

ಗುಣದಾಳ: ಒಂದೇ ಭಾವಚಿತ್ರ ಬಳಸಿ 658 ಸಿಮ್ ವಿತರಣೆ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯ ಗುಣದಾಳ ಬಳಿ ನಡೆದಿದೆ.
ಇದನ್ನೂ ಓದಿ: ಬಾಯ್ ಫ್ರೆಂಡ್ ಜೊತೆ ಮದುವೆಯಾಗಲು ತಂದೆ ಅಡ್ಡಿ: ಮಗಳ ಪ್ಲ್ಯಾನ್ ಪೊಲೀಸರನ್ನೂ ಬೆಚ್ಚಿ ಬೀಳಿಸಿತ್ತು..!
ಟೆಲಿಕಾಂ ಇಲಾಖೆ (DoT) ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ನಕಲಿ ಸಿಮ್ ಕಾರ್ಡ್ ದಂಧೆಯ ಮೇಲೆ ಚಾಟಿ ಬೀಸಿದ್ದು, ಒಂದೇ ಫೋಟೋ ಮತ್ತು ಒಂದೇ ನೆಟ್ವರ್ಕ್ ಹೊಂದಿರುವ ವ್ಯಕ್ತಿಗೆ 658 ಸಿಮ್ ಕಾರ್ಡ್ಗಳನ್ನು ವಿತರಿಸಲಾಗಿದೆ. ಗುಣದಾಳ ನಗರದ ಸತ್ಯನಾರಾಯಣಪುರದ ಪೋಲುಕೊಂಡ ನವೀನ್ ಎಂಬ ಯುವಕನ ಒಂದೇ ಫೋಟೋ 658 ಸಿಮ್ ಕಾರ್ಡ್ಗಳ ನೋಂದಣಿಯಾಗಿದೆ.
ಅಲ್ಲದೆ, ನಗರದ ಅಜಿತ್ಸಿಂಗ್ನಗರ ಮತ್ತು ವಿಸ್ಸನ್ನಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇನ್ನೂ 150 ಸಿಮ್ ಕಾರ್ಡ್ಗಳನ್ನು ನಕಲಿ ದಾಖಲೆಗಳೊಂದಿಗೆ ನೀಡಿರುವುದು ಪತ್ತೆಯಾಗಿದೆ. ಸಿಮ್ ಕಾರ್ಡ್ ವಂಚನೆಗೆ ಕಡಿವಾಣ ಹಾಕಲು ದೂರಸಂಪರ್ಕ ಇಲಾಖೆಯ ಕೃತಕ ಬುದ್ಧಿಮತ್ತೆ ಚಾಲಿತ ಎಐ ಟೂಲ್ ಕಿಟ್ನ ಫಿಲ್ಟರ್ನಲ್ಲಿ ಇದು ತಿಳಿದು ಬಂದಿದೆ.
ಇದನ್ನೂ ಓದಿ: ಮ್ಯೂಸಿಕ್ ಕಂಪನಿಗೆ ನುಗ್ಗಿ ಉದ್ಯಮಿಯ ಅಪಹರಣ: ಶಾಸಕನ ಪುತ್ರ ಸೇರಿ ಹಲವರ ವಿರುದ್ಧ ಎಫ್ಐಆರ್
ಟೆಲಿಕಾಂ ಸಿಮ್ ಚಂದಾದಾರರ ಪರಿಶೀಲನೆ (ASTR) ಸಾಫ್ಟ್ವೇರ್ಗಾಗಿ ಕೃತಕ ಬುದ್ಧಿಮತ್ತೆ ಬಳಸುತ್ತಿದ್ದು, ಇದು ಮುಖ ಗುರುತಿಸುವಿಕೆ, ಸಿಮ್ ಕಾರ್ಡ್ ವಂಚನೆಗಳನ್ನು ಪತ್ತೆಹಚ್ಚಲು ಸಮರ್ಥವಾಗಿದೆ. ಇದು ಎಲ್ಲಾ ಟೆಲಿಕಾಂ ಆಪರೇಟರ್ಗಳಿಂದ SIM ಕಾರ್ಡ್ ಹೊಂದಿರುವವರ IDಗಳನ್ನು ಫಿಲ್ಟರ್ ಮಾಡುತ್ತದೆ. ಹೀಗೆ ಮಾಡುವಾಗ ನವೀನ್ ಸುಮಾರು 658 ಸಿಮ್ ತೆಗೆದುಕೊಂಡಿರುವುದೂ ಬೆಳಕಿಗೆ ಬಂದಿದೆ.
ನಕಲಿ ದಾಖಲೆಗಳೊಂದಿಗೆ ನೀಡಿದ ಸಿಮ್ ಕಾರ್ಡ್ಗಳು ಸಮಾಜಘಾತುಕ ಶಕ್ತಿಗಳ ಕೈಗೆ ಬಿದ್ದರೆ, ಭೀಕರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ನವೀನ್ ಹೆಸರಿನಲ್ಲಿ ನೋಂದಾಯಿಸಲಾದ ಈ ಎಲ್ಲಾ ಸಿಮ್ ಕಾರ್ಡ್ಗಳನ್ನು ಯಾರು ಬಳಸುತ್ತಿದ್ದಾರೆ? ಎಲ್ಲಿದ್ದಾರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್)