More

    IPL 2024: ಈ ಸ್ಟಾರ್​ ಆಟಗಾರ ಇಲ್ಲದಿದ್ದರೆ ಐಪಿಎಲ್ ನೋಡಲು ಬಲುಕಷ್ಟ ಅಂತಿದ್ದಾರೆ ಫ್ಯಾನ್ಸ್​!

    ಬೆಂಗಳೂರು: ಇಂಡಿಯನ್ ಪ್ರೀಮಿಯರ್​ ಲೀಗ್ (IPL) 2024ರ ಆವೃತ್ತಿಗೆ ಈಗಾಗಲೇ ದಿನಗಣನೆ ಆರಂಭಗೊಂಡಿದ್ದು, ಇತ್ತೀಚೆಗಷ್ಟೇ ಬಿಸಿಸಿಐ ಕೂಡ ಮೊದಲ ಹಂತದಲ್ಲಿ ನಡೆಯಲಿರುವ 21 ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿತು. ತಮ್ಮ ನೆಚ್ಚಿನ ತಂಡಗಳು ಆಡಲಿರುವ ಮೊದಲ ಪಂದ್ಯಗಳ ದಿನಕ್ಕಾಗಿ ಕುತೂಹಲದಿಂದ ಕಾಯುತ್ತಿರುವ ಕ್ರಿಕೆಟ್ ಅಭಿಮಾನಿಗಳು, ಇದೀಗ ವಿರಾಟ್​ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಮತ್ತು ಮಹೇಂದ್ರ ಸಿಂಗ್ ಧೋನಿ ಕ್ಯಾಪ್ಟನ್ಸಿಯ ಚೆನ್ನೈ ಸೂಪರ್ ಕಿಂಗ್ಸ್​ ನಡುವಿನ ಹೈವೋಲ್ಟೇಜ್ ಪಂದ್ಯ ವೀಕ್ಷಿಸಲು ಕಾತರದಿಂದ ಎದುರುನೋಡುತ್ತಿದ್ದಾರೆ.

    ಇದನ್ನೂ ಓದಿ: ಎಸ್​ಐ ನೇಮಕಾತಿ ಮತ್ತೆ ಹೈಕೋರ್ಟ್ ಅಂಗಳಕ್ಕೆ? 545 ಹುದ್ದೆಗಳಿಗೆ ನಡೆದ ಮರು ಲಿಖಿತ ಪರೀಕ್ಷೆ ಇನ್​ಸರ್ವಿಸ್ ಅಭ್ಯರ್ಥಿಗಳಿಗೆ ಅನ್ಯಾಯ

    ಐಪಿಎಲ್ ಆವೃತ್ತಿ ಪ್ರಾರಂಭವಾಗುತ್ತಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳಲ್ಲಿ ಅದೇನೋ ಉತ್ಸಾಹ, ಭಾರೀ ಕೌತುಕ. ಕಾರಣ ಈ ಲೀಗ್​ನಲ್ಲಿ ನಡೆಯಲಿರುವ ಪ್ರತಿಯೊಂದು ಪಂದ್ಯಗಳು ಕೂಡ ಅಷ್ಟೇ ರೋಚಕ, ರೋಮಾಂಚನ, ಭರಪೂರ ಮನರಂಜನೆಯನ್ನು ನೀಡುತ್ತದೆ. ಈ ಹಿಂದೆ 8 ತಂಡಗಳು ಅಖಾಡಕ್ಕೆ ಇಳಿದು ಭರ್ಜರಿ ಪೈಪೋಟಿ ಕೊಡುತ್ತಿತ್ತು. ಆದರೆ ಈಗ 10 ಟೀಮ್​ಗಳಿದ್ದು, ಕ್ರಿಕೆಟ್ ಫ್ಯಾನ್ಸ್​ಗೆ ಭರಪೂರ ಮನರಂಜನೆಯ ರಸದೌತಣ ನೀಡಲು ಸಜ್ಜಾಗಿವೆ.

    ಪ್ರತಿಯೊಂದು ತಂಡ ಅದರದ್ದೇ ಆದ ವಿಶೇಷ ಅಭಿಮಾನಿ ಬಳಗವನ್ನು ಹೊಂದಿದ್ದು, ಆಯಾ ಟೀಮ್​ನ ಸ್ಟಾರ್​ ಆಟಗಾರರೇ ಫ್ಯಾನ್ಸ್​ಗಳಿಗೆ ಪ್ರಮುಖ ಆಕರ್ಷಣೆ. ವಿರಾಟ್ ಕೊಹ್ಲಿ, ಡೇವಿಡ್ ವಾರ್ನರ್, ಎಂ.ಎಸ್. ಧೋನಿ, ಜಡೇಜಾ, ಫಾಫ್ ಡುಪ್ಲೇಸಿಸ್​, ರೋಹಿತ್ ಶರ್ಮಾ, ಕೀರಾನ್ ಪೋಲಾರ್ಡ್​, ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್ ಹೀಗೆ ಮುಂತಾದವರು ಸ್ಟಾರ್ ಆಕರ್ಷಣೆ. ಇವರೆಲ್ಲರೂ ತಮ್ಮ ತಮ್ಮ ಟೀಮ್​ನಲ್ಲಿದ್ದರೆ ಒಂದೊಳ್ಳೆ ಪೈಪೋಟಿಯಿರುವ ಮ್ಯಾಚ್​ ನೋಡಬಹುದು ಎಂಬುದು ನೋಡುಗರ ಲೆಕ್ಕಾಚಾರ.

    ಇದನ್ನೂ ಓದಿ: ಲೋಕಸಭಾ ಚುನಾವಣೆ 2024: ಚಿನ್ನದನಾಡಲ್ಲಿ ಸ್ಪರ್ಧೆಗೆ ಪೈಪೋಟಿ

    ಈ ರೀತಿ ಎಲ್ಲಾ ತಂಡದಲ್ಲಿಯೂ ಒಬ್ಬೊಬ್ಬರು ಸ್ಟಾರ್ ಆಟಗಾರರಿದ್ದಾರೆ. ಆ ಪೈಕಿ ಹೆಚ್ಚು ಪ್ರಚಲಿತದಲ್ಲಿರುವುದು ಎಂದರೆ ಅದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ, ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ. ಹೌದು, ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚಿನ ದಾಖಲೆಗಳನ್ನು ಹೊಂದಿರುವ ಸಿಎಸ್​ಕೆ ತಂಡ ಐದು ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಲು ನಾಯಕನಾಗಿ ಪ್ರಮುಖ ಪಾತ್ರ ವಹಿಸಿರುವ ಧೋನಿಗೆ ವಿಶೇಷ ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ.

    2008ರಿಂದ ಐಪಿಎಲ್ ಆಡುತ್ತಿರುವ ಕ್ಯಾಪ್ಟನ್ ಕೂಲ್, ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಯಶಸ್ವಿ ನಾಯಕರಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ತಮ್ಮ ತಾಳ್ಮೆ ಹಾಗೂ ಬುದ್ದಿವಂತಿಕೆ ಆಟದಿಂದಲೇ ಹೆಚ್ಚು ಜನಪ್ರಿಯತೆ ಪಡೆದಿರುವ ಧೋನಿ, ಇದೀಗ ತಮ್ಮ 42ನೇ ವಯಸ್ಸಿನಲ್ಲೂ ಅಖಾಡಕ್ಕೆ ಇಳಿಯುವ ಮೂಲಕ ಅಭಿಮಾನಿಗಳ ಕ್ರೇಜ್​ ಅನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

    ಇದನ್ನೂ ಓದಿ: ಬಿಜಿನೆಸ್ ಕಾನಕ್ಲೇವ್ ಗೆ ಅದ್ದೂರಿ ತರೆ, ಉದ್ಯಮ ದಿಗ್ಗಜರು, ಗಣ್ಯರಿಂದ ಪ್ರದರ್ಶನ ವೀಕ್ಷಣೆ

    ಅಂತಾರಾಷ್ಟ್ರೀಯ ಕ್ರಿಕೆಟ್​ ಫಾರ್ಮೆಟ್​ಗಳಿಗೆ ಧೋನಿ ನಿವೃತ್ತಿ ಘೋಷಿಸಿದ ದಿನದಿಂದಲೂ ಇದೇ ಕಡೆಯ ಬಾರಿಗೆ ಕ್ಯಾಪ್ಟನ್ ಕೂಲ್ ಸಿಎಸ್​ಕೆ ತಂಡವನ್ನು ಮುನ್ನಡೆಸಲಿದ್ದಾರೆ. ಮುಂಬರುವ ಐಪಿಎಲ್​ನಲ್ಲಿ ಧೋನಿ ಆಡುವುದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಇದೆಲ್ಲವನ್ನೂ ತಮ್ಮ ಪುನರ್ ಆಗಮನದ ಮೂಲಕ ಹುಸಿ ಮಾಡುತ್ತಿದ್ದಾರೆ ಮಾಹಿ. ಒಂದೆಡೆ ಇದೇ ಲಾಸ್ಟ್​ ಐಪಿಎಲ್ ಇರಬಹುದು ಎಂದು ಅತೀವ ಬೇಸರದಿಂದಲೇ ಕೊನೆಯ ಪಂದ್ಯದವರೆಗೂ ಕಾಯುವ ಅಭಿಮಾನಿಗಳಿಗೆ ಮುಂದಿನ ವರ್ಷವೂ ಕ್ಯಾಪ್ಟನ್ ಕೂಲ್ ಫೀಲ್ಡ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಅಧಿಕೃತವಾದಾಗ ಆಗುವ ಸಂತಸ ಅಷ್ಟಿಷ್ಟಲ್ಲ.

    ಕಳೆದ ವರ್ಷವೇ ಧೋನಿ ಮುಂದಿನ ಸೀಸನ್​ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದಾಗ ಕ್ರಿಕೆಟ್ ಅಭಿಮಾನಿಗಳು ನೀವಿಲ್ಲದಿದ್ದರೇ ಐಪಿಎಲ್ ನೋಡಲು ಬಲುಕಷ್ಟ ಎಂದಿದ್ದರು. ಇದೀಗ ಈ ವಿಷಯ ಈ ಬಾರಿಯೂ ಮುನ್ನೆಲೆಗೆ ಬಂದಿದ್ದು, 2024ರ ಸೀಸನ್​ ಧೋನಿ ಅವರ ಕಡೆಯ ಐಪಿಎಲ್ ಆವೃತ್ತಿ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ತಿಳಿಯಲು ಈ ಸೀಸನ್​ನ ಕೊನೆಯ ಪಂದ್ಯದವರೆಗೂ ಕಾಯಬೇಕಿದೆ.

    ಈ ನಟ ಯಾರೆಂದು ಗೊತ್ತಿಲ್ಲದಿದ್ದರೂ ಇವರ ಡೈಲಾಗ್ ಮಾತ್ರ ಪಕ್ಕಾ ನೆನಪಿರುತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts