More

    ಕೇರಳದ ಹಳ್ಳಿಯೊಂದರ ಭತ್ತದ ಗದ್ದೆಯಲ್ಲಿ ಕ್ರಿಕೆಟ್ ಆಡುತ್ತಿದ್ದ ಹುಡುಗಿ ಇಂದು ಸ್ಟಾರ್ ಬ್ಯಾಟರ್!

    ಬೆಂಗಳೂರು: ಕೇರಳದ ಹಳ್ಳಿಯೊಂದರ ಭತ್ತದ ಗದ್ದೆಯಲ್ಲಿ ತೆಂಗಿನ ಗರಿ ಹಾಗೂ ಪ್ಲಾಸ್ಟಿಕ್ ಬ್ಯಾಟ್‌ನಲ್ಲಿ ಕ್ರಿಕೆಟ್ ಆಡುತ್ತಿದ್ದ ಹುಡುಗಿ ಇಂದು ಮಹಿಳೆಯರ ಶ್ರೀಮಂತ ಟಿ20 ಲೀಗ್‌ಗೆ ಯಶಸ್ವಿ ಪದಾರ್ಪಣೆ ಮಾಡುವ ಮೂಲಕ ರಾತ್ರಿ ಬೆಳಗಾಗುವುದರೊಳಗಾಗಿ ಜನಪ್ರಿಯತೆ ಗಳಿಸಿದ್ದಾರೆ. ವುಮೆನ್ಸ್ ಪ್ರಿಮೀಯರ್ ಲೀಗ್ 2ನೇ ಆವೃತ್ತಿಯ ಉದ್ಘಾಟನಾ ಪಂದ್ಯದ ಅಂತಿಮ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಡೆಲ್ಲಿ ಎದುರು ರೋಚಕ ಗೆಲುವು ತಂದುಕೊಟ್ಟ ಆಲ್ರೌಂಡರ್ ಸಜೀವನ್ ಸಜನಾ ‘ಮಹಿಳಾ ತಂಡದ ಕೈರಾನ್ ಪೊಲ್ಲಾರ್ಡ್’ ಎಂದೇ ಬಿಂಬಿತವಾಗಿದ್ದಾರೆ. ಜತೆಗೆ ಡಬ್ಲುೃಪಿಎಲ್‌ನಲ್ಲಿ ಭಾಗವಹಿಸಿರುವ ಮೊದಲ ಆದಿವಾಸಿ ಮಹಿಳೆ ಹಾಗೂ ಕೇರಳದ 2ನೇ ಮಹಿಳಾ ಕ್ರಿಕೆಟರ್ ಎನಿಸಿದ್ದಾರೆ.

    ಕೇರಳದ ವೈನಾಡು ಸಮೀಪದ ಮಾನಾಂತವಾಡಿ ಎಂಬ ಹಳ್ಳಿಯ ಆಟೋ ಡ್ರೈವರ್ ಸಜೀವನ್ ಹಾಗೂ ಶ್ರದ್ಧಾ ದಂಪತಿಯ ಪುತ್ರಿ ಸಜನಾ. ಈ ಕುಟುಂಬ 2018ರ ಪ್ರವಾಹದಲ್ಲಿ ಮನೆಯನ್ನು ಕಳೆದುಕೊಂಡಿತ್ತು. ಬೆನ್ನಲ್ಲೇ ಕರೋನಾದಿಂದಾಗಿಲೂ ಆರ್ಥಿಕ ಸಂಕಷ್ಟ ಎದುರಿಸಿತ್ತು. ಆಗ ಜಿಲ್ಲಾ ವಿಭಾಗದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದರೂ, ಪ್ರಯಾಣಕ್ಕೆ ಹಣವಿಲ್ಲದೆ ಸಜನಾ ಪರದಾಡಿದ್ದರು. ಒಮ್ಮೆ ಕೃಷ್ಣಗಿರಿ ಕ್ರೀಡಾಂಗಣಕ್ಕೆ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಭೇಟಿ ನೀಡಿದಾಗ, ಅವರ ಹಸ್ತಾಕ್ಷರ ಹೊಂದಿದ ಬ್ಯಾಟ್‌ಅನ್ನು ಉಡುಗೊರೆಯಾಗಿ ಪಡೆದ ಸಜನಾ ಕ್ರಿಕೆಟ್‌ನತ್ತ ಹೆಚ್ಚಿನ ಗಮನಹರಿಸಿ ಕೇರಳ 19 ವಯೋಮಿತಿ ತಂಡಕ್ಕೆ ಆಯ್ಕೆಯಾದರು. ದಿನಭತ್ಯೆ ಕೆಲಸದ ಜತೆಗೆ ಕ್ರಿಕೆಟ್ ಒಲವು ಬಿಡದ ಸಜನಾ, ಓದಿನಲ್ಲೂ ರಾಜ್ಯಶಾಸ ವಿಷಯದಲ್ಲಿ ಪದವಿ ಪೂರೈಸಿದ್ದಾರೆ. ಭಾರತ ಮಹಿಳಾ ತಂಡದ ಜೆರ್ಸಿ ಧರಿಸುವುದು ಅವರ ಕನಸಾಗಿದೆ. ಮೊದಲ ಆವೃತ್ತಿಯ ಡಬ್ಲುೃಪಿಎಲ್ ಹರಾಜಿನಲ್ಲಿ ಸೇಲಾಗದೆ ಉಳಿದ 29 ವರ್ಷದ ಸಜನಾ ಅವರನ್ನು 2023ರ ಮಿನಿ ಹರಾಜಿನಲ್ಲಿ ಮುಂಬೈ ತಂಡ 15 ಲಕ್ಷ ರೂ. ನೀಡಿ ಸೇರ್ಪಡೆ ಮಾಡಿಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts