

ನವದೆಹಲಿ: ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯ ವೈದ್ಯರು ರೋಗಿಯೊಬ್ಬರ ಕರುಳಿನಿಂದ ಬರೋಬ್ಬರಿ 39 ನಾಣ್ಯಗಳು ಮತ್ತು 37 ಮ್ಯಾಗ್ನೆಟ್ಗಳನ್ನು ಯಶಸ್ವಿಯಾಗಿ ಹೊರತೆಗೆದಿದ್ದು, ಇಂತಹ ವಸ್ತುಗಳನ್ನು 20 ದಿನಗಳಿಂದ ಈತ ಸೇವಿಸುತ್ತಿದ್ದ ಎಂಬ ಅಚ್ಚರಿ ಸಂಗತಿಯನ್ನು ವೈದ್ಯರು ಬಹಿರಂಗಪಡಿಸಿದ್ದಾರೆ.
26ರ ಯುವಕ ಕಳೆದ 20 ದಿನಗಳಿಗಿಂತ 39 ನಾಣ್ಯಗಳು ಮತ್ತು 27 ಮ್ಯಾಗ್ನೆಟ್ಗಳನ್ನು ಸೇವಿಸುತ್ತ ಬಂದಿದ್ದಾನೆ. ಇದು ಕರುಳಿನ ಭಾಗದಲ್ಲಿ ಸಿಲುಕಿದ್ದು, ತೀವ್ರ ವಾಂತಿ ಮತ್ತು ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದ ಬಳಿಕವೇ ಈ ಸಂಗತಿ ಹೊರಬಿದ್ದಿದೆ. ಹೊಟ್ಟೆಯ ತುಂಬ ಈ ವಸ್ತುಗಳು ತುಂಬಿದ್ದರಿಂದ ಆತನಿಗೆ ಏನನ್ನೂ ತಿನ್ನಲು ಸಾಧ್ಯವಾಗಿಲ್ಲ ಎಂಬುದನ್ನು ವೈದ್ಯರು ಶಸ್ತ್ರಚಿಕಿತ್ಸೆ ಬಳಿಕ ತಿಳಿಸಿದ್ದಾರೆ.
ಕಳೆದ ಎರಡು-ಮೂರು ವಾರಗಳಿಂದ ಈ ಯುವಕ ನಾಣ್ಯಗಳು ತಿಂದು ಊಟ ಸೇರುತ್ತಿಲ್ಲ ತೀವ್ರ ಹೊಟ್ಟೆನೋವು ಎಂದಾಗ ಕುಟುಂಬಸ್ಥರು ವೈದ್ಯರ ಬಳಿ ಸಹಾಯ ಕೋರಿದ್ದಾರೆ. ಪ್ರಾಥಮಿಕ ಹಂತದಲ್ಲಿ ಪರೀಕ್ಷಿಸಿದ ವೈದ್ಯರು, ಇದು ಸಾಮಾನ್ಯ ಕೇಸ್ ಅಲ್ಲ ಎಂಬುದನ್ನು ದೃಢಪಡಿಸಿಕೊಂಡಿದ್ದಾರೆ. ತಕ್ಷಣವೇ ಹೊಟ್ಟೆಯ ಎಕ್ಸ್-ರೇ ತೆಗೆದಾಗ ಗೊತ್ತಾಗಿದ್ದೇ ಅವನ ಹೊಟ್ಟೆಯಲ್ಲಿ ನಾಣ್ಯಗಳು ಮತ್ತು ಮ್ಯಾಗ್ನೆಟ್ಗಳು ಇವೆ ಎಂಬುದು.
ಹೊಟ್ಟೆಯ ಸಿಟಿ ಸ್ಕ್ಯಾನ್ ದೊಡ್ಡ ಪ್ರಮಾಣದ ನಾಣ್ಯಗಳು ಮತ್ತು ಆಯಸ್ಕಾಂತಗಳಿರುವುದನ್ನು ತೋರಿಸಿದೆ. ಇದು ಒಳಗೆ ಯಾವ ಆಹಾರವನ್ನು ಪ್ರವೇಶಿಸಲು ಬಿಟ್ಟಿಲ್ಲ. ಈ ಸಂಗತಿ ಅರಿತ ಬೆನ್ನಲ್ಲೇ ವೈದ್ಯರು ತಕ್ಷಣವೇ ಶಸ್ತ್ರಚಿಕಿತ್ಸೆ ನಡೆಸಿ ನಾಣ್ಯಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಅಷ್ಟು ಮ್ಯಾಗ್ನೆಟ್ ಮತ್ತು ನಾಣ್ಯಗಳು ಸಣ್ಣ ಕರುಳಿನಲ್ಲಿ ಎರಡು ವಿಭಿನ್ನ ಕುಣಿಕೆಗಳಿಂದ ಯಶಸ್ವಿಯಾಗಿ ಹೊರತೆಗೆದಿದ್ದಾರೆ.
ವೈದ್ಯರು ಆತನ ಹೊಟ್ಟೆಯಿಂದ 39 ನಾಣ್ಯಗಳು (1, 2, 5 ರೂ. ನಾಣ್ಯಗಳು) ಮತ್ತು ವಿವಿಧ ಆಕಾರದ 37 ಮ್ಯಾಗ್ನೆಟ್ ಹೊರತೆಗೆದಿದ್ದಾರೆ. ವೈದ್ಯರ ಪ್ರಕಾರ, ಯುವಕ ಇಂತಹ ಗಟ್ಟಿ ವಸ್ತುಗಳನ್ನು ನುಂಗಲು ಕಾರಣ ಜಿಂಕ್ ಅಂಶಕ್ಕಾಗಿ. ಹೌದು, ಜಿಂಕ್ ಅಂಶ ನಮ್ಮ ದೇಹಕ್ಕೆ ಲಭಿಸಿದರೆ, ಉತ್ತಮ ಮೈಕಟ್ಟು ಹೊಂದಬಹುದು, ಬಾಡಿ ಬೆಳೆಸಬಹುದು ಎಂಬುದು ಅವನ ನಂಬಿಕೆಯಾಗಿತ್ತು. ನಾಣ್ಯಗಳು ಜಿಂಕ್ನಿಂದ ಮಾಡಲ್ಪಟ್ಟ ಕಾರಣ, ಆತ ಕಾಯಿನ್, ಮ್ಯಾಗ್ನೆಟ್ಗಳನ್ನು ನುಂಗಿದ್ದಾನೆ ಎಂದು ಹೇಳಿದರು.
ಸದ್ಯ ಯಶಸ್ವಿ ಶಸ್ತ್ರಚಿಕಿತ್ಸೆಯ ಬಳಿಕ ಡಿಸ್ಚಾರ್ಜ್ ಆಗಿರುವ ರೋಗಿಯು ಸಂಪೂರ್ಣವಾಗಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ವೈದ್ಯರು ಹೇಳಿದ್ದಾರೆ. ಯುವಕನು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಎಂದು ಹೇಳಲಾಗಿದ್ದು, ಈ ಹಿಂದೆ ಚಿಕಿತ್ಸೆ ಪಡೆದಿದ್ದರು ಎನ್ನಲಾಗಿದೆ,(ಏಜೆನ್ಸೀಸ್).