More

    ಬೂಜು ಫಂಗಸ್ ಬರ್ತ್ಡೇ ಕೇಕ್ ತಿಂದು ಅಸ್ವಸ್ಥಗೊಂಡ ಮಕ್ಕಳು, ಬೇಕರಿ ಮಾಲೀಕರಿಗೆ ನೋಟಿಸ್

    ಚಿಕ್ಕಬಳ್ಳಾಪುರ: ಬೂಜು ಹಿಡಿದು ಫಂಗಸ್ ನಿಂದ ಕೂಡಿದ್ದ ಬರ್ತ್ಡೇ ಕೇಕ್ ತಿಂದು ಮಕ್ಕಳು ಅಸ್ವಸ್ಥಗೊಂಡಿದ್ದು ಆರೋಗ್ಯ ಇಲಾಖೆಯ ಅಧಿಕಾರಿಗಳು ಬೇಕರಿ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ.
    ಬಾಗೇಪಲ್ಲಿ ಪಟ್ಟಣದ ಗೂಳೂರು ಸರ್ಕಲ್‌ನಲ್ಲಿರುವ ಕೇಕ್ ಪಾಯಿಂಟ್ ಬೇಕರಿಯಲ್ಲಿ ವಲಯ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರ ಮಗುವಿನ ಬರ್ತ್ಡೇ ಕೇಕ್ ಖರೀದಿಸಿದ್ದು ಇದನ್ನು ಮಕ್ಕಳಿಗೆ ಹಂಚಿಕೆ ಮಾಡಲಾಗಿತ್ತು. ಇದನ್ನು ಸೇವಿಸಿದವರು ಅಸ್ವಸ್ಥಗೊಂಡಿದ್ದು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಎಲ್ಲರೂ ಚೇತರಿಸಿಕೊಂಡಿದ್ದಾರೆ.

    *ಗ್ರಾಹಕರ ಆಕ್ರೋಶ
    ಗುಣಮಟ್ಟವಿಲ್ಲದ ಕೇಕ್ ಅನ್ನು ಮಾರಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಸಭೆ ಸದಸ್ಯ ಗಡ್ಡಂ ರಮೇಶ್, ಕೇಕ್ ಪಾಯಿಂಟ್ ಬೇಕರಿ ಮಾಲೀಕರ ವಿರುದ್ಧ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ಇದರಿಂದ ಬಾಗೇಪಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ ಬೇಕರಿಗೆ ಭೇಟಿ ನೀಡಿ ಪರಿಶೀಲಿಸಿದರು. ಸ್ವಚ್ಛತೆ ನಿರ್ವಹಣೆ, ತಿಂಡಿ ತಿನಿಸುಗಳಿಗೆ ಬಳಸುವ ಉತ್ಪನ್ನಗಳು ಮತ್ತು ತಯಾರು ವಿಧಾನದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಜತೆಗೆ ಲೋಪಗಳು ಕಂಡು ಬಂದ ಹಿನ್ನೆಲೆಯಲ್ಲಿ ಬೇಕರಿಗೆ ನೋಟಿಸ್ ಸಹ ನೀಡಿದ್ದಾರೆ.

    *ಸ್ಯಾಂಪಲ್ಸ್ ಪ್ರಯೋಗಾಲಯಕ್ಕೆ
    ಮಕ್ಕಳು ಅಸ್ವಸ್ಥಗೊಳ್ಳಲು ಕಾರಣವಾಗಿರುವ ಅವಧಿ ಮುಗಿದ ವಿಷಪೂರಿತ ಕೇಕ್ ಸ್ಯಾಂಪಲ್ ಅನ್ನು ಗುಣಮಟ್ಟದ ಖಾತ್ರಿಯ ಪರೀಕ್ಷೆಗಾಗಿ ಬೆಂಗಳೂರಿನ ಐಡಿಎಫ್‌ಎಟಿ ಎಂಬ ಖಾಸಗಿ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts