ವೆಜ್ ಫುಡ್​ ಆರ್ಡರ್​ ಮಾಡಿದ್ದವನಿಗೆ ಬಂದಿದ್ದೇ ಬೇರೆ! ಬಾಕ್ಸ್ ಓಪನ್ ಮಾಡಿದ ಗ್ರಾಹಕನಿಗೆ ಕಾದಿತ್ತು ಶಾಕ್

WhatsApp Image 2024-05-05 at 8.47.56 PM
Published on

ಇಂದು ಆನ್​ಲೈನ್​ನಲ್ಲಿ ತಮಗೆ ಬೇಕಾದ ಬಗೆಬಗೆಯ ಆಹಾರಗಳನ್ನು ಕುಳಿತ ಜಾಗದಿಂದಲೇ ಆರ್ಡರ್​ ಮಾಡಿಕೊಂಡು ತಿನ್ನುವ ಅದೆಷ್ಟೋ ಮಂದಿ, ಪ್ರಸ್ತುತ ಚಾಲ್ತಿಯಲ್ಲಿರುವ ಹೆಸರಾಂತ ಫುಡ್​ ಡೆಲಿವರಿ ಸಂಸ್ಥೆಯಿಂದ ತಮಿಷ್ಟದ ಫುಡ್​ಗಳನ್ನು ಆನ್​ಲೈನ್ ಮೂಲಕವೇ ಸ್ವೀಕರಿಸುತ್ತಾರೆ. ಸದ್ಯ ಈ ವ್ಯವಸ್ಥೆ ಅನೇಕರನ್ನು ಹೋಟೆಲ್​ ಆಹಾರಗಳತ್ತ ಸೆಳೆಯುತ್ತಿದ್ದು, ಈ ಪ್ರಕ್ರಿಯೆ ಹೋಟೆಲ್​ಗಳ ಉದ್ಯಮವನ್ನು ಕೂಡ ಹೆಚ್ಚಿಸಿದೆ.

ಸದ್ಯ ಇದೇ ರೀತಿ ಇಲ್ಲೊಬ್ಬ ಗ್ರಾಹಕ ತನಿಷ್ಟದ ಸಸ್ಯಹಾರಿ​ ಆಹಾರವನ್ನು ಆನ್​ಲೈನ್​ ಆ್ಯಪ್​ನಿಂದ ಆರ್ಡರ್​ ಮಾಡಿ, ಕೆಲ ಸಮಯ ಡೆಲಿವರಿಗಾಗಿ ಕಾದು ಕುಳಿತ್ತಿದ್ದಾನೆ. ಆದರೆ, ಆರ್ಡರ್​ ತನ್ನ ಕೈಗೆ ಬಂದ ಬಳಿಕ ಅದನ್ನು ತೆರೆದು ನೋಡಿದವನಿಗೆ ಕಾದಿದ್ದು ಭಾರೀ ಅಚ್ಚರಿ! ಈ ವಿಷಯ ತಿಳಿಯುತ್ತಿದ್ದಂತೆ ಆತ ಹೋಟೆಲ್​ ಸಿಬ್ಬಂದಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಅಸಮಾಧಾನ ಹೊರಹಾಕಿದ್ದಾನೆ.

ಹೋಟೆಲ್​ವೊಂದರಿಂದ ವೆಜ್​ ಊಟವನ್ನು ಆರ್ಡರ್​ ಮಾಡಿದ್ದ ಗ್ರಾಹಕ, ಅದನ್ನು ಓಪನ್ ಮಾಡಿದಾಗ ಅದರಲ್ಲಿ ಮಾಂಸಹಾರಿ ಊಟ ಬಂದಿರುವುದನ್ನು ಕಂಡು ಕೆಂಡಮಂಡಲಗೊಂಡಿದ್ದಾರೆ. ಅಸಲಿಗೆ ಆತನಿಗೆ ಬರಬೇಕಿದ್ದು, ವೆಜ್​ ಬಾರ್ಬಿಕ್ಯು! ಆದರೆ ಬಂದದ್ದು ಮಾತ್ರ ನಾನ್​ ವೆಜ್​ ಫುಡ್​. ಇದು ಆತನ ತಾಳ್ಮೆಯನ್ನು ಪರೀಕ್ಷಿಸುವಂತೆ ಮಾಡಿತು. ಸದ್ಯ ಈ ಕುರಿತು ಆತ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇದು ನೆಟ್ಟಿಗರ ಆಕ್ರೋಶಕ್ಕೂ ಕಾರಣವಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net