S..x ಬಗ್ಗೆ ನಟಿ ತಮನ್ನಾ ಬೋಲ್ಡ್​ ಕಾಮೆಂಟ್​: ನಮ್ಮ ಜನರು ಹೀಗ್ಯಾಕೆ ಎಂದ ಮಿಲ್ಕಿ ಬ್ಯೂಟಿ

Actress Thammana
Published on

ಮುಂಬೈ: ಭಾರತೀಯ ಸಿನಿಮಾ ರಂಗದ ಪ್ರಖ್ಯಾತ ನಟಿಯರಲ್ಲಿ ತಮನ್ನಾ ಭಾಟಿಯಾ ಕೂಡ ಒಬ್ಬರು. ಸರಿ ಸುಮಾರು ಎರಡು ದಶಕಗಳ ವೃತ್ತಿ ಜೀವನದಲ್ಲಿ ಬಾಲಿವುಡ್​ ಸೇರಿದಂತೆ ದಕ್ಷಿಣ ಭಾರತ ಸಿನಿಮಾಗಳಲ್ಲಿ ತಮ್ಮ ಅಭಿನಯ, ಡಾನ್ಸ್​ ಮತ್ತು ಸೌಂದರ್ಯದ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ತಮ್ಮತ್ತ ಸೆಳೆದಿರುವ ತಮನ್ನಾ ಈವರೆಗೂ ಕೌಟುಂಬಿಕ ಪಾತ್ರಗಳಲ್ಲಿ ಹೆಚ್ಚು ನಟಿಸಿದ್ದಾರೆ. 18 ವರ್ಷಗಳ ಸಿನಿ ಪಯಣದಲ್ಲಿ ಯಾವುದೇ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳದ ತಮನ್ನಾ, ಇದೀಗ ಆ ಚೌಕಟ್ಟಿನಿಂದ ಹೊರಬಂದು ತೀರಾ ಅಶ್ಲೀಲ ಎನಿಸುವ ದೃಶ್ಯಗಳಲ್ಲಿ ಮೈಚಳಿ ಬಿಟ್ಟು ನಟಿಸಿದ್ದು, ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಚರ್ಚೆ ಹುಟ್ಟುಹಾಕಿದ ಪ್ರೋಮೋ

ಇತ್ತೀಚೆಗಷ್ಟೇ ತೆರೆಕಂಡ ಜೀ ಕರ್ದ ವೆಬ್​ ಸರಣಿಯ ಹಸಿಬಿಸಿ ದೃಶ್ಯಗಳು ವೈರಲ್​ ಆಗಿದ್ದವು. ಇದೀಗ ಜೂನ್​ 29ಕ್ಕೆ ನೆಟ್​ಫ್ಲಿಕ್ಸ್​ನಲ್ಲಿ ಲಸ್ಟ್​ ಸ್ಟೋರೀಸ್-2​ ವೆಬ್​ ಸರಣಿ ಬಿಡುಗಡೆಗೆ ಸಜ್ಜಾಗಿದೆ. ಟ್ರೈಲರ್​ನಲ್ಲೇ ಹಸಿಬಿಸಿ ದೃಶ್ಯಗಳಿದ್ದು, ಈಗಾಗಲೇ ಟಾಕ್​ ಆಫ್​ ದಿ ಟೌನ್​ ಆಗಿದೆ. ಸದ್ಯ ಈ ವೆಬ್​ ಸರಣಿಯ ಪ್ರಚಾರದಲ್ಲಿ ತೊಡಗಿಕೊಂಡಿರುವ ತಮನ್ನಾ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದಾರೆ. ಅದರ ಪ್ರೊಮೋ ಬಿಡುಗಡೆಯಾಗಿದ್ದು, ಅದರಲ್ಲಿ ತಮನ್ನಾ ಆಡಿರುವ ಮಾತುಗಳು ಬಹಳಷ್ಟು ಚರ್ಚೆ ಹುಟ್ಟು ಹಾಕಿದೆ.

ಈ ಸಮಾಜ ಹೀಗ್ಯಾಕೆ?

ಸಂದರ್ಶನದಲ್ಲಿ ತಮನ್ನಾ ಅವರು ಟ್ರೋಲ್ಸ್​, ಕಿಸ್ಸಿಂಗ್​ ದೃಶ್ಯ ಮತ್ತು ತಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡಿದ್ದಾರೆ. ಸಿನಿಮಾಗಳಲ್ಲಿ ಹೀರೋ ಡಬಲ್​ ಮೀನಿಂಗ್​ ಮಾತನಾಡಿದರೂ, ರೊಮ್ಯಾನ್ಸ್​ ಮಾಡಿದರೂ ಅಥವಾ ಕೆಟ್ಟದಾಗಿ ಮಾತನಾಡಿದರೂ ಅವರು ಸೂಪರ್​ಸ್ಟಾರ್​ ಆಗುತ್ತಾರೆ. ಆದರೆ, ಓರ್ವ ಯುವತಿ ಅಥವಾ ಹೀರೋಯಿನ್​, ಆ ರೀತಿ ಮಾಡಿದರೆ, ಅವಳ ಪಾತ್ರವನ್ನು ನಿರ್ಣಯಿಸುತ್ತಾರೆ. ಈ ಸಮಾಜ ಹೀಗ್ಯಾಕೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ತಮನ್ನಾ ಬೇಸರ ಹೊರಹಾಕಿದ್ದಾರೆ.

ನನ್ನ ನಿಯಮವು ಅರ್ಥಹೀನ

ಮುಂದುವರಿದು ಮಾತನಾಡಿರುವ ತಮನ್ನಾ, ನಾನು 18 ವರ್ಷಗಳ ನನ್ನ ವೃತ್ತಿ ಜೀವನದಲ್ಲಿ ಒಮ್ಮೆಯೂ ತೆರೆಯ ಮೇಲೆ ಕಿಸ್​ ಮಾಡಿಲ್ಲ. ಓರ್ವ ನಟಿಯಾಗಿ ಅಥವಾ ಕಲಾವಿದೆಯಾಗಿ ಏಕೆ ನಾನು ಒಂದು ಚೌಕಟ್ಟು ಮತ್ತು ನಿಯಮಗಳನ್ನು ಹಾಕಿಕೊಳ್ಳಬೇಕು? ಓರ್ವ ನಟಿಯಾಗಿ ನಾನೇಕೆ ಮತ್ತಷ್ಟು ಬೆಳೆಯಬಾರದು ಎಂದು ನನ್ನನ್ನು ನಾನು ಕೇಳಿಕೊಳ್ಳುತ್ತೇನೆ. ತೆರೆಯ ಮೇಲಿನ ಚುಂಬನದ ದೃಶ್ಯಗಳ ಬಗ್ಗೆ ನನ್ನ ನಿಯಮವು ಅರ್ಥಹೀನವೆಂದು ತೋರುತ್ತದೆ ಎಂದಿದ್ದಾರೆ.

ಸೆಕ್ಸ್​ ಬಗ್ಗೆ ಮಾತನಾಡುವುದು ಕ್ಷುಲ್ಲಕ

ಇದೇ ಸಂದರ್ಭದಲ್ಲಿ ತಮ್ಮ ಬಾಯ್​ಫ್ರೆಂಡ್​ ವಿಜಯ್​ ವರ್ಮ ಬಗ್ಗೆ ಮಾತನಾಡಿರುವ ತಮನ್ನಾ, ವಿಜಯ್​ಗೆ ಸಮಾಜದ ಬಗ್ಗೆ ತುಂಬಾ ಅರಿವು ಇದೆ. ನಾನು ಅವರನ್ನು ಇಷ್ಟಪಡಲು ಇದು ಕೂಡ ಒಂದು ಕಾರಣ ಎಂದರು. ಅಲ್ಲದೆ, ಲಸ್ಟ್​ ಸ್ಟೋರೀಸ್​ 2 ಟ್ರೈಲರ್​ನಲ್ಲಿ ಮದುವೆಗೂ ಮುನ್ನ ಟೆಸ್ಟ್​ ಡ್ರೈವ್​ ಎಂಬ ಡೈಲಾಗ್​ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ ತಮನ್ನಾ, ನನ್ನ ಪ್ರಕಾರ ಸೆಕ್ಸ್​ ಬಗ್ಗೆ ಮಾತನಾಡುವುದು ಕ್ಷುಲ್ಲಕ ಎನಿಸುತ್ತದೆ. ಅದನ್ನು ಪಕ್ಕಕ್ಕೆ ಇಡಬೇಕೆಂದು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net