More

    ಈ ಚಿತ್ರ ನನಗೆ ಮರು ಜನ್ಮ ನೀಡಿದೆ; ಭಾವುಕರಾದ ನಿರ್ದೇಶಕ ಮೆಹರ್​ ರಮೇಶ್​

    ಆಂಧ್ರಪ್ರದೇಶ: ಮೆಗಾ ಸ್ಟಾರ್​ ಚಿರಂಜೀವಿ ನಟನೆಯ ‘ಭೋಲಾ ಶಂಕರ್’  ಚಿತ್ರದ ಪ್ರಿ-ರಿಲೀಸ್​ ಈವೆಂಟ್​ನಲ್ಲಿ ಮಾತನಾಡಿದ ನಿರ್ದೇಶಕ ಮೆಹರ್ ರಮೇಶ್, ಈ ಚಿತ್ರ ನನಗೆ ಮರು ಜನ್ಮ ನೀಡಿದೆ ಎಂದು ಹೇಳುವ ಮೂಲಕ ವೇದಿಕೆಯ ಮೇಲೆ ಭಾವುಕರಾಗಿದ್ದಾರೆ.

    ಇದನ್ನೂ ಓದಿ: ಗ್ರಾ.ಪಂ. ಅಧ್ಯಕ್ಷರಾದ ಮುಸ್ಲಿಂ ವ್ಯಕ್ತಿ; 19 ಜನರಿಂದ ರಾಜೀನಾಮೆ!

    ಭೋಕಾ ಶಂಕರ್ ಚಿತ್ರ ವೇದಾಲಂನ ರಿಮೇಕ್ ಆಗಿದ್ದು, ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ ಭಾನುವಾರ ಹೈದರಾಬಾದ್‌ನಲ್ಲಿ ಯಶಸ್ವಿಯಾಗಿ ನಡೆಯಿತು. ಈ ವೇಳೆ ವೇದಿಕೆಯ ಮೇಲೆ ಸಿನಿಮಾ ಕುರಿತು ಮಾತನಾಡಿದ ನಿರ್ದೇಶಕ ಮೆಹರ್ ರಮೇಶ್, ಚಿರಂಜೀವಿ ಅವರ ಫಿಲಂ ಅನ್ನು ನಿರ್ದೇಶಿಸುವ ಅದೃಷ್ಟ ನನ್ನಗೆ ಸಿಕ್ಕಿದ್ದು ಬಹಳ ಸಂತೋಷವಾಗಿದೆ. ಒಬ್ಬ ನಿರ್ದೇಶಕನಾಗಿ ಭೋಲಾ ಶಂಕರ್ ನನಗೆ ಪುನರ್ಜನ್ಮ ನೀಡಿದೆ ಎಂದು ಹೇಳಿದರು.

    ಇದನ್ನೂ ಓದಿ:  ನಟ ವಿಜಯರಾಘವೇಂದ್ರ ಪತ್ನಿಗೆ ವಿದೇಶದಲ್ಲಿ ಹೃದಯಾಘಾತ; ವಿಧಿವಶ…

    ಚಿತ್ರಕ್ಕಾಗಿ ಕೆಲಸ ಮಾಡಿದವರೆಲ್ಲರೂ ಮೆಗಾಸ್ಟಾರ್​ನ ಅಪ್ಪಟ ಅಭಿಮಾನಿಗಳು. ನನಗೆ ಅವಕಾಶ ಕೊಟ್ಟ ಚಿರಂಜೀವಿ ಸರ್​ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಎಂದು ಹೇಳುವ ಮುಖೇನ ವೇದಿಕೆ ಮೇಲೆ ಭಾವುಕರಾದರು. ಸಿನಿಮಾ ಇದೇ ಆಗಸ್ಟ್ 11 ರಂದು ಸಿನಿಪ್ರೇಕ್ಷಕರು ಮತ್ತು ಅಭಿಮಾನಿಗಳ ಮುಂದೆ ಹಾಜರಾಗಲಿದೆ. ಚಿತ್ರದಲ್ಲಿ ಕೀರ್ತಿ ಸುರೇಶ್, ತಮನ್ನಾ ಭಾಟಿಯಾ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ,(ಏಜೆನ್ಸೀಸ್).

    ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ!; ಕೋಚ್​ನ ಗಾಜು ಪುಡಿ ಮಾಡಿದ ಕಿಡಿಗೇಡಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts