ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡ ನಟಿ ಅನುಪಮಾ ಪರಮೇಶ್ವರನ್

anupama (1)
Published on

ಹೈದರಾಬಾದ್​​: ಬಹುಭಾಷಾ ನಟಿ ಅನುಪಮಾ ಪರಮೇಶ್ವರನ್ ಸೋಶಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಒಂದಲ್ಲ ಒಂದು ಪೋಸ್ಟ್‌ ಹಂಚಿಕೊಳ್ಳುತ್ತಲೇ ಸಾದ ಸುದ್ದಿಯಲ್ಲಿರುವ ಈ ನಟಿ ಇದೀಗ ಒಂದು ಟ್ಯಾಟೂ ವಿಚಾರವಾಗಿ ಸುದ್ದಿಯಾಗಿದ್ದಾರೆ.

ಪ್ರೇಮಮ್‌ ಸಿನಿಮಾ ಮೂಲಕ ಸಿನಿಮಾರಸಿಕರ ಕಣ್ಣಿಗೆ ಬಿದ್ದ ಈ ಚೆಲುವೆ, ಖಾಸಗಿ ಭಾಗದಲ್ಲಿ ಟ್ಯಾಟೂ ಹಾಕಿಸಿಕೊಂಡ ಫೋಟೋವನ್ನು ಇನ್​ಸ್ಟಾಗ್ರಾಮ್​​ನಲ್ಲಿ ಶೇರ್​​ ಮಾಡಿದ್ದಾರೆ. ಈ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​​ ಆಗಿದೆ.

ಅನುಪಮಾ ಲೋ ನೆಕ್ ಸ್ಲೀವ್‌ಲೆಸ್ ಟಾಪ್ ಧರಿಸಿ ಎದೆಯ ಮಧ್ಯಭಾಗದಲ್ಲಿ ಹಾಕಿಸಿಕೊಂಡಿರುವ ಟ್ಯಾಟೂ ಕಾಣುವ ಹಾಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಪೋಸ್ಟ್‌ಗೆ "ಹಸಿವೆ!" ಎಂದು ಬರೆದುಕೊಂಡು ಹಾಟ್​​ ಫೋಟೋಗಳನ್ನು ಇನ್​​ಸ್ಟಾಗ್ರಾಮ್​​​ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಮತ್ತು ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಅಲ್ಟ್ರಾ ಗ್ಲಾಮ್ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದರೂ ಅವರ ಇತ್ತೀಚಿನ ಫೋಟೋಶೂಟ್ ಕೆಲವು ನೆಟಿಜನ್‌ಗಳನ್ನು ಕೆರಳಿಸಿದೆ.

ಈ ನಟಿ ಈ ವರೆಗೂ ಸ್ಟಾರ್‌ ನಟರ ಸಿನಿಮಾಗಳಲ್ಲಿ ನಟಿಸಿಲ್ಲ. ಕಮರ್ಷಿಯಲ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ತೀರಾ ಕಡಿಮೆ. ಇದೆಲ್ಲವನ್ನು ಗಮನಿಸಿದ ನೆಟ್ಟಿಗರೊಬ್ಬರು, "ನೀನು ದೊಡ್ಡ ನಾಯಕಿ ಅಂತೇನೂ ಅಲ್ಲ.. ಅದಕ್ಕೇ ದೊಡ್ಡ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಗುತ್ತಿಲ್ಲ. ಅದರಲ್ಲೂ ನೀವು ಹೀರೋಯಿನ್‌ ಮೆಟೀರಿಯಲ್‌ ಅಲ್ಲ.." ಎಂದು ಇನ್‌ಸ್ಟಾಗ್ರಾಂನಲ್ಲಿ ಕಾಮೆಂಟ್ ಮಾಡಿದ್ದಾರೆ.

ನೆಟ್ಟಿಗನ ಕಾಮೆಂಟ್‌ಗೆ ಅನುಪಮಾ ಪರಮೇಶ್ವರನ್‌ ತಮ್ಮದೇ ಶೈಲಿಯಲ್ಲಿ ಕೌಂಟರ್ ಕೊಟ್ಟಿದ್ದಾರೆ. "ನೀವು ಹೇಳಿದ್ದು ಸರಿ ಬ್ರೋ.. ನಾನು ಹೀರೋಯಿನ್ ಮೆಟೀರಿಯಲ್ ಅಲ್ಲ.. ಆದರೆ ಒಬ್ಬ ನಟಿ" ಎಂದು ಸ್ಮೈಲಿ ಎಮೋಜಿ ಜತೆ ಪ್ರತಿಕ್ರಿಯಿಸಿದ್ದಾರೆ. ನಟಿಯ ಈ ಕಾಮೆಂಟ್‌ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net