

ಬೆಂಗಳೂರು: ನ್ಯೂ ಇಯರ್ ಸಂಭ್ರಮದ ಹೆಸರಿನಲ್ಲಿ ಯುವ ಜನತೆ ಪಾರ್ಟಿಗಳಲ್ಲಿ ಮಿಂದೇಳುತ್ತಿದ್ದಾರೆ. ಬಹುಸಂಖ್ಯೆಯಲ್ಲಿ ಜನರು ಮೋಜು, ಮಸ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ವಾರಾಂತ್ಯ ಆಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಂಭ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಇವರನ್ನೆಲ್ಲಾ ನಿಯಂತ್ರಿಸಲು ಪೊಲೀಸ್ ಸಿಬ್ಬಂದಿಗಳು ಶ್ರಮ ಪಡುತ್ತಿದ್ದಾರೆ.
ನ್ಯೂ ಇಯರ್ ಸೆಲಿಬ್ರೇಷನ್ಗೆ ಕ್ಷಣಗಣನೆ ಆರಂಭವಾಗಿದ್ದು, ನಗರವೆಲ್ಲಾ ಬಣ್ಣ ಬಣ್ಣದ ವಿದ್ಯತ್ ದೀಪಗಳಿಂದ ಅಲಂಕೃತವಾಗಿದೆ. ಅದರಲ್ಲೂ ಬೆಂಗಳೂರಿನ ಬ್ರಿಗೇಡ್ ರೋಡ್, ಎಂ.ಜಿ.ರೋಡ್, ಚರ್ಚ್ ಸ್ಟ್ರೀಟ್ ಮುಂತಾದ ಕಡೆಗಳಲ್ಲಿ ನ್ಯೂ ಇಯರ್ ಪಾರ್ಟಿ ಸದ್ದು ಜೋರಾಗಿರುತ್ತದೆ. ಇದೀಗ ಚರ್ಚ್ ಸ್ಟ್ರೀಟ್ನಲ್ಲಿ ಯುವತಿಯೊಬ್ಬಳು ಫ್ರೀ ಹಗ್ (Free hug) ಅಭಿಯಾನ ನಡೆಸಿ ಸುದ್ದಿಯಾಗಿದ್ದಾಳೆ.
ಯುವತಿಯೊಬ್ಬಳು Free Hug ಎಂದು ಪೋಸ್ಟರ್ ಹಿಡಿದು ನಿಂತಿದ್ದಾಳೆ. ಬೋರ್ಡ್ ನೋಡಿದ ಕೆಲ ಯುವಕ-ಯುವತಿಯರು ಮುಂದೆ ಬಂದು ತಬ್ಬಿಕೊಂಡಿದ್ದಾರೆ. ಇದನ್ನು ಗಮನಿಸಿದ ಪೊಲೀಸರು ಕೂಡಲೇ ಎಚ್ಚೆತ್ತುಕೊಂಡು ಯುವತಿಗೆ ಬುದ್ಧಿ ಹೇಳಿದ್ದಾರೆ. ಈ ಮೂಲಕ ಅನಾಹುತ ಆಗುವ ಮುನ್ನ ಕಬ್ಬನ್ ಪಾರ್ಕ್ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.