ಹಸಿಬಿಸಿ ದೃಶ್ಯಗಳಲ್ಲಿ ತಮನ್ನಾ ನಟನೆ: ಜಾಲತಾಣದಲ್ಲಿ ವಿಡಿಯೋ ವೈರಲ್​, ಮಿಲ್ಕಿ ಬ್ಯೂಟಿ ವಿರುದ್ಧ ಕೆಂಡಕಾರಿದ ಫ್ಯಾನ್ಸ್​

Tamannaah (1)
Published on

ಮುಂಬೈ: ಭಾರತೀಯ ಸಿನಿಮಾ ರಂಗದ ಪ್ರಖ್ಯಾತ ನಟಿಯರಲ್ಲಿ ತಮನ್ನಾ ಭಾಟಿಯಾ ಕೂಡ ಒಬ್ಬರು. ಸರಿ ಸುಮಾರು ಎರಡು ದಶಕಗಳ ವೃತ್ತಿ ಜೀವನದಲ್ಲಿ ಬಾಲಿವುಡ್​ ಸೇರಿದಂತೆ ದಕ್ಷಿಣ ಭಾರತ ಸಿನಿಮಾಗಳಲ್ಲಿ ತಮ್ಮ ಅಭಿನಯ, ಡಾನ್ಸ್​ ಮತ್ತು ಸೌಂದರ್ಯದ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ತಮ್ಮತ್ತ ಸೆಳೆದಿರುವ ತಮನ್ನಾ ಈವರೆಗೂ ಕೌಟುಂಬಿಕ ಪಾತ್ರಗಳಲ್ಲಿ ಹೆಚ್ಚು ನಟಿಸಿದ್ದಾರೆ. 18 ವರ್ಷಗಳ ಸಿನಿ ಪಯಣದಲ್ಲಿ ಯಾವುದೇ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳದ ತಮನ್ನಾ, ಇದೀಗ ಆ ಚೌಕಟ್ಟಿನಿಂದ ಹೊರಬಂದು ತೀರಾ ಅಶ್ಲೀಲ ಎನಿಸುವ ದೃಶ್ಯಗಳಲ್ಲಿ ಮೈಚಳಿ ಬಿಟ್ಟು ನಟಿಸಿದ್ದು, ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ರೂಂ ಪಾತ್ರಕ್ಕೂ ಓಕೆ

ಇತ್ತೀಚೆಗಷ್ಟೇ ತಮನ್ನಾ ನಟನೆಯ ಜೀ ಕರ್ದ ವೆಬ್​ ಸರಣಿ ಬಿಡುಗಡೆಯಾಗಿದೆ. ಈ ಸರಣಿ ಇದೀಗ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ತಮನ್ನಾ ಅವರ ಬೋಲ್ಡ್​ನೆಸ್​. ಇದೇ ಮೊದಲ ಬಾರಿಗೆ ತಮನ್ನಾ ಹಸಿಬಿಸಿ ಪಾತ್ರದಲ್ಲಿ ನಟಿಸಿದ್ದಾರೆ. ನೋ ಕಿಸ್ಸಿಂಗ್​ ನೀತಿಗೆ ಬ್ರೇಕ್​ ಹಾಕಿರುವ ತಮನ್ನಾ ಇದೀಗ ಬೆಡ್​ ರೂಂ ಪಾತ್ರಕ್ಕೂ ಓಕೆ ಅಂದಿರುವುದು ಅಭಿಮಾನಿಗಳಿಗೆ ಮಾತ್ರವಲ್ಲ, ಸಿನಿರಂಗದಲ್ಲೂ ಹಲವರ ಅಚ್ಚರಿಗೆ ಕಾರಣರಾಗಿದ್ದಾರೆ.

ಸಿಕ್ಕಾಪಟ್ಟೆ ವೈರಲ್​

ಜೀ ಕರ್ದ ಮೂಲಕ ತಮನ್ನಾ ಒಟಿಟಿಗೆ ಪದಾರ್ಪಣೆ ಮಾಡಿದ್ದಾರೆ. 18 ವರ್ಷಗಳ ಸಿನಿ ಪಯಣದಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಬೋಲ್ಡ್​ ನಿರ್ಧಾರ ತೆಗೆದುಕೊಂಡಿದ್ದಾರೆ. ಯಾವುದೇ ಮುಜುಗರ ಅಥವಾ ಬಿಗುಮಾನವಿಲ್ಲದೇ ತುಂಬಾ ಓಪನ್​ ಆಗಿ ಅಶ್ಲೀಲ ದೃಶ್ಯಗಳಲ್ಲಿ ನಟಿಸಿದ್ದಾರೆ. ಇದೀಗ ದೃಶ್ಯದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಅಲ್ಲದೆ, ಟ್ವಿಟರ್​ನಲ್ಲೂ ಜೀ ಕರ್ದ ಟ್ರೆಂಡಿಂಗ್​ನಲ್ಲಿದೆ. ತಮನ್ನಾ ಕುರಿತು ಪರ-ವಿರೋಧ ಚರ್ಚೆ ಜೋರಾಗಿ ನಡೆಯುತ್ತಿದೆ.

ನಿಮಗೆ ನಾಚಿಕೆ ಆಗಬೇಕು

ತಮನ್ನಾ ಅಭಿಮಾನಿಗಳು ಅಸಮಾಧಾನಗೊಂಡಿದ್ದು, ಅನೇಕ ನೆಟ್ಟಿಗರು ತಮನ್ನಾ ವಿರುದ್ಧ ಜಾಲತಾಣದಲ್ಲಿ ಕಿಡಿಕಾರುತ್ತಿದ್ದಾರೆ. ತಮನ್ನಾ ಭಾರತದ ಹೊಸ ಸನ್ನಿ ಲಿಯೋನ್​ ಎಂದು ಹೋಲಿಕೆ ಮಾಡಿದ್ದಾರೆ. ವೃತ್ತಿ ಜೀವನದ ಎರಡನೇ ಹಂತದಲ್ಲಿ ಎಲ್ಲ ಮಿತಿಗಳನ್ನು ತಮನ್ನಾ ಮೀರಿದ್ದಾರೆ. ಜೀ ಕರ್ದ ಮತ್ತು ಲಸ್ಟ್​ ಸ್ಟೋರೀಸ್​ ವೆಬ್​ ಸರಣಿಗಳಲ್ಲಿ ಸೆಕ್ಸ್​ ದೃಶ್ಯಗಳಲ್ಲೂ ನಟಿಸಿದ್ದಾರೆ. ಇಂತಹ ಪಾತ್ರಗಳನ್ನು ಆಯ್ಕೆ ಮಾಡಿಕೊಂಡ ನಿಮಗೆ ನಾಚಿಕೆ ಆಗಬೇಕು ಎಂದು ತಮನ್ನಾ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ನಕಲಿತನವನ್ನು ನಿಲ್ಲಿಸಿ

ಧಾರ್ಮಿಕತೆಯ ಬಗ್ಗೆ ಇನ್ನೆಂದು ನೀವು ಮಾತನಾಡಬೇಡಿ. ಬಾಲಿವುಡ್​ನಲ್ಲಿ ಸಿನಿಮಾ ಆಫರ್​ಗಳನ್ನು ಗಿಟ್ಟಿಸಿಕೊಂಡು ಖ್ಯಾತಿ ಗಳಿಸಲು ಇಂತಹ ಪಾತ್ರಗಳನ್ನು ಮಾಡುತ್ತಿದ್ದೀರಿ. ನಿಮ್ಮ ನಕಲಿತನವನ್ನು ನಿಲ್ಲಿಸಿ ಎಂದು ನೆಟ್ಟಿಗನೋರ್ವ ತರಾಟೆಗೆ ತೆಗೆದುಕೊಂಡಿದ್ದಾನೆ.

ಇತ್ತೀಚೆಗಷ್ಟೇ ಫಿಲ್ಮ್​ ಕಂಪ್ಯಾನಿಯನ್​ ಸಂದರ್ಶನದಲ್ಲಿ ಮಾತನಾಡಿರುವ ತಮನ್ನಾ, 18 ವರ್ಷಗಳ ನೋ ಕಿಸ್ಸಿಂಗ್​ ನೀತಿಗೆ ಇದೀಗ ತೆರೆ ಎಳೆದಿದ್ದೇಕೆ ಎಂಬುದನ್ನು ವಿವರಿಸಿದ್ದಾರೆ. ಲಸ್ಟ್​ ಸ್ಟೋರೀಸ್​ ಸರಣಿಗಾಗಿ ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿದ್ದರ ಹಿಂದಿನ ಕಾರಣವನ್ನು ಮಿಲ್ಕಿ ಬ್ಯೂಟಿ ವಿವರಿಸಿದ್ದಾರೆ. ಅಂದಹಾಗೆ ಈ ವೆಬ್​ಸರಣಿಯ ಭಾಗವನ್ನು ಸುಜೋಯ್​ ಘೋಷ್​ ಎಂಬುವರು ನಿರ್ದೇಶಿಸಿದ್ದಾರೆ. ಬಾಯ್​ಫ್ರೆಂಡ್​ ವಿಜಯ್​ ವರ್ಮ ಸಹ ಈ ಸರಣಿಯಲ್ಲಿ ನಟಿಸಿದ್ದಾರೆ.

ನಾನು ಸುಜೋಯ್​ ನಿರ್ದೇಶನದಲ್ಲಿ ನಟಿಸಬೇಕೆಂದು ನಿಜಕ್ಕೂ ಬಯಸಿದ್ದೆ ಮತ್ತು ಈ ಪಾತ್ರಕ್ಕಾಗಿ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ನಾನು ನಿಜಕ್ಕೂ ಖುಷಿಯಾಗಿದ್ದೇನೆ. ನನ್ನ ವೃತ್ತಿ ಜೀವನದಲ್ಲಿ ಎಂದೂ ಹಸಿಬಿಸಿ ದೃಶ್ಯಗಳಲ್ಲಿ ನಟಿಸಿಲ್ಲ. ಮೃಧುವಾದ ಇಂಟಿಮಸಿ ದೃಶ್ಯಗಳಲ್ಲಿ ಮಾತ್ರ ನಟಿಸಿದ್ದೆ. ಇಂತಹ ದೃಶ್ಯಗಳಲ್ಲಿ ನಟಿಸಲು ಮುಜುಗರ ಅನುಭವಿಸುತ್ತಿದ್ದೆ ಎಂದು ಸಂದರ್ಶನದಲ್ಲಿ ತಮನ್ನಾ ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ತಮನ್ನಾ, ನೋ ಕಿಸ್ಸಿಂಗ್​ ನೀತಿಯನ್ನು ಮುರಿದು ಹಸಿಬಿಸಿ ದೃಶ್ಯಗಳಲ್ಲಿ ನಟಿಸಲು ಒಪ್ಪಿಕೊಂಡಿದ್ದೇಕೆ ಎಂದು ವಿವರಿಸಿದರು. ನಾನು ಇದುವರೆಗೂ ನಿರ್ದಿಷ್ಟ ಪ್ರೇಕ್ಷಕರಿಗೆ ಮಾತ್ರ ಮನರಂಜನೆ ನೀಡುತ್ತಿದ್ದ ಒಂದೇ ಚೌಕಟ್ಟಿನಲ್ಲಿ ಸಿಲುಕಿದ್ದಂತಹ ವ್ಯಕ್ತಿಯಾಗಿದ್ದೆ, ಆ ಚೌಕಟ್ಟಿನಿಂದ ವಿಕಸನದೆಡೆಗೆ ಬದಲಾಗುವ ಅವಶ್ಯಕತೆ ಇತ್ತು. ಭಾರತವು ದೊಡ್ಡದಾಗಿದೆ ಮತ್ತು ಭಾರತದ ಹಲವು ಭಾಗಗಳು ಇನ್ನೂ ವಿಕಸನಗೊಳ್ಳಬೇಕಾಗಿದೆ. ಈಗಾಗಲೇ ಸಾಕಷ್ಟು ವಿಕಸನ ಆಗಿದೆ. ಅದಕ್ಕೆ ಕಾರಣವಾದ ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳಿಗೆ ಧನ್ಯವಾದಗಳು. ಇಂದು ಬೆರಳ ತುದಿಯಲ್ಲೇ ಪ್ರತಿಯೊಂದು ಮಾಹಿತಿಯು ಲಭ್ಯವಾಗುತ್ತದೆ. ಪ್ರತಿಯೊಬ್ಬರಿಗೆ ಸಾಕಷ್ಟು ವಿಷಯಗಳು ಸಿಗುತ್ತಿವೆ. ನಾನೊಬ್ಬ ಕಲಾವಿದೆಯಾಗಿ ಯಾವುದನ್ನು ಹಿಡಿದಿಟ್ಟುಕೊಳ್ಳುವುದನ್ನು ಬಯಸುವುದಿಲ್ಲ. ಇದು ಸಂಪೂರ್ಣ ಸೃಜನಾತ್ಮಕ ಪ್ರಯತ್ನವಾಗಿದೆ. ಹೀಗಾಗಿ ನಾನು ಎಲ್ಲ ನೀತಿಗಳಿಗೆ ಬ್ರೇಕ್​ ಹಾಕಿದ್ದೇನೆ. 18 ವರ್ಷಗಳ ವೃತ್ತಿ ಜೀವನದ ಬಳಿಕ ನಾನು ಖ್ಯಾತಿ ಪಡೆಯಲು ಯತ್ನಿಸುತ್ತಿಲ್ಲ. ಅದು ನನ್ನ ಆದ್ಯತೆಯು ಅಲ್ಲ ಎಂದು ತಮನ್ನಾ ಹೇಳಿದರು.

ಸಿನಿಮಾ ವಿಚಾರಕ್ಕೆ ಬಂದರೆ, ಜೂನ್​ 29ಕ್ಕೆ ಲಸ್ಟ್​ ಸ್ಟೋರಿಸ್​ ವೆಬ್​ ಸರಣಿ ಬಿಡುಗಡೆಯಾಗಲಿದೆ. ಸೂಪರ್​ ಸ್ಟಾರ್​ ರಜನಿಕಾಂತ್​ ನಟನೆಯ ಜೈಲರ್​ ಸಿನಿಮಾದಲ್ಲಿ ಮತ್ತು ಸುಂದರ್​ ಸಿ ನಿರ್ದೇಶನದ ಅರಮನೈ ಭಾಗ 4ರ ಚಿತ್ರದಲ್ಲಿ ತಮನ್ನಾ ನಟಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net