ದಿಲ್ಲಿಯಲ್ಲಿ ಹೆಚ್ಚಿದ ವಾಯು ಮಾಲಿನ್ಯ; ಮನೆಯಿಂದಲೇ ಕೆಲಸಕ್ಕೆ ಸಲಹೆ

Delhi
Published on

ನವದೆಹಲಿ: ಒಂದೆಡೆ ಚಳಿ ಪ್ರಮಾಣ ವ್ಯಾಪಕಗೊಂಡಿದ್ದರೆ ಮತ್ತೊಂದೆಡೆ ವಾಯು ಮಾಲಿನ್ಯ ಕೂಡ ಅಷ್ಟೇ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಕೇಂದ್ರ ಸರ್ಕಾರದ ಉನ್ನತ ಸಮಿತಿ ತೀರಾ ತುರ್ತು ಅಗತ್ಯವಿಲ್ಲದ ಕಟ್ಟಡ ನಿರ್ಮಾಣ ಅಥವ ಕಟ್ಟಡ ನೆಲಸಮದ ಕಾಮಗಾರಿಗಳಿಗೆ ಶುಕ್ರವಾರ ತಾತ್ಕಾಲಿಕ ತಡೆ ನೀಡಿದೆ. ಜಲ್ಲಿ ಕ್ರಷಿಂಗ್, ಗಣಿಗಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈ ಹಿನ್ನೆಲೆಯಲ್ಲಿ ಸಾಧ್ಯವಿರುವವರು ಮನೆಯಿಂದಲೇ ಕೆಲಸ ಮಾಡುವಂತೆ ದೆಹಲಿ ಸರ್ಕಾರ ಸೂಚಿಸಿದ್ದು, ಕಾರ್ ಪೂಲಿಂಗ್ ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದೆ.

ದೆಹಲಿಯಲ್ಲಿ ಶುಕ್ರವಾರ 24 ಗಂಟೆಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ 399ರಷ್ಟಿತ್ತು. 201 ಮತ್ತು 300ರ ನಡುವಿನ ವಾಯು ಗುಣಮಟ್ಟವನ್ನು ಕಳಪೆ 301 ಮತ್ತು 400 ತೀವ್ರ ಕಳಪೆ ಮತ್ತು 401 ಮತ್ತು 500 ಕಳವಳಕಾರಿ ಎಂದು ಪರಿಗಣಿಸಲಾಗುತ್ತದೆ. ಒಂದೆರಡು ದಿನಗಳಲ್ಲಿ ವಾಯುಗುಣಮಟ್ಟ ಮತ್ತಷ್ಟು ಕುಸಿಯುವ ಸಾಧ್ಯತೆ ಎಂದು ಅಂದಾಜಿಸಲಾಗಿದೆ. 2022ರಲ್ಲಿ ದೆಹಲಿಯಲ್ಲಿ ಆರು ದಿನ ತೀವ್ರ ಕಳಪೆಯ ವಾಯು ಮಾಲಿನ್ಯ ದಾಖಲಾಗಿತ್ತು. ಇದು ಏಳು ವರ್ಷದಲ್ಲೇ ಅತ್ಯಂತ ಕಡಿಮೆ ಮಟ್ಟದ ಅಂಕಿಅಂಶ ಕೂಡ ಆಗಿತ್ತು ಎಂದು ಕೇಂದ್ರೀಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net