ಕುತ್ತಿಗೆ ಕಚ್ಚಿ ರಕ್ತ ಕುಡಿಯಲು ಮುಂದಾದ ಯುವಕ: ರಕ್ತಪಿಪಾಸುವಿನ ಜೀವ ತೆಗೆದ ಸ್ನೇಹಿತ

police
ಸಾಂದರ್ಭಿಕ ಚಿತ್ರ
Published on

ಪಿಂಪ್ರಿ: ಕತ್ತು ಕಚ್ಚಿ ರಕ್ತ ಕುಡಿಯಲು ಮುಂದಾದ ಯುವಕನ ಪ್ರಾಣವನ್ನು ಆತನ ಗೆಳೆಯನೇ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಪಿಂಪ್ರಿ-ಚಿಂಚ್‌ವಾಡ್ ಜಿಲ್ಲೆಯಲ್ಲಿ ನಡೆದಿದೆ.

ಇದನ್ನೂ ಓದಿ: ಪತಿ ಲಂಚ ಪಡೆದಿದ್ದಕ್ಕೆ ಮೇಯರ್ ಸ್ಥಾನದಿಂದ ಪತ್ನಿ ವಜಾ..

ಇಶ್ತಿಯಾಕ್ ಖಾನ್ ಮೃತ ದುರ್ದೈವಿಯಾಗಿದ್ದು, ರಾಹುಲ್ ಲೋಹರ್ ಎಂಬಾತನೇ ಆತನನ್ನು ಬರ್ಬರವಾಗಿ ಕೊಲೆಗೈದ ಆರೋಪಿಯಾಗಿದ್ದಾನೆ. ಇಬ್ಬರು ತಮ್ಮ ಸ್ನೇಹಿತರೊಂದಿಗೆ ಮದ್ಯ ಸೇವಿಸಿದ ಬಳಿಕ ಈ ಘಟನೆ ನಡೆದಿದೆ. ಇಬ್ಬರು ತಮ್ಮ ಸ್ನೇಹಿತರೊಂದಿಗೆ ಕೂಡಿಕೊಂಡು ಮದ್ಯ ಸೇವಿಸಿದ್ದರು. ಕುಡಿದ ಅಮಲಿನಲ್ಲಿ ಇಶ್ತಿಯಾಕ್, ರಾಹುಲ್​ಗೆ ರಕ್ತ ಕುಡಿಸುವಂತೆ ವಿಚಿತ್ರ ಮನವಿ ಮಾಡಿ ಕೂಡಲೇ ಆತನ ಕುತ್ತಿಗೆಗೆ ಕಚ್ಚಿದ್ದಾನೆ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದು ಮಾರಾಮಾರಿ ನಡೆದಿದ್ದು, ಬಳಿಕ ರಾಹುಲ್ ಅಲ್ಲಿಂದ ನಿರ್ಗಮಿಸಿದ್ದಾನೆ.

man bites neck

ಏತನ್ಮಧ್ಯೆ, ಸ್ವಲ್ಪ ಸಮಯದ ನಂತರ ರಾಹುಲ್ ಮತ್ತೆ ಇಶ್ತಿಯಾಕ್​​ನ್ನು ಭೇಟಿಯಾಗಿ, ನೀನು ನನ್ನ ರಕ್ತವನ್ನು ಕುಡಿಯಲು ಬಯಸುತ್ತೀಯಾ? ನಿನ್ನನ್ನು ಬದುಕಲು ಬಿಡುವುದಿಲ್ಲ ಎಂದು ಆತನ ಮೇಲೆ ಹಲ್ಲೆ ನಡೆಸಿದ್ದಾನೆ. ಕೊನೆಗೆ ಜಗಳದ ನಡುವೆ ಆರೋಪಿಯು, ದೊಡ್ಡ ಕಲ್ಲನ್ನು ಎತ್ತಿ ಹಾಕಿ ತನ್ನ ಸ್ನೇಹಿತನ ತಲೆಯನ್ನು ಒಡೆದು ಹಾಕಿ ಹತ್ಯೆಗೈದಿದ್ದಾನೆ. ಈ ವಿಷಯ ತಿಳಿದ ಪೊಲೀಸರು ಆರೋಪಿ ರಾಹುಲ್ ನನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net