓಸ್ವಾಲ್ ನೇತೃತ್ವದ ಓಸ್ವಾಲ್ ಗ್ರೂಪ್ ಗ್ಲೋಬಲ್, ಪೆಟ್ರೋಕೆಮಿಕಲ್ಸ್, ರಿಯಲ್ ಎಸ್ಟೇಟ್, ರಸಗೊಬ್ಬರ ಮತ್ತು ಗಣಿಗಾರಿಕೆಯಲ್ಲಿ ವ್ಯವಹಾರ ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net