ಇದು ನಾಯಿಯಲ್ಲ, ನಾಯಿಯಂತೆ ಕಾಣುವ ಮನುಷ್ಯ: 40 ದಿನಗಳೊಳಗೆ ಆಯ್ತು ರೂಪಾಂತರ!

Dog man
Published on

ನವದೆಹಲಿ: ಗಂಡು ಹೆಣ್ಣಾಗಿ, ಹೆಣ್ಣು ಗಂಡಾಗಿ ಪರಿವರ್ತನೆ ಮಾಡಿಸಿಕೊಂಡ ಪ್ರಕರಣಗಳು ಸಾಕಷ್ಟು ನಡೆದಿವೆ. ಆದರೆ ಇಲ್ಲೊಂದು ಪರಿವರ್ತನೆ ಮಾತ್ರ ಅತ್ಯಪರೂಪ. ಏಕೆಂದರೆ ಜಪಾನಿನ ಈ ವ್ಯಕ್ತಿ ತನ್ನನ್ನು ನಾಯಿಗೆ ರೂಪಾಂತರ ಮಾಡಿಸಿಕೊಂಡಿದ್ದಾನೆ.

ಟಿವಿ ಕಮರ್ಷಿಯಲ್ಸ್​ ಮತ್ತು ಸಿನಿಮಾಗಳಿಗೆ ಕಾಸ್ಟ್ಯೂಮ್ಸ್​ ತಯಾರಿಸುವ ಜಪಾನಿನ ಜೆಪೆಟ್ ಎಂಬ ಜಪಾನಿ ಈ ವ್ಯಕ್ತಿಯ ಹೈಪರ್ ರಿಯಾಲಿಸ್ಟಿಕ್ ಎನಿಸುವಂತೆ ನಾಯಿಯ ಸ್ವರೂಪ ನೀಡಿದೆ. ಫಿಗರೈನ್ಸ್​, ಬಾಡಿ ಸೂಟ್ಸ್​ ಮತ್ತು 3ಡಿ ಮಾಡೆಲ್ಸ್​ ತಯಾರಿಸುವ ಈ ಕಂಪನಿ ಇದಕ್ಕಾಗಿ 40 ದಿನಗಳನ್ನು ತೆಗೆದುಕೊಂಡಿದೆ.

ಜಪಾನಿನ ಟೋಕೋ ಎಂಬ ಈ ವ್ಯಕ್ತಿ ತನ್ನನ್ನು ಹೀಗೆ ನಾಯಿಯಂತೆ ಕಾಣಿಸಿಕೊಳ್ಳುವ ಹಾಗೆ ಮಾಡಿಕೊಳ್ಳಲು ಬರೋಬ್ಬರಿ 2 ಮಿಲಿಯನ್ ಯೆನ್​ ಅಂದರೆ ಸುಮಾರು 22000 ಡಾಲರ್ ಖರ್ಚು ಮಾಡಿದ್ದಾನೆ.

ಕೊಲಿ (collie) ಎಂಬ ತಳಿಯ ನಾಯಿಯಂತೆ ಕಾಣಿಸಿಕೊಂಡಿರುವ ಈ ವ್ಯಕ್ತಿ, ಪರಿವರ್ತನೆ ಬಳಿಕದ ವಿಡಿಯೋವೊಂದನ್ನು ತನ್ನ ಯೂಟ್ಯೂಬ್ ಚಾನೆಲ್​ನಲ್ಲಿ ಹಂಚಿಕೊಂಡಿದ್ದಾನೆ. ಈ ಮೂಲಕ ನನ್ನ ಬಾಲ್ಯದ ಕನಸು ನನಸಾಗಿದೆ ಎಂದೂ ಆತ ಹೇಳಿಕೊಂಡಿದ್ದಾನೆ. ನನ್ನ ಕುಟುಂಬಸ್ಥರು ಹಾಗೂ ಗೆಳೆಯರು ನಾನು ಪ್ರಾಣಿಯಂತಾಗಿದ್ದಕ್ಕೆ ಅಚ್ಚರಿಗೊಂಡಿದ್ದಾರೆ. ನನ್ನ ಸ್ನೇಹಿತರಿಗೆ ನಾನು ವಿಲಕ್ಷಣವಾಗಿ ಕಾಣಿಸಬಹುದು. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net