

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಅಧಿಕಾರಾವಧಿ ಮೂರರಿಂದ ಐದು ವರ್ಷಗಳಿಗೆ ವಿಸ್ತರಣೆಗೊಂಡ ಬಳಿಕ ನಡೆದ ಮೊದಲ ಚುನಾವಣೆಯ ಫಲಿತಾಂಶ ಬಹುತೇಕ ಹೊರಬಿದ್ದಿದೆ. ಈ ಚುನಾವಣೆಯಲ್ಲಿ ಜಿಲ್ಲಾಮಟ್ಟದ ಅಧ್ಯಕ್ಷರ ಫಲಿತಾಂಶ ಮೊದಲಿಗೆ ಒಂದೊಂದಾಗಿ ಹೊರಹೊಮ್ಮುತ್ತಿದ್ದು, ಯಾವ ಜಿಲ್ಲೆಯಲ್ಲಿ ಯಾರು ನೂತನ ಅಧ್ಯಕ್ಷರು ಎಂಬ ಮಾಹಿತಿ ಇಲ್ಲಿದೆ.
ರಾಜ್ಯದಲ್ಲೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ ರಾಜಧಾನಿ ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಎಂ. ಪ್ರಕಾಶ ಮೂರ್ತಿ ಆಯ್ಕೆಯಾಗಿದ್ದಾರೆ.
ಬಹುತೇಕ ಎಂ. ಪ್ರಕಾಶ ಮೂರ್ತಿ ಹಾಗೂ ಎಂ. ತಿಮ್ಮಯ್ಯ ನಡುವೆಯೇ ನೇರ ಹಣಾಹಣಿ ಎಂಬಂತಿದ್ದ ಈ ಚುನಾವಣೆಯಲ್ಲಿ ಮತದಾನದಲ್ಲೂ ಅದೇ ಫಲಿತಾಂಶ ಹೊರಬಿದ್ದಿದೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಒಟ್ಟು 10,538 ಮತಗಳು ಚಲಾವಣೆ ಆಗಿವೆ. ಈ ಹಿಂದೆ ಎರಡು ಸಲ ಸ್ಪರ್ಧಿಸಿದ್ದ ಪ್ರಕಾಶ ಮೂರ್ತಿ ತಮ್ಮ ಮೂರನೇ ಪ್ರಯತ್ನದಲ್ಲಿ ಜಯ ಗಳಿಸಿದ್ದಾರೆ. ಈ ಹಿಂದೆ ಎರಡು ಬಾರಿ ಸ್ಪರ್ಧಿಸಿದ್ದ ಎಂ. ತಿಮ್ಮಯ್ಯ ಇದೇ ಕೊನೆಯ ಸೆಣಸಾಟ ಎಂದಿದ್ದರು. ಮತದಾರರು ಅಂತಿಮವಾಗಿ ಪ್ರಕಾಶ ಮೂರ್ತಿ ಅವರಿಗೆ ಮಣೆ ಹಾಕಿದ್ದಾರೆ.
(ಉಳಿದ ಜಿಲ್ಲೆಗಳ ಮಾಹಿತಿ ಇನ್ನಷ್ಟೇ ಪ್ರಕಟಗೊಳ್ಳಬೇಕಿದ್ದು, ನಂತರ ಅಪ್ಡೇಟ್ ಮಾಡಲಾಗುವುದು. ಕಸಾಪ ನೂತನ ರಾಜ್ಯಾಧ್ಯಕ್ಷರ ಮಾಹಿತಿ ಕೆಲವೇ ನಿಮಿಷಗಳಲ್ಲಿ ಪ್ರಕಟಗೊಳ್ಳಲಿದೆ)