

ಝಾನ್ಸಿ: ಆನ್ಲೈನ್ ಗೇಮಿಗೆ ದಾಸನಾಗಿದ್ದ ಯುವಕ ಪಾಲಕರನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶ ಝಾನ್ಸಿ ಬಳಿ ನಡೆದಿದೆ.
ಇದನ್ನೂ ಓದಿ: ಉಳಿದವರು ಚೆನ್ನಾಗಿರಲೆಂದು ಹಸುಗೂಸನ್ನೇ ಮಾರಿದ ತಂದೆ..!
ಆರೋಪಿಯನ್ನು ಅಂಕಿತ್(26) ಎಂದು ಗುರುತಿಸಲಾಗಿದ್ದು, ಲಕ್ಷ್ಮಿ ಪ್ರಸಾದ್ (58) ಪತ್ನಿ ವಿಮಲಾ (55) ಮೃತ ದುರ್ದೈವಿಗಳಾಗಿದ್ದಾರೆ.
ಘಟನೆಯು ನವಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಪಿಚೋರ್ನಲ್ಲಿ ನಡೆದಿದ್ದು, ಮೃತ ದಂಪತಿಗಳು ಮಗ ಅಂಕಿತ್ ಜತೆಗೆ ವಾಸವಾಗಿದ್ದರು. ಮೂವರು ಹೆಣ್ಣುಮಕ್ಕಳಲ್ಲಿ ಹಿರಿಯ ಮಗಳು ನೀಲಂ ಮತ್ತು ಸುಂದರಿ ಈಗಾಗಲೇ ಮದುವೆಯಾಗಿದ್ದು, ಕಿರಿಯ ಮಗಳು ಶಿವಾನಿ ಒರೈ ಎಂಬಲ್ಲಿ ಓದುತ್ತಿದ್ದಾಳೆ.
ಲಕ್ಷ್ಮಿ ಪ್ರಸಾದ್ ಸರ್ಕಾರಿ ಶಾಲೆಯಲ್ಲಿ ಪ್ರಾಂಶುಪಾಲರಾಗಿದ್ದು, ಅಂಕಿತ್ ಮನೆಯಲ್ಲಿ ಮೊಬೈಲ್ ರಿಪೇರಿ ಕೆಲಸ ಮಾಡುತ್ತಿದ್ದ. ಆದರೆ ಆರು ತಿಂಗಳ ಕಾಲ ಕೊಠಡಿಯಿಂದ ಹೊರ ಬರದೇ ಕೇವಲ ಮೊಬೈಲ್ನಲ್ಲಿ ಪಬ್ಜಿ ಆಟವಾಡುತ್ತಿದ್ದ. ಇದರಿಂದಾಗಿ ಆತನ ವಿಚಲಿತನಾಗಿದ್ದು, ಅವನ ನಡವಳಿಕೆಯೂ ಬದಲಾಗಿತ್ತು. ತಂದೆ-ತಾಯಿಯೊಂದಿಗೆ ಜಗಳವಾಡುತ್ತಿದ್ದ. ಎಲ್ಲರೂ ಅವನ ಬಗ್ಗೆ ಚಿಂತಿತರಾಗಿದ್ದರು ಎಂದು ಸಹೋದರಿ ನೀಲಂ ಹೇಳಿದ್ದಾಳೆ.
ಇದನ್ನೂ ಓದಿ: ಟೊಮ್ಯಾಟೋಗಾಗಿ ಸುಮಾರು 500 ಜನರಿಂದ ಬೆಳ್ಳಂ ಬೆಳಿಗ್ಗೆ ಸರದಿ ಸಾಲು..!
ಶನಿವಾರ ಬೆಳಗ್ಗೆ ತಮ್ಮ ತಂದೆಗೆ ಕರೆ ಸ್ವೀಕರಿಸದೇ ಇದ್ದಾಗ ನೀಲಂ, ಪಕ್ಕದಲ್ಲಿ ವಾಸವಾಗಿರುವ ಕಾಶಿರಾಮ್ ಎಂಬಾತನಿಗೆ ಕರೆ ಮಾಡಿ ತಂದೆ ಫೋನ್ ಸ್ವೀಕರಿಸುತ್ತಿಲ್ಲ, ಮನೆಗೆ ಹೋಗಿ ನೋಡುಂತೆ ತಿಳಿಸಿದ್ದಾಳೆ. ಆತ ಕೂಡಲೇ ಮನೆಗೆ ತೆರಳಿದ್ದು, ನೆಲದ ಮೇಲೆ ಬಿದ್ದಿದ್ದ ರಕ್ತವನ್ನು ಕಂಡು ಗಾಬರಿಯಾಗಿದ್ದಾನೆ. ಕೂಡಲೇ, ಆತ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಲು ಸ್ಥಳಕ್ಕಾಗಮಿಸಿ ಪ್ರಸಾದ್ ದೇಹ ವಶಕ್ಕೆ ಪಡೆದು ಚಿಂತಾಜನಕ ಸ್ಥಿತಿಯಲ್ಲಿದ್ದ ವಿಮಲಾಳನ್ನು ವೈದ್ಯಕೀಯ ಕಾಲೇಜಿಗೆ ಸಾಗಿಸಿದ್ದಾರೆ. ಅಲ್ಲಿ ಆಕೆ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾಳೆ.
ಈ ಕುರಿತಾಗಿ ಮಾತನಾಡಿರುವ ಪೊಲೀಸರು, ತಾವು ಘಟನಾ ಸ್ಥಳಕ್ಕೆ ತೆರಳಿದ್ದ ವೇಳೆ ಆರೋಪಿಯು ತಮ್ಮನ್ನು ನೋಡಿ ನಗತೊಡಗಿದ್ದ. ಘಟನೆ ಬಗ್ಗೆ ಕೇಳಿದಾಗ, ಮೊದಮೊದಲು ಏನೂ ಹೇಳಲಿಲ್ಲ. ಅನಂತರ ಆರೋಪಿಯು, ತಾನೇ ಪಾಲಕರ ಹತ್ಯೆಗೈದ ಬಳಿಕ ಸ್ನಾನ ಮಾಡಿ, ಬಟ್ಟೆ ಬದಲಾಯಿಸಿದ್ದೇನೆ ಎಂದು ಹೇಳಿದ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)