

ವಿಮಾನದೊಳಗೆ ಆರಾಮದಾಯಕ, ಸುಖಕರ ಪ್ರಯಾಣ ಮಾಡಲೆಂದು ಬಯಸುವವರ ಸಂಖ್ಯೆಯೇ ಹೆಚ್ಚು. ಪ್ರಯಾಣಿಕರು ಸಹ ತಮಗೆ ಅನುಕೂಲಕರವಾಗುವಂತೆ ಎಲ್ಲಾ ಮುಂಜಾಗ್ರತಾ ವ್ಯವಸ್ಥೆಗಳನ್ನು ಮಾಡಿಕೊಂಡೆ ಟ್ರಾವೆಲ್ ಮಾಡಲು ಇಚ್ಛಿಸುತ್ತಾರೆ. ಎಲ್ಲದಕ್ಕಿಂತ ಮುಖ್ಯವಾಗಿ ತಾವು ಪ್ರಯಾಣಿಸುವಾಗ ತಮ್ಮ ಸಹ ಪ್ರಯಾಣಿಕರು ತೊಂದರೆ ಕೊಡದೆ, ಮುಜುಗರ ಉಂಟು ಮಾಡದಿದ್ದರೆ ಸಾಕಪ್ಪ ಎಂದು ಯೋಚಿಸುವವರಿಗೆ ಈ ಘಟನೆ ತೀರ ಮುಜುಗರಕ್ಕೀಡುಮಾಡುವುದು ಪಕ್ಕಾ!
ಸಾರ್ವಜನಿಕ ಸ್ಥಳಗಳಲ್ಲಿ ಪ್ರೀತಿ ಮಾಡುವವರಿಗೆ ಅದೇನು ತಿಳಿದಿರುತ್ತೆದೆಯೋ ನಿಜಕ್ಕೂ ತಿಳಿಯದು. ತಮ್ಮನ್ನು ಇತರರು ಗಮನಿಸುತ್ತಾರೆ, ನಾವು ಹಲವರ ಮಧ್ಯೆ ಇದ್ದೇವೆ, ನಮ್ಮ ವರ್ತನೆ ಅವರಿಗೆ ಕಿರಿಕಿರಿ ಉಂಟುಮಾಡಬಾರದು ಎಂಬ ಕಿಂಚಿತ್ತು ಅರಿವಿಲ್ಲದವರೆ ಇಂತಹ ಘಟನೆಗೆ ಸಾಕ್ಷಿಯಾಗುತ್ತಾರೆ. ಇಲ್ಲಿನ ವಿಮಾನದಲ್ಲಿ ಪ್ರೇಮಿಗಳಿಬ್ಬರು ತಮಗೆ ನೀಡಿದಂತ ಆಸನದಲ್ಲಿ ಎಲ್ಲರಂತೆ ಕುಳಿತುಕೊಳ್ಳದೆ, ಮಲಗಿಕೊಂಡು ಲವ್ವಿಡವ್ವಿ ನಡೆಸಿರೋದು ಸಹ ಪ್ರಯಾಣಿಕನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಮಾನದಲ್ಲಿ ಪ್ರಯಾಣಿಸುವಾಗ ತಮ್ಮ ಖಾಸಗಿ ಕ್ಷಣವನ್ನು ಸಾರ್ವಜನಿಕ ಸ್ಥಳದಲ್ಲಿ ಆನಂದಿಸುತ್ತಿರುವ ದಂಪತಿಗಳ ದೃಶ್ಯವನ್ನು ಸಹ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ನಲ್ಲಿ ಸರೆಹಿಡಿದು ಅದನ್ನು ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಕ್ಷಣಮಾತ್ರದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಜೋಡಿಗಳಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.
ನಾಲ್ಕು ಗಂಟೆಗಳ ಕಾಲ ಇವರಿಬ್ಬರ ಲವ್ವಿಡವ್ವಿ ಹೀಗೆ ನಡೆಯಿತು. ಅದನ್ನು ನೋಡಿ ನಮಗೆ ತೀವ್ರ ಮುಜುಗರ ಉಂಟಾಯಿತು ಎಂದು ಹೇಳಿದ್ದಾರೆ. ದೃಶ್ಯದಲ್ಲಿ ಜೋಡಿಯ ಸೀಟಿನ ಹಿಂಬದಿ ಸೀಟಿನಲ್ಲಿ ಕುಳಿತ ಮಹಿಳೆಯೊಬ್ಬರು ಕಿಟಕಿಗೆ ತನ್ನ ತಲೆ ಒರಗಿಸಿ, ಆಯಾಗಿ ನಿದ್ರಿಸುತ್ತಿರುವುದು ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ. ಇದ್ದರೆ ಆ ರೀತಿ ಇರಬೇಕು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ,(ಏಜೆನ್ಸೀಸ್).