ಉಳಿದವರು ಚೆನ್ನಾಗಿರಲೆಂದು ಹಸುಗೂಸನ್ನೇ ಮಾರಿದ ತಂದೆ..!

child (1)
ಸಾಂದರ್ಭಿಕ ಚಿತ್ರ
Published on

ತಿತ್ಲಗಢ: ತಂದೆಯೊಬ್ಬ ತನ್ನ 5 ದಿನದ ಮಗುವನ್ನು 2.5 ಲಕ್ಷ ರೂ.ಗೆ ಮಾರಾಟ ಮಾಡಿರುವ ದಾರುಣ ಘಟನೆ ಒಡಿಶಾದ ತಿತ್ಲಗಢ ಜಿಲ್ಲೆಯಲ್ಲಿ ನಡೆದಿದೆ.

ಸಂತೋಷ್ ಮತ್ತು ಪುಷ್ಪಾ ಪಟೇಲ್ ದಂಪತಿಗಳಿಗೆ ಈಗಾಗಲೇ ಮೂವರು ಮಕ್ಕಳಿದ್ದರು. ಇದು ಅವರ ನಾಲ್ಕನೇ ಮಗುವಾಗಿತ್ತು. ಕುಟುಂಬವು ತೀರಾ ಬಡವರಾಗಿದ್ದರಿಂದ ಮನೆಯಲ್ಲಿ ಆಹಾರದ ಕೊರತೆ ಇತ್ತು. ಹೀಗಾಗಿ ನವಜಾತ ಗಂಡು ಶಿಶುವಿನ ಆರೈಕೆ ಮಾಡಲು ಅಸಾಧ್ಯ ಎನಿಸಿದ ನಂತರ ಮಗುವಿನ ಮಾರಾಟ ಮಾಡಲು ಮುಂದಾಗಿದ್ದರು.

ಇದನ್ನೂ ಓದಿ: ನರ್ಸ್ ವೇಷದಲ್ಲಿ ಗರ್ಭಿಣಿ ಹತ್ಯೆ ಯತ್ನ ಪ್ರಕರಣ: ಘಟನೆಯ ಬಗ್ಗೆ ಇಂಚಿಂಚು ಮಾಹಿತಿ ನೀಡಿದ ಆರೋಪಿ 

ಈ ವೇಳೆ, ರಂಜಾನ್ ಸಿಖ್ ಎಂಬ ಮಧ್ಯವರ್ತಿಯನ್ನು ಸಂಪರ್ಕಿಸಿ ಕುಟುಂಬದ ಆರ್ಥಿಕ ಸ್ಥಿತಿಗತಿ ಬಗ್ಗೆ ಸಂತೋಷ್ ಹೇಳಿಕೊಂಡಿದ್ದು, ಮಗುವಿನ ಮಾರಾಟದ ವಿಷಯವನ್ನು ಆತನಿಗೆ ತಿಳಿಸಿದ್ದಾನೆ, ಕೂಡಲೇ ಮಧ್ಯವರ್ತಿಯು ಕಲಹಂಡಿ ಜಿಲ್ಲೆಯಲ್ಲಿ ರಾಜಾ ಎಂಬ ವ್ಯಕ್ತಿಗೆ ಗಂಡು ಮಗುವನ್ನು ಮಾರಾಟ ಮಾಡಿ 2.5 ಲಕ್ಷ ರೂ.ವನ್ನು ಸಂತೋಷ್​ಗೆ ನೀಡಿದ್ದಾನೆ.

ಘಟನೆ ಸಂಬಂಧ ಪೊಲೀಸರು ರಂಜಾನ್ ವಾಸವಿದ್ದ ಮನೆಯ ನೆರೆಹೊರೆಯವರಿಂದ ಮಾಹಿತಿ ಪಡೆದ ನಂತರ ಆತನನ್ನು ಮತ್ತು ಮಗುವಿನ ತಂದೆ ಸಂತೋಷ್​ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮತ್ತೊಂದೆಡೆ, ಮಾರಾಟವಾಗಿದ್ದ ನವಜಾತ ಶಿಶುವನ್ನು ರಕ್ಷಿಸಲು ಪೊಲೀಸ್ ತಂಡ ಕಾಳಹಂಡಿಗೆ ತೆರಳಿದೆ ಎಂದು ಅಧಿಕಾರಿಕಗಳು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net