

ಜೈಪುರ: ಪತಿ ಲಂಚ ಪಡೆದಿದ್ದಕ್ಕೆ ಪತ್ನಿಯನ್ನು ಮೇಯರ್ ಸ್ಥಾನದಿಂದ ವಜಾ ಮಾಡಿರುವ ಘಟನೆ ರಾಜಸ್ತಾನದ ಜೈಪುರದಲ್ಲಿ ನಡೆದಿದೆ.
ಇದನ್ನೂ ಓದಿ: ಪಾಲಕರ ಹತ್ಯೆಗೈದು ಸ್ನಾನ ಮಾಡಿ, ಬಟ್ಟೆ ಬದಲಿಸಿ ಮನೆಯಲ್ಲಿಯೇ ಆರಾಮಾಗಿ ಕುಳಿತಿದ್ದ ಮಗ..!
ಶನಿವಾರ ತಡರಾತ್ರಿಯ ಈ ಹೈಡ್ರಾಮಾ ನಡೆದಿದ್ದು, ಜೈಪುರ ಹೆರಿಟೇಜ್ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ಮುನೇಶ್ ಗುರ್ಜಾರ್ರನ್ನು ವಜಾಗೊಳಿಸಿಲಾಗಿದೆ. ಆಕೆಯ ಪತಿ ಸುಶೀಲ್ ಗುರ್ಜರ್ ಮತ್ತು ಇಬ್ಬರು ಏಜೆಂಟ್‌ಗಳ ಮೂಲಕ ಜಮೀನು ಗುತ್ತಿಗೆ ನೀಡಲು ಭೂ ದಾಖಲೆ ನೀಡಲು ವ್ಯಕ್ತಿಯೋರ್ವನಿಂದ ಲಕ್ಷ ರೂಪಾಯಿ ಲಂಚ ಪಡೆದಿದ್ದಕ್ಕಾಗಿ ಬಂಧಿಸಿದೆ.
ಎಸಿಬಿ ಅಧಿಕಾರಿಗಳು ನಿನ್ನೆ ರಾತ್ರಿ ಹತ್ವಾರ್ಡಾ ಸ್ಟ್ರೀಟ್‌ನಲ್ಲಿರುವ ಆದರ್ಶ ಪ್ರಾಂತ್ಯದ ನಗರ ಮೇಯರ್ ಮನೆಯ ಮೇಲೆ ದಾಳಿ ನಡೆಸಿದ್ದು, ಶೋಧ ಕಾರ್ಯದ ವೇಳೆ 41.55 ಲಕ್ಷ ರೂ. ಮತ್ತು ಜಮೀನು ಗುತ್ತಿಗೆ ನೀಡಲು ನಮೂದಿಸಲಾದ ಪತ್ರವನ್ನು ಸಹ ವಶಪಡಿಸಿಕೊಂಡಿದ್ದಾರೆ ಎಂದು ಎಸಿಬಿ ಮಹಾನಿರ್ದೇಶಕ ಹೇಮಂತ್ ಪ್ರಿಯದರ್ಶಿ ತಿಳಿಸಿದ್ದಾರೆ. ಮೇಯರ್ ಪತಿ ಮನೆಯಲ್ಲಿಯೇ ಲಂಚ ಪಡೆಯುತ್ತಿರುವ ವೇಳೆ ಆಕೆ ಇದ್ದಿದ್ದರಿಂದ ಮೇಲ್ನೋಟಕ್ಕೆ ಮೇಯರ್ ಶಾಮೀಲಾಗಿದ್ದಾರೆ ಎನ್ನಿಸುತ್ತಿದ್ದು, ಇದು ಪ್ರಕರಣದ ಮೇಲೆ ಪರಿಣಾಮ ಬೀರಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಮಾರುಕಟ್ಟೆಗೆ ಕಾಲಿಟ್ಟ 10 ಸಾವಿರಕ್ಕಿಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್..!
ಸುಶೀಲ್ ಗುರ್ಜರ್ ತನ್ನ ಸಹಾಯಕನಾದ ನಾರಾಯಣ್ ಸಿಂಗ್ ಮತ್ತು ಅನಿಲ್ ದುಬೆ ಮೂಲಕ ಗುತ್ತಿಗೆ ಅರ್ಜಿಯ ಅನುಮೋದನೆಗಾಗಿ 2 ಲಕ್ಷ ರೂ. ಪಡೆಯುತ್ತಿದ್ದಾರೆ ಎಂಬ ಆಕ್ಷೇಪಣೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಬಲೆ ಬೀಸಿ ದಾಳಿ ನಡೆಸಿದ್ದರು. ಸದ್ಯ, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ.(ಏಜೆನ್ಸೀಸ್)