

ನವದೆಹಲಿ: ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲು ಇಂದೇ ಕೊನೆಯ ದಿನವಾಗಿದೆ. ಒಂದು ವೇಳೆ ನೀವಿನ್ನೂ ಲಿಂಕ್ ಮಾಡಿಸದಿದ್ದರೆ, ಈಗಲೇ ಲಿಂಕ್ ಮಾಡಿಸಿ, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾಗಲಿದೆ.
ಆದಾಯ ತೆರಿಗೆ ಇಲಾಖೆ ಕಳೆದ ಮೂರು ತಿಂಗಳುಗಳಲ್ಲಿ ಹಲವು ಬಾರಿ ದಿನಾಂಕವನ್ನು ವಿಸ್ತರಣೆ ಮಾಡಿತ್ತು. ಸಾರ್ವಜನಿಕರ ಮನವಿ ಹಿನ್ನೆಲೆಯಲ್ಲಿ ಜೂನ್ 30ಕ್ಕೆ ಕೊನೆಯ ದಿನಾಂಕ ಎಂದು ಘೋಷಿಸಿತ್ತು. ಇದೀಗ ಆ ದಿನ ಬಂದಿದೆ. ಇಂದು ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ. ಮತ್ತೆ ದಿನಾಂಕ ವಿಸ್ತರಣೆ ಆಗುವುದು ಬಹುತೇಕ ಅನುಮಾನವಾಗಿದೆ.
ಸದ್ಯ ಲಿಂಕ್ ಮಾಡಿಸಲು 1000 ರೂ. ಫೈನ್ ಇದೆ. ಇನ್ನೂ ಲಿಂಕ್ ಮಾಡಿಸದೇ ಇದ್ದರೆ ಪಾನ್ ಕಾರ್ಡ್ ಅಮಾನ್ಯವಾಗಲಿದೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆ ನೋಟೀಸ್ ಜಾರಿ ಮಾಡಿದೆ. ಬ್ಯಾಂಕ್ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ಅತಿ ಮುಖ್ಯವಾಗಿ ಬೇಕು. ವಿವಿಧ ಮೂಲಗಳಲ್ಲಿ ಹೂಡಿಕೆ ಮಾಡಲೂ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ. ಒಂದೊಮ್ಮೆ ಪ್ಯಾನ್ ಕಾರ್ಡ್ ಆಮಾನ್ಯವಾದರೆ ಬಹುತೇಕ ಎಲ್ಲ ಆರ್ಥಿಕ ವಹಿವಾಟುಗಳಿಗೆ ಬ್ರೇಕ್ ಬೀಳಲಿದೆ.
ಮುಂದಿನ ದಿನಗಳಲ್ಲಿ ಲಿಂಕ್ ಮಾಡಿಸಲು ಹತ್ತು ಸಾವಿರ ಫೈನ್ ಬೀಳುವ ಸಾಧ್ಯತೆ ಇದೆ. 80 ವರ್ಷ ಮೇಲ್ಪಟ್ಟವರು ಹಾಗೂ ನಾನ್ ರೆಸಿಡೆಂಟ್ ಆಫ್ ಇಂಡಿಯನ್ಸ್ ಆಧಾರ್-ಪ್ಯಾನ್ ಲಿಂಕ್ ಮಾಡಿಸಬೇಕಾಗಿಲ್ಲ. ಉಳಿದವರು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಈಗಾಗಲೇ ಲಿಂಕ್ ಆಗದೆ ಒಂದಷ್ಟು ಮಂದಿ ಪರದಾಡುತ್ತಿದ್ದಾರೆ. ಆದರೆ ಮತ್ತೆ ಅವಧಿ ವಿಸ್ತರಣೆ ಬಹುತೇಕ ಅನುಮಾನವಾಗಿದೆ.
ನಿಮ್ಮ ಪ್ಯಾನ್-ಆಧಾರ್ ಲಿಂಕ್ ಆಗಿದೆಯೋ ಇಲ್ಲವೋ ಎಂಬ ಗೊಂದಲ ಬೇಡ. ಮೊದಲಿಗೆ ಲಿಂಕ್ ಆಗಿದೆಯೇ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಿ. ಅದಕ್ಕಾಗಿ ಈ ಕೆಳಗಿನ ಲಿಂಕ್ ಬಳಸಿ, ನಂತರ ತೆರೆದುಕೊಳ್ಳುವ ಪುಟದಲ್ಲಿ ಪ್ಯಾನ್ ಹಾಗೂ ಆಧಾರ್ ನಂಬರ್ ನಮೂದಿಸಿ, ‘ವ್ಯೂ ಲಿಂಕ್ ಆಧಾರ್ ಸ್ಟೇಟಸ್’ ಕ್ಲಿಕ್ ಮಾಡಿ. ಆಗ ನಿಮ್ಮ ಪ್ಯಾನ್-ಆಧಾರ್ ಲಿಂಕ್ ಆಗಿದೆಯೇ ಇಲ್ಲವೇ ಎಂಬುದು ಖಚಿತವಾಗುತ್ತದೆ.
ಇದನ್ನೂ ಓದಿ: ಅಕ್ಕಿ ಬದಲು ಹಣ ಸರ್ಕಾರಕ್ಕೂ ಲಾಭ; ಮಾಸಿಕ ಸುಮಾರು 61.33 ಕೋಟಿ ರೂ. ಉಳಿಕೆ ಪ್ಯಾನ್-ಆಧಾರ್ ಲಿಂಕ್ ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಲಿಂಕ್ ಆಗಿಲ್ಲ ಎಂದಾದರೆ, ನಿಮ್ಮ ಆಧಾರ್-ಪ್ಯಾನ್ ಅನ್ನು ಆನ್‌ಲೈನ್‌ನಲ್ಲಿ ಲಿಂಕ್ ಮಾಡಲು ಈ ಕೆಳಗಿನ ವಿಧಾನವನ್ನು ಅನುಸರಿಸಿ
1. www.incometax.gov.in ನಲ್ಲಿ ಅಧಿಕೃತ ಆದಾಯ ತೆರಿಗೆ ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಿ.
2. ನಿಮ್ಮ ಲಾಗಿನ್ ಮಾಹಿತಿಯನ್ನು ಬಳಸಿಕೊಂಡು ಆದಾಯ ತೆರಿಗೆ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.
3. ಪಾಪ್-ಅಪ್ ವಿಂಡೋ ಹೊರಹೊಮ್ಮುತ್ತದೆ
4. ಇಲ್ಲದಿದ್ದರೆ, ಮೆನು ಬಾರ್‌ನಿಂದ ಪ್ರೊಫೈಲ್ ಸೆಟ್ಟಿಂಗ್‌ಗಳಲ್ಲಿ ಹುಡುಕಿ ‘ಲಿಂಕ್ ಆಧಾರ್’ ಆಯ್ಕೆಯನ್ನು ಆರಿಸಿ.
5. ಹೊಸ ವಿಂಡೋ ಕಾಣಿಸುತ್ತದೆ.
6. ನಿಮ್ಮ ಪ್ಯಾನ್ ಸಂಖ್ಯೆ, ಆಧಾರ್ ವಿವರಗಳು, ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
7. ಮಾಹಿತಿಯನ್ನು ಫೀಡ್ ಮಾಡಿದ ನಂತರ, ‘ನನ್ನ ಆಧಾರ್ ವಿವರಗಳನ್ನು ವ್ಯಾಲಿಡೇಟ್ ಮಾಡಲು ನಾನು ಒಪ್ಪುತ್ತೇನೆ’ ಎನ್ನುವ ಆಯ್ಕೆಯನ್ನು ಆರಿಸಿ.
8. ಈಗ ‘ಮುಂದುವರಿಸಿ’ ಬಟನ್ ಕ್ಲಿಕ್ ಮಾಡಿ.
9. ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.
10. ಪರದೆಯ ಮೇಲಿನ ಖಾಲಿ ಜಾಗಗಳನ್ನು ಭರ್ತಿ ಮಾಡಿ ಮತ್ತು ‘ವ್ಯಾಲಿಡೇಟ್’ ಬಟನ್ ಒತ್ತಿರಿ.
11. ನೀವು ದಂಡವನ್ನು ಪಾವತಿಸಿದ ನಂತರ, ನಿಮ್ಮ ಪ್ಯಾನ್-ಆಧಾರ್ ಲಿಂಕ್ ಸಂಪನ್ನವಾಗುತ್ತದೆ.