More

  ನಾಳೆ ಆರು ತುಳು ಕೃತಿಗಳ ಬಿಡುಗಡೆ

  ಮಂಗಳೂರು: ತುಲುವೆರೆ ಕಲ ಸಂಘಟನೆ ವತಿಯಿಂದ ‘ತುಲುವೆರೆ ಕಲ ವರ್ಸೊಚ್ಚಯ’ ಅಂಗವಾಗಿ ಆರು ತುಳು ಕೃತಿಗಳ ಬಿಡುಗಡೆ ಮೇ 1ರಂದು ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದಲ್ಲಿ ನಡೆಯಲಿದೆ.

  ಸಂಘಟನೆ ಸದಸ್ಯರ ಕವನ, ಬರಹ ಸಂಗ್ರಹ ‘ಬೊಲ್ಲಿದಾರಗೆ’, ‘ಉದಿಪು’, ‘ಉಪ್ಪರಿಗೆ’, ‘ತುಡರ್’, ‘ಕೇಪುಲ’, ‘ಪುಂಡಿಕಾಣಿಕೆ’ ಕೃತಿಗಳನ್ನು ವಿಜಯಲಕ್ಷ್ಮೀ ಕಟೀಲ್, ಡಾ.ಮೀನಾಕ್ಷಿ ರಾಮಚಂದ್ರ, ರಾಜಶ್ರೀ ಟಿ.ರೈ ಪೆರ್ಲ, ವೀಣಾ ಟಿ.ಶೆಟ್ಟಿ, ರಘು ಇಡ್ಕಿದು, ಅಕ್ಷಯಾ ಆರ್.ಶೆಟ್ಟಿ ಬಿಡುಗಡೆಗೊಳಿಸಲಿದ್ದಾರೆ. ಶಾರದಾ ವಿದ್ಯಾಲಯ ಪ್ರಾಂಶುಪಾಲ ದಯಾನಂದ ಕಟೀಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತುಲುವೆರೆ ಕಲ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಕದ್ರಿ ನವನೀತ ಶೆಟ್ಟಿ ಸಂಘಟನೆ ಯೂಟ್ಯೂಬ್ ಚಾನೆಲ್ ಲೋಕಾರ್ಪಣೆಗೊಳಿಸಲಿದ್ದಾರೆ. ಕಾ.ವೀ ಕೃಷ್ಣದಾಸ್ ಮತ್ತಿತರರು ಭಾಗವಹಿಸಲಿದ್ದಾರೆ.

  ‘ತುಳು ಸಾಹಿತ್ಯದ ಬುಲೆಚ್ಚಿಲ್‌ದ ತಾದಿ ಆನಿ-ಇನಿ-ನನ’ ವಿಚಾರ ಕುರಿತು ಸಾಹಿತಿ ಮುದ್ದು ಮೂಡುಬೆಳ್ಳೆ ಮಾತನಾಡಲಿದ್ದಾರೆ. ಹರಿಣಿ ಎಂ.ಶೆಟ್ಟಿ, ದಿವ್ಯಾ ಅಂಚನ್ ಪಕ್ಷಿಕೆರೆ, ಪದ್ಮನಾಭ ಪೂಜಾರಿ ನೇರಂಬೋಳು ಅವರಿಗೆ ‘ಕಲತ ಬೊಲ್ಲಿ’ ಪುರಸ್ಕಾರ ಪ್ರದಾನಿಸಲಾಗುವುದು.

  40 ಕವಿಗಳಿಂದ ಅಮೃತ ತುಲು ಚಿಟ್ಕಾ ಕಬಿಕೂಟ, ಪದರಂಗಿತ ಮಿನದನ ಹಾಗೂ ಚಾತುರ್ಪು ತೂಪರಿಕೆ ನಡೆಯಲಿದೆ. ಸದಾನಂದ ನಾರಾವಿ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts