

ಹುಬ್ಬಳ್ಳಿ: ಇಲ್ಲಿಯ ಬಿವಿಬಿ ಕಾಲೇಜು ಆವರಣದಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ ವತಿಯಿಂದ ಮೂರು ದಿನಗಳ ಕಾಲ ಏರ್ಪಡಿಸಿದ್ದ ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನಕ್ಲೇವ್ ಭಾನುವಾರ ಸಂಜೆ ಅದ್ದೂರಿ ತೆರೆ ಕಂಡಿತು.
ಉದ್ಯಮ ಕ್ಷೇತ್ರದ ಗಣ್ಯರು, ಸಾಧಕರು ತಮ್ಮ ಅನುಭವ ಹಂಚಿಕೊಳ್ಳುವ ಮೂಲಕ ಯುವ ಉದ್ಯಮಿಗಳಿಗೆ ಪ್ರೇರಣೆ ನೀಡಿದರು. ಈಗಾಗಲೇ ಉದ್ಯಮದಲ್ಲಿ ಇರುವವರಿಗೆ ಸಲಹೆಗಳು ಉಪಯುಕ್ತವಾದವು. ವಸ್ತು ಪ್ರದರ್ಶನ ಮೇಳಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಯಿತು.
ಭಾನುವಾರ ಸಂಜೆ ನಡೆದ ಕಾನಕ್ಲೇವ್ ಸಮಾರೋಪದಲ್ಲಿ ಅತಿಥಿಯಾಗಿದ್ದ ಶಾಸಕ ಅರವಿಂದ ಬೆಲ್ಲದ ಅವರು, ಇದು ಜ್ಞಾನದ ಯುಗವಾಗಿದ್ದು, ಅದನ್ನು ಯಾರು ಸಮರ್ಪಕ ಬಳಕೆ ಮಾಡಿಕೊಳ್ಳುತ್ತಾರೋ ಅವರು ಯಶಸ್ವಿಯಾಗುತ್ತಾರೆ ಎಂದರು.
ಉದ್ಯಮದಲ್ಲಿ ಯಶಸ್ಸಿಗೆ ಯಾವುದೇ ಶಾರ್ಟ್ ಕಟ್ ಎಂಬುದಿಲ್ಲ. ಕಠಿಣ ಪರಿಶ್ರಮ ಅಗತ್ಯ. ಜತೆಗೆ ಗಮನ (ಫೋಕಸ್) ಕೇಂದ್ರೀಕರಣವೂ ಮುಖ್ಯ. ಈ ವಿಷಯದಲ್ಲಿ ವಿಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ನಮಗೆ ಮಾದರಿ ಎಂದರು.
ಜೆಎಂಡಿ ಅಶೋಕ ಐರನ್ ಕಂಪನಿ ಫೌಂಡರ್ ಜಯಂತ್ ಹುಂಬರವಾಡಿ ಮಾತನಾಡಿ, ಪಾರಂಪರಿಕವಾಗಿ ಕೃಷಿ ಹಾಗೂ ವ್ಯಾಪಾರ ಮಾಡುತ್ತ ಬಂದಿರುವ ವೀರಶೈವ ಲಿಂಗಾಯತ ಸಮುದಾಯದವರು ಉದ್ಯಮಿಗಳಾಗಿ ಉದ್ಯೋಗದಾತರಾಗಬೇಕು. ಇದಕ್ಕೆ ಸೂಕ್ತ ವೇದಿಕೆಗಳು ಈಗ ಸಿಗುತ್ತಿವೆ ಎಂದರು.
ವಿಧಾನ ಪರಿಷತ್ ಸದಸ್ಯ ನವೀನ ಕೊಟಗಿ ಮಾತನಾಡಿ, ಇಡೀ ದೇಶಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಅತೀ ಹೆಚ್ಚು ಜಿಎಸ್ಟಿ ಸಂಗ್ರಹವಾಗುತ್ತಿದೆ. ಇದರಲ್ಲಿ ವೀರಶೈವ ಲಿಂಗಾಯತ ಸಮುದಾಯದ ಪಾಲು ಅತಿ ದೊಡ್ಡದಿದೆ. ಸಮಾಜದಲ್ಲಿ ಹುಟ್ಟಿನಿಂದಲೇ ಮಕ್ಕಳಿಗೆ ಸಂಸ್ಕಾರ ನೀಡಬೇಕು. ಇದಕ್ಕಾಗಿ ಶಿಣ ಎಲ್ಲರಿಗೂ ದೊರೆಯಬೇಕು ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ವೀರಶೈವ ಲಿಂಗಾಯತ ಸಮುದಾಯವೂ ಐಲೈ್ ಮೂಲಕ ಒಂದಾಗಿದೆ. ವ್ಯಾಪಾರ ಉದ್ಯಮ ೇತ್ರದಲ್ಲಿ ಇಂದು ಹಲವು ಬದಲಾವಣೆಯಾಗಿವೆ. ಪರಿವರ್ತನೆಯೊಂದಿಗೆ ಉದ್ಯಮದಲ್ಲಿ ಹೆಜ್ಜೆ ಹಾಕಿದರೆ ಯಶಸ್ವಿ ಉದ್ಯಮಿ ಆಗಬಹುದು ಎಂದರು.
ಕಾನಕ್ಲೇವ್ ಮುಖ್ಯ ಸಂಚಾಲಕ ಸಂತೋಷ ಕೆಂಚಾಂಬ ಮಾತನಾಡಿ, ಐಲೈ್ ಸ್ಥಾಪನೆಯಾಗಿ 11 ವರ್ಷಗಳಾಗಿವೆ. ಪ್ರತಿಯೊಬ್ಬರಿಗೂ ಸ್ವಯಂ ಉದ್ಯೋಗ ದೊರೆಯಬೇಕು ಎಂಬ ಉದ್ದೇಶದಿಂದ ಈ ಸಂಟನೆ ಆರಂಭಿಸಲಾಗಿದೆ. ಸ್ವಾಭಿಮಾನದಿಂದ ನಾವು ಬದುಕಬೇಕು. ವಿಚಾರ ವಿನಿಮಯ ಮಾಡಿಕೊಂಡು ಇನ್ನಷ್ಟು ಕಾಯಕ ಸೃಷ್ಟಿ ಮಾಡಬೇಕಿದೆ ಎಂದರು.
ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಸಮಾಜ ಒಗ್ಗೂಡಿಸುವ ಕೆಲಸ ಮಾಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಲಿದೆ. ಉದ್ಯಮ ಕ್ಲಸ್ಟರ್ ಅಭಿವೃದ್ಧಿಗೆ ಅನೇಕ ಯೋಜನೆಗಳು ಜಾರಿಯಲ್ಲಿವೆ. ಅವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀೆಗಳನ್ನು ಎದುರಿಸಲು ವಿದ್ಯಾಥಿರ್ಗಳಿಗೆ ಸೂಕ್ತ ತರಬೇತಿ ನೀಡುವ ಕೆಲಸ ಆಗಬೇಕು ಎಂದು ಹೇಳಿದರು.
ಬೆಳಗಾವಿ ಪೊಲೀಸ್ ಆಯುಕ್ತ ಸಿದ್ದರಾಮಪ್ಪ, ಚನ್ನು ಹೊಸಮನಿ, ರವಿರಾಜ ಕಮ್ಮಾರ, ಇತರರು ಇದ್ದರು. ಕಾನಕ್ಲೇವ್ ಸಹಸಂಚಾಲಕ ರಮೇಶ ಪಾಟೀಲ ಸ್ವಾಗತಿಸಿದರು.
ಗ್ರಾಹಕರ ಸಂತೃಪ್ತಿಯೆ ಮುಖ್ಯ: ಒಂದು ಕಂಪನಿ, ಉದ್ಯಮದ ಬೆಳವಣಿಗೆಯಲ್ಲಿ ಗ್ರಾಹಕರ ಸಂತೃಪ್ತಿಯೇ ಪ್ರಮುಖವಾಗಿರುತ್ತದೆ. ಗುಣಮಟ್ಟದ ಸೇವೆಯು ನಮ್ಮ ಉದ್ದೇಶವಾಗಿರಬೇಕು, ವಿಆರ್ ಎಲ್ ಸಂಸ್ಥೆಗೆ ಗ್ರಾಹಕರೇ ಜೀವಾಳವಾಗಿದ್ದಾರೆ ಎಂದು ವಿಆರ್ ಎಲ್ ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್ ಎಂಡಿ ಶಿವಾ ಸಂಕೇಶ್ವರ ಅವರು ಹೇಳಿದರು.
ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನಕ್ಲೇವ್ ಸಮಾರೋಪದಲ್ಲಿ ಅತಿಥಿಗಳಾಗಿ ಮಾತನಾಡಿದ ಅವರು, ಗ್ರಾಹಕರ ಬೆಂಬಲ ಇಲ್ಲದೇ ಕಂಪನಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಕುಟುಂಬದ ವ್ಯವಹಾರವೇ ಆಗಿದ್ದರೂ ಕಠಿಣ ಪರಿಶ್ರಮ, ನಿರಂತರ ಪ್ರಯತ್ನ ಬೇಕೇಬೇಕು ಎಂದು ಪ್ರತಿಪಾದಿಸಿದರು.
ಜ್ಞಾನವು ಒಬ್ಬ ವ್ಯಕ್ತಿಗೆ ಆಸ್ತಿ ಇದ್ದಂತೆ. ಅದರೊಂದಿಗೆ ಪ್ರತಿಭೆ, ಹಿಡಿದ ಕೆಲಸ ಕೈಬಿಡದೇ ಮಾಡುವ ಹಠ ಇರಬೇಕು. ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿ (ಎಐ) ಮತ್ತೆ ಬಗ್ಗೆ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಎಲ್ಲ ಕ್ಷೇತ್ರಕ್ಕೂ ಎಐ ಅಳವಡಿಸುವುದು ಸುಸ್ಥಿರ ಅಭಿವೃದ್ಧಿ ದೃಷ್ಟಿಯಿಂದ ಸೂಕ್ತವಲ್ಲ. ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಎಐ ಬಳಸಿಕೊಂಡರೆ ಉತ್ತಮ ಎಂದು ಅಭಿಪ್ರಾಯಪಟ್ಟರು.
ಐಲೈಫ್ ಉತ್ತಮ ಕಾರ್ಯ ಮಾಡುತ್ತಿದೆ. ವಸ್ತು ಪ್ರದರ್ಶನದಿಂದ ಅನೇಕರಿಗೆ ಪ್ರೇರಣೆ ಸಿಕ್ಕಿದೆ ಎಂದರು.
ಪ್ರದರ್ಶನಕ್ಕೆ ಭೇಟಿ: ವಿಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹಾಗೂ ವಿಆರ್ ಎಲ್ ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್ ಎಂಡಿ ಶಿವಾ ಸಂಕೇಶ್ವರ ಅವರು ಐಲೈಫ್ ಆಯೋಜಿಸಿದ್ದ ವಸ್ತು ಪ್ರದರ್ಶನ ಮೇಳಕ್ಕೆ ಭಾನುವಾರ ಭೇಟಿ ನೀಡಿ ವೀಕ್ಷಣೆ ಮಾಡಿದರು. ವಿವಿಧ ಕಂಪನಿಗಳ ಉತ್ಪಾದನೆ, ವಸ್ತುಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.