ನರ್ಸ್ ವೇಷದಲ್ಲಿ ಬಾಣಂತಿ ಹತ್ಯೆ ಯತ್ನ ಪ್ರಕರಣ: ಘಟನೆಯ ಬಗ್ಗೆ ಇಂಚಿಂಚು ಮಾಹಿತಿ ನೀಡಿದ ಆರೋಪಿ

nusre
Published on

ಕೊಚ್ಚಿ: ನರ್ಸ್ ವೇಷದಲ್ಲಿ ಮಹಿಳೆಯೊಬ್ಬಳನ್ನು ಕೊಲ್ಲಲು ಯತ್ನಿಸಿದ ಘಟನೆಗೆ ಸಂಬಂಧಪಟ್ಟ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ವೇಳೆ ಕೆಲವು ಸ್ಫೋಟಕ ಮಾಹಿತಿಗಳು ಬೆಳಕಿಗೆ ಬಂದಿವೆ.

ತನಿಖೆಯ ವೇಳೆ ಹಲವಾರು ವಿಷಯಗಳ ಬಗ್ಗೆ ಬಾಯ್ಬಿಟ್ಟಿರುವ ಆರೋಪಿ ಅನುಷಾ, ಸ್ನೇಹಾಳ ಪತಿ ಅರುಣ್​ ಮೇಲಿನ ಪ್ರೀತಿಯೇ ಈ ಕೃತ್ಯ ಎಸಗಲು ಕಾರಣ ಎಂದಿದ್ದಾಳೆ. ವಾರದ ಹಿಂದೆ ಗರ್ಭಿಣಿ ಸ್ನೇಹಾ ಆಸ್ಪತ್ರೆಗೆ ದಾಖಲಾಗಿದ್ದಳು. ಶುಕ್ರವಾರ ಹೆರಿಗೆಯಾದ ಬಳಿಕ ಆಕೆಯನ್ನು ಡಿಸ್ಟಾರ್ಜ್ ಮಾಡಲಾಗಿತ್ತು. ಆದರೆ ಮಗುವಿನ ಆರೋಗ್ಯ ಸರಿಯಾಗಿ ಇಲ್ಲದೇ ಇರುವುದರಿಂದ ಮಗುವನ್ನು ಅಲ್ಲೇ ದಾಖಲಿಸಲಾಗಿತ್ತು. ಹಾಗಾಗಿ ಸ್ನೇಹಾ ಮತ್ತು ಆಕೆಯ ತಾಯಿ ಕೋಣೆಯಲ್ಲಿದ್ದರು ಎಂದು ಹೇಳಿದ್ದಾಳೆ.

ಸ್ನೇಹಾಳನ್ನು ಕೊಂದು ಅರುಣ್​ನನ್ನು ಪಡೆದುಕೊಳ್ಳುವುದು ತನ್ನ ದುರುದ್ದೇಶವಾಗಿತ್ತು ಎಂದು ಹೇಳಿರುವ ಆರೋಪಿಯು, ಶುಕ್ರವಾರ ಸಂಜೆ 5:30ರ ಸುಮಾರಿಗೆ ನರ್ಸ್ ಕೋಟ್ ಧರಿಸಿ ಯಾರಿಗೂ ತಿಳಿಯದಂತೆ ಆಸ್ಪತ್ರೆ ಕೊಠಡಿಗೆ ಭೇಟಿ ನೀಡಿದ್ದೆ. ಈ ವೇಳೆ ತಾನು ಮಗುವಿನ ತಾಯಿಗೆ ಆರೋಪಿಯು ಇಂಜೆಕ್ಷನ್​ ಮಾಡಲು ಮುಂದಾಗಿದ್ದೆ. ಆದರೆ ಸ್ನೇಹಾಳು,  ಇಂಜೆಕ್ಷನ್ ಏಕೆ? ತನನ್ನು ಈ ಹಿಂದೆಯೇ ಡಿಸ್ಚಾರ್ಜ್​ ಮಾಡಿದ್ದಾರೆ ಎಂದು ಹೇಳಿದ್ದಳು ಎಂದು ಆರೋಪಿ ತಿಳಿಸಿದ್ದಾಳೆ.

ಅದಕ್ಕೆ ಪ್ರತಿಯಾಗಿ ತಾನು, ಇನ್ನೂ ಒಂದು ಇಂಜೆಕ್ಷನ್ ಇದೆ ಎಂದು ಒತ್ತಾಯ ಪೂರ್ವಕವಾಗಿ ಸ್ನೇಹಾಳ ಕೈ ಹಿಡಿದು ಸಿರಿಂಜ್ ಹಾಕಲು ಯತ್ನಿಸಿದ್ದೆ. ಈ ವೇಳೆ ಸಿರಿಂಜಿನಲ್ಲಿ ಯಾವುದೇ ಔಷಧಿ ಇರದೇ ಇದ್ದಿದ್ದನ್ನು ನೋಡಿದ ಆಕೆ ರಾದ್ಧಾಂತ ಮಾಡಿದ್ದರಿಂದ ಆಸ್ಪತ್ರೆ ಸಿಬ್ಬಂದಿ ಧಾವಿಸಿ ತನ್ನನು ಹಿಡಿದರು ಎಂದು ಹೇಳಿದ್ದಾಳೆ. ಪೊಲೀಸರು ಆರೋಪಿ ಮಹಿಳೆಯ ವಿಚಾರಣೆ ನಡೆಸುತ್ತಿದ್ದು, ಕೃತ್ಯದ ಹಿಂದಿನ ನೈಜ ಕಾರಣ ಹಾಗೂ ಅರುಣ್​ ಮತ್ತು ನರ್ಸ್​ ನಡುವಿನ ಸಂಬಂಧದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net