More

    ಕೋವಿಡ್​ನಲ್ಲಿ ತಂದೆ ಕಳೆದುಕೊಂಡ ವೇದಾಂತ್​, ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ!

    ವಿಜಯಪುರ: ಕೋವಿಡ್​ನಲ್ಲಿ ತಂದೆ ಕಳೆದುಕೊಂಡ ವೇದಾಂತ್​, ತಾಯಿಯ ಆಸೆಯಂತೆ ಇಂದು ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದು ಅಮೋಘ ಸಾಧನೆ ಮಾಡಿದ್ದಾರೆ. ಕ್ಷೌರಿಕನ ಪುತ್ರನ ಅನುಪಮ ಸಾಧನೆಗೆ ರಾಜ್ಯವ್ಯಾಪಿ ಮೆಚ್ಚುಗೆಗೆಳ ಮಹಾಪೂರವೇ ಹರಿದುಬರುತ್ತಿದೆ.

    ಇದನ್ನೂ ಓದಿ: ಸ್ಟೇಡಿಯಂನಲ್ಲಿ ನೋಡಿದ ಆ ಸುಂದರಿಗಾಗಿ ತುಂಬಾ ದಿನಗಳು ಕಾದೆ ಕೊನೆಗೆ.. ಶ್ರೇಯಸ್​ ಅಯ್ಯರ್ ಭಾವುಕ​

    ಸಾಧನೆಗೆ ಬಡತನವಾಗಲಿ, ಕಷ್ಟಗಳಾಗಲಿ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಕೋವಿಡ್​ನಲ್ಲಿ ಅಸುನೀಗದ ಕ್ಷೌರಿಕನ ಪುತ್ರನೋರ್ವನ ಸಾಧನೆಯೇ ಸಾಕ್ಷಿ. ಇದು ಅನೇಕರಿಗೆ ಮಾದರಿಯೂ ಆಗಿದೆ. ಇಲ್ಲಿನ ಬಿಎಲ್ ಡಿಇ ಸಂಸ್ಥೆಯ ಎಸ್​ಎಸ್ ಕಾಲೇಜಿನ ವಿದ್ಯಾರ್ಥಿ ವೇದಾಂತ ಜ್ಞಾನೋಬಾ ನಾವಿ, ದ್ವಿತೀಯ ಪಿಯುಸಿಯ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಮಾದರಿಯಾಗಿದ್ದಾರೆ.

    ಮೂಲತಃ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕಲಬೀಳಗಿ ಗ್ರಾಮದ ವೇದಾಂತ ಜ್ಞಾನೋಬಾ ನಾವಿ ಶೇ. 99.33 ರಷ್ಟು ಅಂಕ ಪಡೆದು ಈ ಸಾಧನೆ ಮೆರೆದಿದ್ದಾರೆ. ಕ್ಷೌರಿಕ ವೃತ್ತಿ ಮಾಡಿಕೊಂಡಿದ್ದ ತಂದೆ‌ ಕೊವಿಡ್​ನಲ್ಲಿ ನಿಧನ ಹೊಂದಿದರು. ಇಬ್ಬರು ಸಹೋದರಿಯರಿದ್ದು, ತಾಯಿಯೇ ದುಡಿದು ವೇದಾಂತ್​ ಅವರನ್ನು ಓದಿಸುತ್ತಿದ್ದಾರೆ. ಕಷ್ಟಪಟ್ಟು- ಇಷ್ಟಪಟ್ಟು ಓದುತ್ತಿರುವ ವೇದಾಂತ ದ್ವಿತೀಯ ಪಿಯುಸಿಯಲ್ಲಿ ಇದೀಗ ಉತ್ತಮ ಫಸಲು ತೆಗೆದಿದ್ದು, ಮುಂದೆ ಪದವಿ ಪ್ರವೇಶ ಪಡೆದು ಕೆಎಎಸ್ ಇಲ್ಲವೇ ಐಎಎಸ್ ಮಾಡುವ ಗುರಿ ಹೊಂದಿದ್ದಾರೆ.

    ಕುಡಿದದ್ದು ಒಂದೇ ಒಂದು ಎಳನೀರು, ಕೊಟ್ಟಿದ್ದು ಮಾತ್ರ 50,000 ರೂ.! ಶಾಕಿಂಗ್ ವಿಡಿಯೋ ವೈರಲ್

    ಎಕ್ಕೆ ಎಲೆ ನೋಡಿ ರೈತರು ಹೇಳ್ತಾರೆ ಭವಿಷ್ಯ! ಇದು ಯುಗಾದಿ ಹಬ್ಬದಂದು ಮಾತ್ರ ಸಾಧ್ಯ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts