More

    ನಿದ್ರಿಸಲು ಯಾರಾದರೂ ಅಡ್ಡಿಪಡಿಸಿದರೆ ಅವರ ವಿರುದ್ಧ ಕೇಸು ದಾಖಲಿಸಬಹುದಾ?

    ನವದೆಹಲಿ: ರೈಟ್ ಟು ಎಜುಕೇಷನ್, ರೈಟ್ ಟು ಇನ್​ಫಾರ್ಮೇಷನ್ ಮುಂತಾದವನ್ನು ಕೇಳಿದ್ದೇವೆ. ಹಾಗೆಯೇ ರೈಟ್ ಟು ಸ್ಲೀಪ್ ಇದ್ದರೆ ಹೇಗಿರಬಹುದು ಎಂದು ಯಾರಾದರೂ ಅಂದುಕೊಂಡಿದ್ದರೆ, ಖಂಡಿತ ಅವರಿಗೆ ಇಲ್ಲೊಂದು ಸಂತಸದ ಸಂಗತಿ ಇದೆ. ಹೌದು.. ರೈಟ್ ಟು ಸ್ಲೀಪ್ ಕೂಡ ಇದೆ!

    ಸಂವಿಧಾನದ ಅನುಚ್ಛೇದ 21ರ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನು ಯಾವುದೇ ತೊಂದರೆಯಿಲ್ಲದೆ ಶಾಂತಿಯುತವಾಗಿ ಮಲಗಲು ಅರ್ಹನಾಗಿದ್ದಾನೆ. ಅಂದರೆ ನಿದ್ರೆಯ ಹಕ್ಕನ್ನು ಅನುಚ್ಛೇದ 21ರ ‘ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ’ದಡಿ ಮೂಲಭೂತ ಹಕ್ಕು ಎಂದು ಗುರುತಿಸಲಾಗಿದೆ.

    ಇದನ್ನೂ ಓದಿ: ರಾತ್ರಿ ಲೈಟ್ ಆನ್​ ಮಾಡಿಟ್ಟು ಮಲಗಿದರೆ ಏನಾಗುತ್ತೆ?; ಆರೋಗ್ಯದ ಮೇಲೆ ಏನು ಪರಿಣಾಮ?

    ಪ್ರಕರಣವೊಂದರ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ವಿಷಯವನ್ನು ಒತ್ತಿ ಹೇಳಿದೆ. ದೆಹಲಿಯಲ್ಲಿ 2012ರಲ್ಲಿ ನಡೆದ ಬಾಬಾ ರಾಮದೇವ್ ಅವರ ರ್ಯಾಲಿ ಸಂದರ್ಭ ಪೊಲೀಸರು ನಿದ್ರಿಸುತ್ತಿದ್ದ ಜನರ ಮೇಲೆ ದಬ್ಬಾಳಿಕೆ ನಡೆಸಿದ ಪ್ರಕರಣದ ವಿಚಾರಣೆ ವೇಳೆ, ‘ಪೊಲೀಸರ ಕ್ರಮವು ಮೂಲಭೂತ ಹಕ್ಕಿನ ಉಲ್ಲಂಘನೆಗೆ ಕಾರಣವಾಯಿತು’ ಎನ್ನುವ ಮೂಲಕ ಸುಪ್ರೀಂಕೋರ್ಟ್ ಈ ಅಂಶವನ್ನು ಉಲ್ಲೇಖಿಸಿದೆ. ಅಲ್ಲದೆ ನಿದ್ರೆ ಮಾನವನ ಮೂಲಭೂತ ಹಕ್ಕು ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.

    ಇದನ್ನೂ ಓದಿ: ಈ ಸಮಯದಲ್ಲಿ ಮಲಗಿದರೆ ಹೃದಯಾಘಾತ ಸಾಧ್ಯತೆ ಕಡಿಮೆ ಅಂತೆ; ಅಧ್ಯಯನದಲ್ಲಿ ಬಯಲಾಯಿತು ಹೃದಯದ ಆರೋಗ್ಯ ಮಾಹಿತಿ

    ಸಯೀದ್ ಮಕ್ಸೂದ್ ಅಲಿ ಹಾಗೂ ಮಧ್ಯಪ್ರದೇಶ ರಾಜ್ಯ ಸರ್ಕಾರ ನಡುವಿನ ಪ್ರಕರಣದಲ್ಲಿ ಕೂಡ ಇಂಥದ್ದೇ ಅಭಿಪ್ರಾಯ ವ್ಯಕ್ತವಾಗಿದೆ. ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನು ಯೋಗ್ಯ ವಾತಾವರಣದಲ್ಲಿ ವಾಸಿಸಲು ಅರ್ಹನಾಗಿದ್ದಾನೆ ಮತ್ತು ರಾತ್ರಿಯಲ್ಲಿ ಶಾಂತಿಯುತವಾಗಿ ಮಲಗುವ ಹಕ್ಕನ್ನು ಹೊಂದಿದ್ದಾನೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ. –ಏಜೆನ್ಸೀಸ್

    ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts