

ನವದೆಹಲಿ: ಭಾರತದ ಹವಾಮಾನ ಇಲಾಖೆ (IMD) ಪ್ರಕಟಿಸಿರುವ ವರದಿ ಅನುಸಾರ, ಮುಂದಿನ 4-5 ದಿನಗಳಲ್ಲಿ ಭಾರತದ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ತಿಳಿಸಿದೆ.
ಭಾರತದ 10 ರಾಜ್ಯಗಳಿಗೆ ಭಾರೀ ಮಳೆಯ ಹಿನ್ನಲೆ ಇದೀಗ ಮುನ್ಸೂಚನೆ ನೀಡಿದ್ದು, ಸಿಕ್ಕಿಂ, ಉತ್ತರಾಖಂಡ, ಬಿಹಾರ, ವಾಯುವ್ಯ ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದ ಕೆಲವು ಪ್ರದೇಶಗಳಲ್ಲಿ ಮುಂದಿನ 4-5 ದಿನಗಳವರೆಗೆ ಅಧಿಕ ಮಳೆಯಾಗಲಿದ್ದು, ಈಶಾನ್ಯ ಭಾಗದಲ್ಲಿ ಮಳೆಯ ಸಂಭವ ಹೆಚ್ಚಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಹರಿಯಾಣ, ಚಂಡೀಗಢ, ಪಂಜಾಬ್, ಪೂರ್ವ ರಾಜಸ್ಥಾನ ಮತ್ತು ಜಮ್ಮುವನ್ನು ಒಳಗೊಂಡಿರುವ ವಾಯುವ್ಯ ಭಾರತದಲ್ಲಿ ಆಗಸ್ಟ್ 9 ರವರೆಗೆ ಲಘುವಾಗಿ ಮಧ್ಯಮ ಮಳೆಯಾಗುವ ಸಂಭವವಿದ್ದು, ಆಗಸ್ಟ್ 8 ರವರೆಗೆ, ಪೂರ್ವ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಪ್ರತ್ಯೇಕವಾದ ಭಾರೀ ಮಳೆಯನ್ನು ನಿರೀಕ್ಷಿಸಲಾಗಿದೆ,(ಏಜೆನ್ಸೀಸ್).