ಮಾರುಕಟ್ಟೆಗೆ ಕಾಲಿಟ್ಟ 10 ಸಾವಿರಕ್ಕಿಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್..!

moto G14
ಸಾಂದರ್ಭಿಕ ಚಿತ್ರ
Published on

ದೆಹಲಿ: ಮೊಟೊರೊಲಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್​​ನ್ನು ಬಿಡುಗಡೆ ಮಾಡಿದ್ದು, ದೇಶಿಯ ಮಾರುಕಟ್ಟೆಯಲ್ಲಿ ನೆಲೆಯೂರಿರುವ ಕೆಲವು ಸ್ಮಾರ್ಟ್‌ಫೋನ್ ಕಂಪನಿಗೆ ಟಕ್ಕರ್​​ ಕೊಡಲು ಮುಂದಾಗಿದೆ. ಪ್ರಮುಖವಾಗಿ ಮಧ್ಯಮ ವರ್ಗದವರಿಗಾಗಿಯೇ ಬಜೆಟ್ ಪೋನ್​ ಬಿಡುಗಡೆ ಮಾಡುತ್ತಿರುವ ಮೊಟೊ ಕಂಪನಿಯು ಕೈಗೆಟುಕುವ ದರದಲ್ಲಿ ಹೊಸ ಹೊಸ ಮೊಬೈಲ್​ಗಳನ್ನು ಮಾರುಕಟ್ಟೆಗೆ ತರುತ್ತಿದೆ.

ಇತ್ತೀಚಿಗೆ ಮೊಟೊ G14 ಸ್ಮಾರ್ಟ್‌ಫೋನ್​​ನ್ನು ಬಿಡುಗಡೆ ಮಾಡಿರುವ ಕಂಪನಿಯು, ಹಲವಾರ ವೈಶಿಷ್ಟ್ಯಗಳೊಂದಿಗೆ ಬಳಕೆದಾರರನ್ನು ಆಕರ್ಷಿಸಲು ಮುಂದಾಗಿದೆ. ಈ ಸ್ಮಾರ್ಟ್‌ಫೋನ್​ ಭಾರತದಲ್ಲಿ ಒಂದೇ ಮಾದರಿಯಲ್ಲಿ ಲಭ್ಯವಿದ್ದು, 4GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 9,999 ರೂ ಆಸುಪಾಸಿನಲ್ಲಿದೆ. ಇದು ಸ್ಟೀಲ್ ಗ್ರೇ ಮತ್ತು ಸ್ಕೈ ಬ್ಲೂ ಬಣ್ಣದ ಎರಡು ರೂಪಾಂತರಗಳಲ್ಲಿ ಗ್ರಾಹಕರಿಕಗೆ ಲಭ್ಯವಿದ್ದು, 6.5 ಇಂಚಿನ ಪೂರ್ಣ HD+ ಡಿಸ್​ಪ್ಲೇ ಹೊಂದಿದೆ.

ಇದನ್ನೂ ಓದಿ: ಪಾಲಕರ ಹತ್ಯೆಗೈದು ಸ್ನಾನ ಮಾಡಿ, ಬಟ್ಟೆ ಬದಲಿಸಿ ಮನೆಯಲ್ಲಿಯೇ ಆರಾಮಾಗಿ ಕುಳಿತಿದ್ದ ಮಗ..!

ಇದು ಆರ್ಮ್ ಮಾಲಿ-ಜಿ57 ಎಂಪಿಐ ಜಿಪಿಯು ಜೊತೆ ಜೋಡಿಸಲಾದ ಯುನಿಸೊಕ್ ಟಿ616 ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, ಸ್ಮಾರ್ಟ್‌ಫೋನ್​ನ ಸಂಗ್ರಹಣಾ ಸಾಮರ್ಥ್ಯವನ್ನು ಮೈಕ್ರೊ SD ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದಾಗಿದೆ. ಹಿಂಬದಿಯಲ್ಲಿ 50MP ಪ್ರಾಥಮಿಕ ಸಂವೇದಕ ಮತ್ತು 2MP ಮ್ಯಾಕ್ರೋ ಲೆನ್ಸ್ ಒಳಗೊಂಡಿರುವ ಕ್ಯಾಮರಾ ಸೆಟಪ್​ನ್ನು ಒಳಗೊಂಡಿದೆ. ಸೆಲ್ಫಿಗಾಗಿ ಮತ್ತು ವೀಡಿಯೊ ಕರೆಗಳಿಗಾಗಿ 8MP ಮುಂಭಾಗದ ಕ್ಯಾಮರಾವನ್ನು ಈ ಫೋನ್​ ಹೊಂದಿದೆ.

ಇನ್ನು, 5,000 mAh ಬ್ಯಾಟರಿಯನ್ನು ಹೊಂದಿರುವ ಮೊಟೊ G14 ಫೋನ್ 20W ವೇಗದ ಚಾರ್ಜಿಂಗ್​​ನ್ನು ಬೆಂಬಲಿಸುತ್ತದೆ. ಡಾಲ್ಬಿ ಅಟ್ಮಾಸ್-ಸಕ್ರಿಯಗೊಳಿಸಿದ ಸ್ಟಿರಿಯೊ ಸ್ಪೀಕರ್‌ಗಳು ಸೇರಿದಂತೆ ಕೆಲವು ಗಮನಾರ್ಹ ವೈಶಿಷ್ಟ್ಯಗಳಿವೆ. Moto G14 ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಡ್ಯುಯಲ್ ಸಿಮ್ ಕಾರ್ಡ್ ಸ್ಲಾಟ್ ಅನ್ನು ಒಳಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಕಂಪನಿಯ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಬಹುದಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net