

ಮಂಡ್ಯ: ಮಂಡ್ಯದಲ್ಲಿ ಇಂದು ಪೊಲೀಸರು ಅಪರಾಧ ಪ್ರಕರಣ ನಿಯಂತ್ರಿಸಲು ರೌಡಿಗಳ ಪರೇಡ್ ನಡೆಸಿದ್ದು ಈ ಸಂದರ್ಭ ಕಿಡಿಗೇಡಿಗಳ ಚಳಿ ಬಿಡಿಸಿದ್ದಾರೆ. ಈ ಸಂದರ್ಭ ಟೊಮ್ಯಾಟೊ ರೌಡಿಸಂ ಬಿಟ್ಟು ಟೊಮ್ಯಾಟೊ ಬೆಳೆಯಿರಿ ಎಂದು ಎಎಸ್ಪಿ ಸಲಹೆ ನೀಡಿದ್ದಾರೆ.
ಎಎಸ್ಪಿ ಸಿ.ಈ.ತಿಮ್ಮಯ್ಯ ನೇತೃತ್ವದಲ್ಲಿ ಪರೇಡ್ ನಡೆದಿದೆ. ಪರೇಡ್ನಲ್ಲಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದಂತೆ ರೌಡಿಶೀಟರ್ ಗಳಿಗೆ ತಾಕೀತು ಮಾಡಲಾಗಿದ್ದು, ಅಪರಾಧ ಪ್ರಕರಣದಲ್ಲಿ ಮತ್ತೆ ಭಾಗಿಯಾದ್ರೆ ಗಡಿಪಾರು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಮಾಯಮುಡಿಯಲ್ಲಿ ಗಾಂಜಾ ಬೆಳೆದಿದ್ದವನ ಬಂಧನ
ರೌಡಿಶೀಟರ್ಗಳ ಅವತಾರ ಕಂಡು ಎಎಸ್ಪಿ ಸಿ.ಈ. ತಿಮ್ಮಯ್ಯ ಶಾಕ್ ಆಗಿದ್ದು "ನಂಗೆ ಇವರೆಲ್ಲ ರೌಡಿ ಅಂತಾ ಮಾತನಾಡಿಸೋಕೆ ಬೇಜಾರ್ ಆಗುತ್ತೆ. ಇಲ್ಲಿ ನೋಡೋಕೆ ಹೀಗಿದ್ದಾರೆ ಸರ್. ಊರಲ್ಲಿ ಹುಲಿ ಆಗಿ ಬಿಡ್ತಾರೆ" ಎಂದು ಇನ್ಸ್ಪೆಕ್ಟರ್ ಹೇಳಿದ್ದಾರೆ.
ಇದನ್ನೂ ಓದಿ: ಕುಂಟುತ್ತಾ ಸಾಗುತ್ತಿದೆ ಮುಡಿಪು-ಮೂಳೂರು ರಸ್ತೆ ಕಾಮಗಾರಿ
ಈ ಸಂದರ್ಭ ಎಎಸ್ಪಿ, ಓರ್ವ ರೌಡಿಶೀಟರ್ ಬಳಿಯಲ್ಲಿ, "ಏನ್ ಕೆಲಸ ಮಾಡ್ತಿಯಾ?" ಎಂದು ಕೇಳಿದ್ದು, ವ್ಯವಸಾಯ ಎಂದು ಉತ್ತರ ಬಂದಿದೆ. ಈ ಸಂದರ್ಭ ಎಎಸ್ಪಿ, "ಎಷ್ಟು ಎಕರೆ ಜಮೀನಿದೆ, ಏನ್ ಬೆಳೆದಿದ್ದೀಯಾ" ಎಂದು ವ್ಯವಸಾಯದ ಬಗ್ಗೆ ಪ್ರಶ್ನಿಸಿದ್ದಾರೆ. ಅದಕ್ಕೆ ರೌಡಿಶೀಟರ್, ರಾಗಿ ಬೆಳೆದಿರುವುದಾಗಿ ಹೇಳಿದ್ದು, ಎಎಸ್ಪಿ ಈ ಸಂದರ್ಭ "ಟಮೋಟಾ ಬೆಳೆದಿದ್ದರೇ ಆರಾಮಾಗಿರ್ತಿದ್ದೆ ಅಲ್ವಾ? ಎಂದು ಎಎಸ್ಪಿ ಪ್ರಶ್ನಿಸಿದ್ದಾರೆ. ಎಎಸ್ಪಿ ಸಲಹೆಗೆ ಬೇಸಿಗೆಯಲ್ಲಿ ಟೊಮ್ಯಾಟೊ ಬೆಳೆ ನಿಲ್ಲಲ್ಲ ಸರ್ ಎಂದು ರೌಡಿಶೀಟರ್ ಹೇಳಿದ್ದಾನೆ.
ಇದನ್ನೂ ಓದಿ: ಶುಶ್ರೂಷಕರ ಸೇವೆ ಬಡಜನರಿಗೆ ಮುಡಿಪಾಗಿರಲಿ
ಈ ಸಂದರ್ಭ ಮತ್ತೋರ್ವ ರೌಡಿ ಶೀಟರ್, "ದೇವರಿಗೆ ಮುಡಿ ಕೊಟ್ಟಾಗಿನಿಂದ ಎಲ್ಲ ಕೆಲಸ ಬಿಟ್ಬಿಟ್ಟಿದ್ದೀನಿ" ಎಂದಿದ್ದು ದೇವರಿಗೆ ಮುಡಿ ಕೊಟ್ಟಿದ್ದೀನಿ. ಅಂದಿನಿಂದ ಯಾವುದೇ ಜಗಳಕ್ಕೆ ಹೋಗ್ತಿಲ್ಲ ಸಾರ್" ಎಂದು ರೌಡಿಶೀಟರ್. ಅದಕ್ಕೆ ಉತ್ತರಿಸಿದ ಎಎಸ್ಪಿ, "ಒಂದು ವಾರದ ಹಿಂದೆ ಮುಡಿ ಕೊಟ್ಟಿದ್ಯಾ. ಅದಕ್ಕು ಮೊದಲು ಎಲ್ಲ ಮಾಡ್ತಿದ್ದೆ ಅಲ್ವ, ಎಲ್ಲ ನಿಲ್ಲಿಸಬೇಕು" ಎಂದು ವಾರ್ನಿಂಗ್ ನೀಡಿದ್ದಾರೆ.
ಇದನ್ನೂ ಓದಿ: ಗದ್ದೆಯಂತಾದ ಮುಡಿಪು-ಇರಾ ರಸ್ತೆ