More

    ಶುಶ್ರೂಷಕರ ಸೇವೆ ಬಡಜನರಿಗೆ ಮುಡಿಪಾಗಿರಲಿ

    ಎಚ್.ಡಿ.ಕೋಟೆ: ನಮ್ಮ ಸೇವೆಯನ್ನ್ನು ಬಡಜನರ ಆರೋಗ್ಯಕ್ಕೆ ಮುಡಿಪಾಗಿ ಇಡಬೇಕು ಎಂದು ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸೋಮಣ್ಣ ಕಿವಿಮಾತು ಹೇಳಿದರು.


    ಪಟ್ಟಣದ ತಾಲೂಕು ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಶನಿವಾರ ಆಯೋಜಿಸಿದ್ದ ಫ್ಲಾರೆನ್ಸ್ ನೈಟಿಗೆಲ್ ಜನ್ಮ ದಿನೋತ್ಸವ ಹಾಗೂ ಶುಶ್ರೂಷರ ದಿನಾಚರಣೆ ಕಾರ್ಯಕ್ರಮವನ್ನು ಮಾತನಾಡಿ, ಪ್ಲಾರೆನ್ಸ್ ನೈಟಿ ಗೆಲ್ ಅವರು ತಮ್ಮ ಸೇವೆಯನ್ನು ಜನತೆಗಾಗಿ ಮುಡಿಪಾಗಿಟ್ಟು ಹಗಲಿರಲು ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿದ್ದರು. ಅದಕ್ಕೆ ಅವರನ್ನು ಲೇಡಿ ವಿತ್ ಲ್ಯಾಂಪ್ ಅಂತ ಕರೆಯುತ್ತಿದ್ದರು. ಅವರ ಸೇವೆ ನಿಸ್ವಾರ್ಥ ಸೇವೆಯಾಗಿತ್ತು. ಅವರು ತನಗಾಗಿ ಏನನ್ನು ಬಯಸದೆ ಬೇರೆಯವರ ಸೇವೆಗಳಿಗೆ ತೊಡಗಿದ್ದರು. ಅದೇ ಆದರ್ಶವನ್ನು ನಾವೂ ಕೂಡ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಇಂಥ ಮಹನೀಯರ ಕಾರ್ಯಕ್ರಮಗಳ ಆಚರಣೆ ಅರ್ಥಪೂರ್ಣವಾಗುತ್ತದೆ ಎಂದರು.


    ಪ್ಲಾರೆನ್ಸ್ ನೈಟಿ ಗೆಲ್ ಅವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವುದರ ಆಚರಣೆ ಮಾಡಲಾಯಿತು. 14,600 ಅಡಿ ಪರ್ವತ ಏರಿ ಹೆಗ್ಗಳಿಕೆ ಪಡೆದಿರುವಂತ ಪರ್ವತರೋಹಿಗಳಾದ ಶುಶ್ರೂಷಕ ಅಧಿಕಾರಿಗಳಾದ ಅಗತ ಸ್ಮಿತಾ ಡಿಸೋಜಾ, ಸಬಿಹಾ, ಸರ್ವ ಮಂಗಳಾ, ಗೀತಾ, ಅವರುಗಳನ್ನು ಸನ್ಮಾನಿಸಲಾಯಿತು.

    ತಾಲೂಕು ಆರೋಗ್ಯ ಅಧಿಕಾರಿ ಡಾ. ರವಿಕುಮಾರ್, ಜಿಲ್ಲಾ ಶುಶ್ರೂಷಕರ ಸಂಘದ ಅಧ್ಯಕ್ಷ ಪ್ರಶಾಂತ್ ಕುಮಾರ್ ಗಂಗೊಳ್ಳಿ, ಜಿಲ್ಲಾ ಶುಶ್ರೂಷಕ ಅಧಿಕಾರಿ ಹೇಮಲತಾ, ಡಾ.ಪೂರ್ಣಿಮಾ, ಡಾ. ಚಂದ್ರಶೇಖರ್, ಪರಿಮಳಾ ಗಾಣಂಕಿ, ಪುಷ್ಪವತಿ, ರಾಜಮ್ಮ, ವನಜಾಕ್ಷಿ, ವಿಜಯಲಕ್ಷ್ಮೀ ಮೀನಾಕ್ಷಿ, ಮಧು, ಜಯಂತಿ, ಅಂಬಿಕಾ, ಶ್ರುತಿ, ಸುನೀತಾ, ರಘು, ಉಮೇಶ್, ಶಿರಾಜುದ್ದೀನ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts