More

    ಸ್ಟೇಡಿಯಂನಲ್ಲಿ ನೋಡಿದ ಆ ಸುಂದರಿಗಾಗಿ ತುಂಬಾ ದಿನಗಳು ಕಾದೆ ಕೊನೆಗೆ.. ಶ್ರೇಯಸ್​ ಅಯ್ಯರ್ ಭಾವುಕ​

    ಸಾಮಾನ್ಯವಾಗಿ ಕ್ರಿಕೆಟ್ ಪಂದ್ಯ ನಡೆಯುವ ಸಮಯದಲ್ಲಿ ನಮ್ಮ ಕಣ್ಣುಗಳು ಪಂದ್ಯದ ಮೇಲಿರುತ್ತದೆ. ಆದರೆ, ಕ್ಯಾಮೆರಾ ಮ್ಯಾನ್‌ ನೋಟ ಮಾತ್ರ ಎರಡೂ ಕಡೆ ಇರುತ್ತದೆ. ಒಂದೆಡೆ ಪ್ರೇಕ್ಷಕರಿಗೆ ಪಂದ್ಯವನ್ನು ತೋರಿಸುತ್ತಾ ಮತ್ತೊಂದೆಡೆ ಕ್ರೀಡಾಂಗಣದಲ್ಲಿರುವ ಸುಂದರ ಹುಡುಗಿಯರನ್ನು ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯುತ್ತಾರೆ. ಪಂದ್ಯ ವೀಕ್ಷಿಸಲು ಬಂದ ಕೆಲ ಮಹಿಳಾ ಅಭಿಮಾನಿಗಳು ನನ್ನನ್ನು ಮದುವೆಯಾಗುತ್ತೀರಾ? ಒಂದು ಅಪ್ಪುಗೆ ಸಿಗಬಹುದಾ? ಎಂದು ನೆಚ್ಚಿನ ಕ್ರಿಕೆಟಿಗರ ಹೆಸರು ಬರೆದು ಫೋಸ್ಟರ್​ ಪ್ರದರ್ಶಿಸುವುದನ್ನು ಕಂಡಿದ್ದೇವೆ.

    ಆದರೆ, ಪಂದ್ಯ ವೀಕ್ಷಿಸಲು ಬಂದ ಯುವತಿಯ ಮೇಲೆಯೇ ಕ್ರಿಕೆಟಿಗನಿಗೆ ಲವ್ ಆಗಿರುವುದನ್ನು ಎಂದಾದರೂ ಕೇಳಿದ್ದೀರಾ? ಕೇಳಿಲ್ಲ ಅಂದ್ರೆ ಇಂದು ಅಂಥದ್ದೊಂದು ಘಟನೆಯನ್ನು ನಿಮ್ಮ ಮುಂದೆ ಇಡುತ್ತೇವೆ ಓದಿ. ಟೀಂ ಇಂಡಿಯಾದ ಸ್ಟಾರ್ ಆಟಗಾರ ಹಾಗೂ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್, ಪಂದ್ಯ ವೀಕ್ಷಿಸಲು ಬಂದಿದ್ದ ಸುಂದರಿಗೆ ಮನಸೋತ್ತಿದ್ದಾರೆ. ಇದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಹಾಗಾದರೆ ಆ ಹುಡುಗಿ ಯಾರು? ಹುಡುಗಿಯನ್ನು ಎಲ್ಲಿ ನೋಡಿದರು? ಎಂಬ ಪ್ರಶ್ನೆಗಳಿಗೆ ನಾವೀಗ ಉತ್ತರ ಕಂಡುಕೊಳ್ಳೋಣ.

    ಶ್ರೇಯಸ್ ಅಯ್ಯರ್, ಟೀಂ ಇಂಡಿಯಾಗೆ ಬಂದ ಕೆಲವೇ ದಿನಗಳಲ್ಲಿ ಪ್ರಮುಖ ಸ್ಟಾರ್​ ಆಟಗಾರನೆಂದ ಹೆಗ್ಗಳಿಕೆ ಗಳಿಸಿದರು. ಪ್ರಸ್ತುತ ಐಪಿಎಲ್ ಸೀಸನ್​ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕರಾಗಿದ್ದಾರೆ. ಖ್ಯಾತ ಹಾಸ್ಯನಟ ಕಪಿಲ್ ಶರ್ಮಾ ಅವರು ಆಯೋಜಿಸಿದ್ದ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಶ್ರೇಯಸ್​ ಅಯ್ಯರ್​ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಅಭಿಮಾನಿಗಳಿಗೆ ಗೊತ್ತಿಲ್ಲದ ಹಲವು ವಿಷಯಗಳನ್ನು ಅಯ್ಯರ್ ಹಂಚಿಕೊಂಡಿದ್ದಾರೆ. ಕಪಿಲ್ ಶರ್ಮಾ ಪ್ರಶ್ನೆಗಳನ್ನು ಕೇಳಿದಾಗ ರೋಹಿತ್ ಮತ್ತು ಅಯ್ಯರ್ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದರು. ಪಂದ್ಯ ನಡೆಯುವಾಗ ಕ್ರೀಡಾಂಗಣದಲ್ಲಿ ಕ್ಯಾಮೆರಾಮನ್‌ಗಳು ಹುಡುಗಿಯರ ಮೇಲೆ ಪೋಕಸ್​ ಮಾಡುವ ವಿಷಯದ ಬಗ್ಗೆಯೂ ಕಪಿಲ್ ಶರ್ಮಾ ಪ್ರಶ್ನೆ ಮಾಡಿದಾಗ ಶ್ರೇಯಸ್ ನೀಡಿದ ಉತ್ತರ ವೈರಲ್​ ಆಗಿದೆ.

    ನಾನು ಮೊದಲ ಐಪಿಎಲ್ ಸೀಸನ್‌ನಲ್ಲಿ ಭಾಗವಹಿಸಿದಾಗ, ಪಂದ್ಯದ ನಡುವೆ ಗುಂಪಿನಲ್ಲಿ ಒಬ್ಬ ಸುಂದರ ಹುಡುಗಿಯನ್ನು ನೋಡಿದೆ. ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ಯುವತಿಯನ್ನು ನೋಡಿ ನಾನು ಕೈ ಬೀಸಿದೆ. ಇದು ಆಕೆಗೆ ಗೊತ್ತಾಯಿತು. ಆ ಸಮಯದಲ್ಲಿ ಫೇಸ್‌ಬುಕ್ ತುಂಬಾ ಜನಪ್ರಿಯವಾಗಿದ್ದ ಕಾರಣ, ಖಂಡಿತ ಮೆಸೇಜ್​ ಬರುತ್ತದೆ ಎಂದು ನಾನು ಯೋಚಿಸಿದ್ದೆ. ತುಂಬಾ ದಿನಗಳು ಕಾದೆ. ಆದರೆ, ಮೆಸೇಜ್ ಬರಲಿಲ್ಲ ಎಂದು ಅಯ್ಯರ್ ತಮ್ಮ ಮೊದಲ ಕ್ರಶ್ ಬಗ್ಗೆ ಭಾವುಕರಾಗಿ ಮಾತನಾಡಿದರು. ಇದನ್ನು ಹೇಳುವಾಗ ಕಾರ್ಯಕ್ರಮಕ್ಕೆ ಬಂದಿದ್ದ ಪ್ರೇಕ್ಷಕರೆಲ್ಲ ಚಪ್ಪಾಳೆ ತಟ್ಟಿದರು. ಕಾರ್ಯಕ್ರಮವು ಪ್ರಸ್ತುತ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. (ಏಜೆನ್ಸೀಸ್​)

    ದೇಹ ತಣ್ಣಗಿಡಲು ಹೊರಗಡೆ ಜ್ಯೂಸ್​ ಕುಡಿಯುತ್ತೀರಾ? ಎಷ್ಟು ಡೇಂಜರ್​ ಗೊತ್ತಾ? ಈ ವಿಚಾರ ನಿಮ್ಗೆ ತಿಳಿದಿರಲೇಬೇಕು

    ವಾರಕ್ಕೆ ಒಮ್ಮೆ ನುಗ್ಗೆಕಾಯಿ ಸಾಂಬರ್ ತಿನ್ನಬೇಕಂತೆ, ಆದ್ರೆ ಅತಿಯಾದ ಸೇವನೆ ಆರೋಗ್ಯಕ್ಕೆ ಅಪಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts