

ಕೋಲಾರ: ಜೆಡಿಎಸ್ ಅಲ್ಪಸಂಖ್ಯಾತರ ಸಮಾವೆಶದಲ್ಲಿ ನಾ ಮುಂದು ತಾ ಮುಂದು ಎನ್ನುವಂತೆ ಚಿಕನ್ ಬಿರಿಯಾನಿ ತಿನ್ನಲು ಕಾರ್ಯಕರ್ತರು ಮುಗಿಬಿದ್ದಿದ್ದಾರೆ.
ಕೋಲಾರದ ಜೂನಿಯರ್ ಕಾಲೇಜು ಮೈದಾನದಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಸಮಾವೇಷ ಏರ್ಪಡಿಸಲಾಗಿತ್ತು. ಭೋಜನಕ್ಕಾಗಿ ಸುಮಾರು 2500 ಕೆ.ಜಿ ಚಿಕನ್ ಬಿರಿಯಾನಿ ಸಿದ್ಧಪಡಿಸಲಾಗಿತ್ತು. ಚಿಕನ್ ಬಿರಿಯಾನಿ ತಿನ್ನಲು ನೂಕುನುಗ್ಗಲು ಉಂಟಾಗಿದ್ದು, ಕಾರ್ಯಕರ್ತರನ್ನು ನಿಭಾಯಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಅಲ್ಪಸಂಖ್ಯಾತರ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು. ಹೀಗಾಗಿ ಸಿದ್ಧಪಡಿಸಿದ್ದ ಬಿರಿಯಾನಿ ಖಾಲಿಯಾಗಿದೆ. ಮತ್ತೊಂದು ಪಾತ್ರೆ ಬಿರಿಯಾನಿ ಸಿದ್ಧಪಡಿಸಿ ತರುವಷ್ಟರಲ್ಲಿ ಕಾರ್ಯಕರ್ತರು ಗಲಾಟೆಗಿಳಿದಿದ್ದಾರೆ. (ದಿಗ್ವಿಜಯ ನ್ಯೂಸ್)