More

  ನಟಿಯರು ಮಾಡಿಸುವ ಪೂಜೆಗೆ ನಾನು ಹಣ ತೆಗೆದುಕೊಳ್ಳುವುದಿಲ್ಲ; ಖ್ಯಾತ ಜ್ಯೋತಿಷಿ ವೇಣುಸ್ವಾಮಿ

  ಹೈದ್ರಾಬಾದ್​: ಟಾಲಿವುಡ್ ಖ್ಯಾತ ಜ್ಯೋತಿಷಿ ವೇಣುಸ್ವಾಮಿ. ವೃತ್ತಿ ಜೀವನದಲ್ಲಿ ಯಶಸ್ಸಿಗಾಗಿ ಕೆಲವು ನಟ, ನಟಿಯರು ಪೂಜಿಸುತ್ತಾರೆ. ವೇಣುಸ್ವಾಮಿ ಅವರು ಸ್ಟಾರ್​, ನಟ, ನಟಿಯರ ಕುರಿತಾಗಿ ಶಾಕಿಂಗ್​ ಹೇಳಿಕೆಯೊಂದನ್ನು ನೀಡಿದ್ದಾರೆ.

  ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಎರಡೂ ತೆಲುಗು ರಾಜ್ಯಗಳ ಜನರಿಗೆ ಚಿರಪರಿಚಿತರು. ಸೆಲೆಬ್ರಿಟಿಗಳ ಮೇಲೆ ನುಡಿಯುವ ಭವಿಷ್ಯದಿಂದಲೇ ಜ್ಯೋತಿಷಿ ವೇಣು ಸ್ವಾಮಿ ಖ್ಯಾತರಾಗಿದ್ದಾರೆ. ಇವರ ಭವಿಷ್ಯವನ್ನು ಆರಂಭದಲ್ಲಿ ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಯಾವಾಗ ಟಾಲಿವುಡ್​ನ ತಾರಾದಂಪತಿ ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದು, ಇಬ್ಬರು ಬೇರೆಯಾದರೂ ಆಗ ವೇಣು ಅವರ ಭವಿಷ್ಯವನ್ನು ಎಲ್ಲರೂ ಗಂಭೀರವಾಗಿ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಹೀಗಾಗಿ ಅನೇಕ ಸೆಲೆಬ್ರಿಟಿಗಳ ನೆಚ್ಚಿನ ಜ್ಯೋತಿಷಿಯಾಗಿದ್ದಾರೆ.

  ನನಗೆ ಹಣ ನೀಡುವ ದೊಡ್ಡ ಗ್ರಾಹಕರಿದ್ದಾರೆ. ರಾಜಕೀಯ ಮತ್ತು ಉನ್ನತ ಉದ್ಯಮಿಗಳು ನನ್ನ ಗ್ರಾಹಕರು.ಜ್ಯೋತಿಷ್ಯ ಹೇಳಿ ಹಣ ಕಳೆದುಕೊಳ್ಳುವ, ಸಂಪಾದಿಸುವ ಹಂತದಲ್ಲಿ ನಾನಿಲ್ಲ. ರಶ್ಮಿಕಾ ಮಾತ್ರ ನನಗೆ ಹಣ ನೀಡಿದ್ದು, ಬೇರೆ ಯಾವ ನಾಯಕಿಯಿಂದಲೂ ಹಣ ಪಡೆದಿಲ್ಲ ಎಂದು ವೇಣುಸ್ವಾಮಿ ಬಹಿರಂಗಪಡಿಸಿದ್ದಾರೆ.

  ಟಾಲಿವುಡ್ ಇಂಡಸ್ಟ್ರಿಯಲ್ಲಿ ಬ್ಲ್ಯಾಕ್ ಮ್ಯಾಜಿಕ್ ಇದೆ. ಹೀರೋಗಳು, ನಾಯಕಿಯರು ಮತ್ತು ಆಂಕರ್‌ಗಳು ತಮ್ಮ ಪ್ರತಿಸ್ಪರ್ಧಿಗಳನ್ನು ಬೆಳೆಯದಂತೆ ತಡೆಯುವ ಪ್ರಕರಣಗಳಿವೆ. ನಾನು ಉದ್ಯಮಿಗಳಿಂದ 10 ಲಕ್ಷ ರೂ. ಪಡೆಯುತ್ತೇನೆ ಎಂದು ಹೇಳಿದರು.

  ನಾನು ಸಂಪಾದನೆ ಮಾಡಿದ ಹಣದಲ್ಲಿ, ಹೆಣ್ಣುಮಕ್ಕಳು ಕಷ್ಟದಲ್ಲಿದ್ದರೆ ಅವರಿಗೆ ಹಣದ ಸಹಾಯ ಮಾಡಿದ ಹಲವು ನಿದರ್ಶನಗಳಿವೆ. ಮದ್ಯಪಾನ ಮಾಡುವುದು ಪಾಪ ಎಂದು ಭಾವಿಸಬಾರದು, ದಾನವೇ ಪರಿಹಾರ ಎಂದು ಶಾಸ್ತ್ರ ಹೇಳುತ್ತದೆ ಎಂದು ತಿಳಿಸಿದರು.

  ಸಿನಿಮಾದಲ್ಲಿ ಅವಕಾಶಬೇಕಾದ್ರೆ ಮಲಗಬೇಕು, ಅದು ನನಗೆ ಕೆಟ್ಟ ಅನುಭವವಾಗಿತ್ತು ಎಂದು ಕಣ್ಣೀರಿಟ್ಟ ನಟಿ

  ಸೌಂದರ್ಯಾ 100 ಕೋಟಿ ರೂ. ಆಸ್ತಿ ಯಾರ ಪಾಲಾಯ್ತು..? ಈಕೆ ಪತಿ ಯಾರನ್ನು ಮದುವೆಯಾದರು..?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts