ಇಂಡಿಗೋ ಲಾಭದಲ್ಲಿ ಟೇಕಾಫ್​: 1 ಸಾವಿರ ಕೋಟಿ ನಷ್ಟದಿಂದ 3 ಸಾವಿರ ಕೋಟಿ ಲಾಭಕ್ಕೆ ನೆಗೆತ!

IndiGo (1)
Published on

ನವದೆಹಲಿ: ವರ್ಷದ ಹಿಂದೆ ಒಂದು ಸಾವಿರ ಕೋಟಿ ರೂ. ನಷ್ಟದಲ್ಲಿದ್ದ ಇಂಡಿಗೋ ಲಾಭದಲ್ಲಿ ಭರ್ಜರಿ ಟೇಕಾಫ್​ ಆಗಿದ್ದು, ಇದೀಗ ಅದು 3 ಸಾವಿರ ಕೋಟಿ ಲಾಭಕ್ಕೆ ನೆಗೆತ ಕಂಡಿದೆ.

ಇಂಡಿಗೋ ಸಂಸ್ಥೆಯ ಮೊದಲ ತ್ರೈಮಾಸಿಕದ ಲಾಭ 3,091 ಕೋಟಿ ರೂ. ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿ 1,064 ಕೋಟಿ ರೂ. ನಷ್ಟದಲ್ಲಿತ್ತು.

ಪ್ರಸ್ತುತ ಆದಾಯ 16,683 ಕೋಟಿ ರೂ.ಗೆ ತಲುಪಿದ್ದು, ಈ ಮೂಲಕ ವರ್ಷದಿಂದ ವರ್ಷಕ್ಕೆ ಕಾರ್ಯಾಚರಣೆಯಲ್ಲಿನ ಆದಾಯ ಶೇ. 30 ಏರಿಕೆ ಕಂಡಂತಾಗಿದೆ. ಈ ಲಾಭ ಬಜೆಟ್ ಕ್ಯಾರಿಯರ್​ನ ತ್ರೈಮಾಸಿಕದಲ್ಲಿ ಅತ್ಯಧಿಕ ನಿವ್ವಳ ಲಾಭವಾಗಿದೆ.

ಕಂಪನಿಯ ಬಡ್ಡಿ, ತೆರಿಗೆ, ಸವಕಳಿ, ಭೋಗ್ಯ, ಬಾಡಿಗೆಯಲ್ಲಿನ ಗಳಿಕೆ ಮೊದಲ ತ್ರೈಮಾಸಿಕದಲ್ಲಿ 5,211 ಕೋಟಿ ರೂ. ಆಗಿದ್ದು, ಇದು ಕಳೆದ ವರ್ಷದ ಇದೇ ತ್ರೈಮಾಸಿಕದ 717 ಕೋಟಿ ರೂ.ಗಿಂತ ಹಲವು ಪಟ್ಟು ಹೆಚ್ಚಾಗಿದೆ. ಇಂಡಿಗೋ ಪ್ರಯಾಣಿಕರ ಟಿಕೆಟ್ ಆದಾಯ 14,996 ಕೋಟಿ ರೂ. ಆಗುವ ಮೂಲಕ ಶೇ. 31 ಹೆಚ್ಚಳ ಕಂಡಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net