ಹೊಸ ವರ್ಷಕ್ಕೆಂದು ಗೋವಾ ತೆರಳುತ್ತಿದ್ದವರಿಗೆ ಮಾರ್ಗ ಮಧ್ಯೆ ಶಾಕ್; ಕೂದಲೆಳೆ ಅಂತರದಲ್ಲಿ ಪಾರಾದ್ರು ಟೆಕ್ಕಿಗಳು!

Car Fire
Published on

ತುಮಕೂರು: ಎಲ್ಲೆಡೆಯೂ ನ್ಯೂ ಇಯರ್ ಪಾರ್ಟಿ ರಂಗೇರುತ್ತಿದೆ. ಹೊಸ ಸಂವತ್ಸವರನ್ನು ಬರಮಾಡಿಕೊಳ್ಳಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಅದರಲ್ಲೂ ಗೋವಾದಲ್ಲಿ ಹೊಸ ವರ್ಷದ ಪಾರ್ಟಿ ಸದ್ದು ಜೋರಾಗಿರುತ್ತದೆ. ಸಮುದ್ರ ಕಿನಾರೆಯಲ್ಲಿ ಹೊಸ ವರ್ಷದ ನಿಮಿತ್ತ ದೇಶ, ವಿದೇಶಗಳಿಂದ ಬಂದು ಒಟ್ಟಾಗುತ್ತಾರೆ.

ಇದೀಗ ಹೊಸ ವರ್ಷದ ಪಾರ್ಟಿ ಗುಂಗಿನಲ್ಲಿ ಗೋವಾಕ್ಕೆ ತೆರಳುತ್ತಿದ್ದ ನಾಲ್ವರು ಟೆಕ್ಕಿಗಳು ಕೂದಲೆಳೆ ಅಂತರದಲ್ಲಿ ಸಾವಿನ ದವಡೆಯಿಂದ ಪಾರಾಗಿ ನಿಟ್ಟುಸಿರು ಬಿಟ್ಟಿದ್ದಾರೆ. ದಾರಿ ಮಧ್ಯೆ ಕಾರಿನಿ ಸ್ಟೇರಿಂಗ್ ಲಾಕ್ ಆಗಿದೆ ಎಂದು ಕೆಳಗಿಳಿದು ಪರಿಶೀಲಿಸಿದ್ದಾರೆ.

ಪರಿಶೀಲಿಸುತ್ತಿದ್ದಂತೆ ಏಕಾಏಕಿ ಕಾರಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಆವರಿಸಿಕೊಳ್ಳುತ್ತಿದ್ದಂತೆ ರಸ್ತೆ ಬದಿ ಕಾರು ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಆಂಧ್ರ ಮೂಲದ ಪ್ರಾಯಾಣಿಕರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ತುಮಕೂರು ಜಿಲ್ಲೆ ಶಿರಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48ರ ದೊಡ್ಡ ಆಲದಮರದ ಬಳಿ ಈ ಘಟನೆ ನಡೆದಿದೆ. ಕಾರಿನ ಬ್ಯಾಟರಿಯಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಆಗಿರೋ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net