ಕುಡಿದದ್ದು ಒಂದೇ ಒಂದು ಎಳನೀರು, ಕೊಟ್ಟಿದ್ದು ಮಾತ್ರ 50,000 ರೂ.! ಶಾಕಿಂಗ್ ವಿಡಿಯೋ ವೈರಲ್

WhatsApp-Image-2024-04-10-at-12.59.33-PM
Published on

ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುವ ಕೆಲವು ಘಟನೆಗಳ ವಿಡಿಯೋ ನೋಡುಗರಿಂದ ಸಿಕ್ಕಾಪಟ್ಟೆ ಚರ್ಚೆಗೆ ಒಳಪಡುತ್ತವೆ. ಅಂತಹದ್ದೇ ರೀತಿಯಲ್ಲಿ ಇಲ್ಲೊಂದು ದೃಶ್ಯ ವ್ಯಾಪಕವಾಗಿ ಹರಿದಾಡಿದೆ. ನೋಡುಗರನ್ನು ಮೊದಲಿಗೆ ಬೆಚ್ಚಿ ಬೀಳಿಸಿದರು, ಆನಂತರ ವಾಸ್ತವ ಏನು ಎಂಬುದನ್ನು ಅರ್ಥ ಮಾಡಿಸಿದೆ.

ಈಗ ದೇಶವ್ಯಾಪಿ ಬಿರು ಬಿಸಿಲು ಆವರಿಸಿಕೊಂಡಿದೆ. ಈ ಬಿಸಿಲ ಬೇಗೆಗೆ ತಾಳಲಾರದೆ ಜನರು ತಂಪು ಪಾನಿಯದ ಮೊರೆ ಹೋಗಿದ್ದಾರೆ. ಕೋಲ್ಡ್​​ ಜ್ಯೂಸ್​ ಅಥವಾ ಬಾಟಲಿ ರಸಗಳನ್ನು ಸೇವಿಸುವ ಬದಲಿಗೆ ಈಗ ಎಳನೀರು ಕುಡಿಯುವ ಪ್ರವೃತ್ತಿ ಹೆಚ್ಚಾಗಿದೆ. ಎಳನೀರು ಸೇವನೆ ದೇಹದ ಆರೋಗ್ಯವನ್ನು ವೃದ್ಧಿಸುತ್ತದೆ. ಜನರು ಅಧಿಕ ಸಂಖ್ಯೆಯಲ್ಲಿ ಎಳನೀರು ಕುಡಿಯುವುದರಿಂದ ರೈತರಿಗೆ ತಾವು ಬೆಳೆದ ಬೆಳೆಗೆ ಲಾಭ ಏರಿಕೆಯಾಗುತ್ತಿದೆ.

ಮುಂಬೈ ಮೂಲದ ಹೆಸರಾಂತ ಯೂಟ್ಯೂಬರ್​ ರಸ್ತೆಬದಿಯಲ್ಲಿದ್ದ ಎಳನೀರು ವ್ಯಾಪಾರಿ ಬಳಿ ಎಳನೀರು ಖರೀದಿಸಿದ್ದಾನೆ. ಇವರಿಗೆ ಆತ ಕೊಟ್ಟಿದ್ದು ಬರೋಬ್ಬರಿ ಐವತ್ತು ಸಾವಿರ ರೂ. ಹಣ. ಈ ಸಂಗತಿಯನ್ನು ಕೇಳಿ ಹಲವರಿಗೆ ಶಾಕ್ ಆದರೆ, ಇನ್ನು ಕೆಲವರು ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ. ಅಸಲಿಗೆ ಆರ್ಯನ್ ಕಟಾರಿಯಾ ಎಂಬ ಯುವಕ ಎಳನೀರು ವ್ಯಾಪಾರಿಯ ಬಳಿ ತನಗೆ ಬಂದಿದ್ದ 50,000 ರೂ. ವೋಚರ್​ ಅನ್ನು ಬಡ ವ್ಯಕ್ತಿಗೆ ನೀಡುವ ಮೂಲಕ ಎಲ್ಲರ ಮನಸ್ಸನ್ನು ಗೆದಿದ್ದಾರೆ.

ಕ್ಯಾಶ್​ಬ್ಯಾಕ್ ವೋಚರ್​ನಲ್ಲಿ ಬಂದಿದ್ದ ಗುಡ್​ಡೇ 50 ಸಾವಿರ ರೂ. ಹಣವನ್ನು ತನಗೆ ಎಳನೀರು ಕೊಟ್ಟ ವ್ಯಾಪಾರಿಗೆ ಆರ್ಯನ್ ಕೊಟ್ಟಿದ್ದಾರೆ. ಮೊದ ಮೊದಲು ವೋಚರ್​ ನೋಡಿದ ವ್ಯಾಪಾರಿ, ಇದೇನು ಎಂದು ತಿಳಿಯದೆ ಆರ್ಯನ್​ರನ್ನು ಪ್ರಶ್ನಿಸಿದ್ದಾರೆ. ತದನಂತರ ಅದನ್ನು ವಿವರಿಸಿದ ಯುಟ್ಯೂಬರ್​, ಅದನ್ನು ಸ್ಕ್ರಾಚ್​ ಮಾಡಿದರೆ, ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗುತ್ತದೆ ಎಂದು ಹೇಳಿದ್ದಾರೆ.

ಕೆಲವು ಸಮಯದ ನಂತರ ವ್ಯಾಪಾರಿಯ ಖಾತೆಗೆ 50 ಸಾವಿರ ರೂ. ಹಣ ವ್ಯಾಪಾರಿಯ ಖಾತೆಗೆ ವರ್ಗಾವಣೆ ಆಗಿದೆ. ಆರ್ಯನ್​ ಸಹಾಯ ಕಣ್ತುಂಬಿಕೊಂಡ ಎಳನೀರು ವ್ಯಾಪಾರಿ ಅತೀವ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಹಂಚಿಕೊಂಡ ಆರ್ಯನ್​ಗೆ ನೆಟ್ಟಿಗರು ಮೆಚ್ಚುಗೆಯ ಮಹಾಪೂರವೇ ಹರಿಸಿದ್ದು, ನೀವು ಆ ವ್ಯಾಪಾರಿಗೆ ಗುಡ್​ಡೇ ಮಾಡಲಿಲ್ಲ, ಗುಡ್​ ತಿಂಗಳು ಮಾಡಿದ್ರಿ ಎಂದು ಕೆಲವರು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net